Top

COVID 19 World Updates : ವಿಶ್ವದಾದ್ಯಂತ 2.93 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖ

ವಿಶ್ವದಾದ್ಯಂತ 2.93 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ

COVID 19 World Updates : ವಿಶ್ವದಾದ್ಯಂತ 2.93 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖ
X

ಅಮೆರಿಕ: ರಷ್ಯಾದಲ್ಲಿ ಒಂದೇ ದಿನದಲ್ಲಿ 15,150 ಹೊಸ ಕೋವಿಡ್‌-19 ಪ್ರಕರಣಗಳು ಪತ್ತೆಯಾಗಿದ್ದು, ಮಾಸ್ಕೊದಲ್ಲಿ 5,049 ಪ್ರಕರಣಗಳು ಪತ್ತೆ ಆಗಿರುವುದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 13,69,313ಕ್ಕೆ ಏರಿಕೆ ಕಂಡಿದ್ದು, ಈ ಅವಧಿಯಲ್ಲಿ ಸೋಂಕಿನಿಂದ 232 ಮಂದಿ ಸಾವಿಗೀಡಾಗಿದ್ದಾರೆ ಹಾಗೂ ಈವರೆಗೂ 23,723 ಮಂದಿ ಬಲಿಯಾಗಿದ್ದಾರೆ.

ಜಗತ್ತಿನಾದ್ಯಂತ 3.92 ಕೋಟಿಗೂ ಅಧಿಕ ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 11.03 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರ್ಡೊ ಮೀಟರ್‌ ವೆಬ್‌ಸೈಟ್‌ ವರದಿ ಮಾಡಿದೆ.

ಸದ್ಯ ಈವರೆಗೆ ವಿಶ್ವದಾದ್ಯಂತ 2.93 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 87,04,038 ಕೋವಿಡ್​ ಸಕ್ರಿಯ ಪ್ರಕರಣಗಳಿವೆ. ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ ಒಟ್ಟು 82,16,315 ಮದಿಗೆ ಕೊರೊನಾ ದೃಢಪಟ್ಟಿದೆ. ಈವರೆಗೂ 2,22,717 ಮಂದಿ ಸಾವಿಗೀಡಾಗಿದ್ದಾರೆ. 53,20,139 ಮಂದಿ ಈವರೆಗೆ ಗುಣಮುಖರಾಗಿದ್ದಾರೆ.

ಕೋವಿಡ್​ 19 ವೈರಸ್​ ಲಿಸ್ಟ್​ನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ 73,70,468 ಪ್ರಕರಣಗಳು, ಬ್ರೆಜಿಲ್‌ನಲ್ಲಿ 51,70,996, ಕೊಲಂಬಿಯಾದಲ್ಲಿ 9,36,982, ಸ್ಪೇನ್‌ನಲ್ಲಿ 9,72,958 ಮತ್ತು ಅರ್ಜೆಂಟಿನಾದಲ್ಲಿ 9,49,063 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

Next Story

RELATED STORIES