Top

COVID 19 World Updates: ಜಗತ್ತಿನಾದ್ಯಂತ ಕೋವಿಡ್​ 19ಗೆ 10 ಲಕ್ಷಕ್ಕೂ ಹೆಚ್ಚು ಮಂದಿ ಸಾವು

ವಿಶ್ವದಲ್ಲಿ 83,11,735 ಸಕ್ರಿಯ ಪ್ರಕರಣಗಳಿದ್ದು, 68,735 ಮಂದಿಯ ಸ್ಥಿತಿ ಗಂಭೀರವಾಗಿದೆ.

COVID 19 World Updates: ಜಗತ್ತಿನಾದ್ಯಂತ ಕೋವಿಡ್​ 19ಗೆ 10 ಲಕ್ಷಕ್ಕೂ ಹೆಚ್ಚು ಮಂದಿ ಸಾವು
X

ಅಮೆರಿಕಾ: ಜಗತ್ತಿನಲ್ಲಿ ಈವರೆಗೆ ಕೋವಿಡ್‌ನಿಂದಾಗಿ 10,75,942 ಮಂದಿ ಮೃತಪಟ್ಟಿದ್ದು 2,59,99,799 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ 3,74,08,593 ಎಂದು ಅಮೆರಿಕದ ಮೂಲದ ಕೋವಿಡ್‌ ಟ್ರ್ಯಾಕರ್‌ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವದಲ್ಲಿ 83,11,735 ಸಕ್ರಿಯ ಪ್ರಕರಣಗಳಿದ್ದು, 68,735 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಕೋವಿಡ್‌ ಟ್ರ್ಯಾಕರ್‌ ವೆಬ್‌ಸೈಟ್‌ ವರ್ಲ್ಡೋಮೀಟರ್​ನಲ್ಲಿ ನಮೂದಿಸಲಾಗಿದೆ.

ವಿಶ್ವದಲ್ಲಿ ಅತಿಹೆಚ್ಚು ಕೊರೊನಾ ವೈರಸ್‌ ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿ, ಭಾರತ ಎರಡನೇ ಸ್ಥಾನದಲ್ಲಿ, ಬ್ರೆಜಿಲ್‌ ಮೂರನೇ ಸ್ಥಾನದಲ್ಲಿ ಮುಂದುವರೆದಿವೆ. ಅಮೆರಿಕದಲ್ಲಿ 77,62,546, ಭಾರತದಲ್ಲಿ 70,53,806 ಹಾಗೂ ಬ್ರೆಜಿಲ್‌ನಲ್ಲಿ ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ 50, 94,979ಕ್ಕೆ ಏರಿಕೆಯಾಗಿದೆ.

ಕೊರೊನಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯು ಮುಂದುವರೆದಿದ್ದು ಭಾರತದಲ್ಲಿ ಬರುವ ಜೂನ್‌ ಅಂತ್ಯಕ್ಕೆ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Next Story

RELATED STORIES