Top

ಕಮಲಾ ಹ್ಯಾರಿಸ್​ ವಿರುದ್ಧ ಡೊನಾಲ್ಡ್​ ಟ್ರಂಪ್​ ವಾಗ್ದಾಳಿ

ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್‌ ಅವರು ಗೆದ್ದರೆ, ಕೇವಲ ಒಂದೇ ತಿಂಗಳಲ್ಲಿ ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷ ಸ್ಥಾನವನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಕಮಲಾ ಹ್ಯಾರಿಸ್​ ವಿರುದ್ಧ ಡೊನಾಲ್ಡ್​ ಟ್ರಂಪ್​ ವಾಗ್ದಾಳಿ
X

ವಾಷಿಂಗ್ಟನ್‌ ಡಿಸಿ: ಅಮೆರಿಕ ಅಧ್ಯಕ್ಷೀಯ ಎಲೆಕ್ಷನ್​ನಲ್ಲಿ ಒಂದು ವೇಳೆ ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್‌ ಅವರು ಗೆದ್ದರೆ, ಕೇವಲ ಒಂದೇ ತಿಂಗಳಲ್ಲಿ ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷ ಸ್ಥಾನವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಡೊನಾಲ್ಡ್‌ ಟ್ರಂಪ್‌ ಅವರು ಗುರುವಾರ ಭವಿಷ್ಯ ನುಡಿದಿದ್ದಾರೆ.

ಅಮೆರಿಕ ಉಪಾಧ್ಯಕ್ಷರ ಸ್ಥಾನದ ಅಭ್ಯರ್ಥಿಗಳಾದ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಮತ್ತು ರಿಪಬ್ಲಿಕನ್‌ ಪಕ್ಷದ ಮೈಕ್‌ ಪೆನ್ಸ್‌ ಬುಧವಾರ ಚರ್ಚೆಯಲ್ಲಿ ಭಾಗಿಯಾಗಿದ್ದರು. ಸರ್ಕಾರ ಕೋವಿಡ್‌ ನಿರ್ವಹಿಸಿದ ರೀತಿ, ನಿರುದ್ಯೋಗ ಸಮಸ್ಯೆ, ಚೀನಾ ಸಂಬಂಧ ಸೇರಿದಂತೆ ದೇಶದ ಅನೇಕ ಸಮಸ್ಯೆಗಳ ಕುರಿತು ಕಮಲಾ ಹ್ಯಾರಿಸ್‌ ಅವರು, ಡೊನಾಲ್ಡ್‌ ಟ್ರಂಪ್‌ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡೆನ್‌ ಅವರು ಕಮಲಾ ಹ್ಯಾರಿಸ್‌ ಅವರು ಚರ್ಚೆಯಲ್ಲಿ ಪ್ರಸ್ತಾಪಿಸಿದ ವಿಷಯವನ್ನು ಶ್ಲಾಂಘಿಸಿದ್ದರು. ಜೊತೆಗೆ ಚರ್ಚೆಯಲ್ಲಿ ಕಮಲಾ ಹ್ಯಾರಿಸ್​ ಅವರ ವಿಷಯಕ್ಕೆ ಪ್ರತ್ಯುತ್ತರ ನೀಡಿದ ಮೈಕ್​ ಪೆನ್ಸ್​​ ಅವರನ್ನು ಟ್ರಂಪ್​ ಕೊಂಡಾಡಿದ್ದಾರೆ.

ಈ ಬಗ್ಗೆ ಫಾಕ್ಸ್​​ ನ್ಯೂಸ್​ ವಾಹಿನಿಯ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿರುವ ಟ್ರಂಪ್ ಅವರು, ಬುಧವಾರ ರಾತ್ರಿ ನಡೆದದ್ದು ಚರ್ಚೆಯಲ್ಲಿ ಕಮಲಾ ವಿಚಿತ್ರವಾಗಿ ವರ್ತಿಸುತ್ತಿದ್ದರು. ಆಕೆ ಒಬ್ಬ ಕಮ್ಯುನಿಸ್ಟ್‌. ಸೆನೆಟರ್‌ ಬರ್ನಿ ಸ್ಯಾಂಡರ್ಸ್‌ರಂತೆ ಆಕೆ ಕೂಡ ಎಡಪಂಥದವರು ಎಂದು ವಾಗ್ದಾಳಿ ನಡೆಸಿದ್ದರು.

ನಾನು ಜೋ ಬೈಡೆನ್‌ ಪಕ್ಕದಲ್ಲಿದ್ದ ಗಮನಿಸಿದ್ದೇನೆ. ಜೋ ಬೈಡೆನ್​ ಅಧ್ಯಕ್ಷರಾಗಿ ಎರಡು ತಿಂಗಳೂ ಉಳಿಯುವುದಿಲ್ಲ ಇದು ನನ್ನ ಅಭಿಪ್ರಾಯ ಎಂದು ತಿಳಿಸಿದ್ದಾರೆ.

Next Story

RELATED STORIES