Top

ಅಮೆರಿಕಾದ ವಿಸ್ಕಾನ್ಸಿನ್‌ ಮಾಲ್‌ನಲ್ಲಿ ಗುಂಡಿನ ದಾಳಿ, 8 ಮಂದಿಗೆ ಗಾಯ

ಅಮೆರಿಕಾದ ವಿಸ್ಕಾನ್ಸಿನ್‌ ಮಾಲ್‌ನಲ್ಲಿ ಗುಂಡಿನ ದಾಳಿ, 8 ಮಂದಿಗೆ ಗಾಯ
X

ವಾಷಿಂಗ್ಟನ್: ಅಮೆರಿಕದ ಪ್ರಮುಖ ವಿಸ್ಕಾನ್ಸಿನ್‌ನ ಶಾಪಿಂಗ್ ಮಾಲ್ ಒಂದರಲ್ಲಿ ಗುಂಡಿನ ದಾಳಿ ನಡೆದಿದ್ದು, 8 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ವಿಸ್ಕಾನ್ಸಿನ್ ಮೇಫೇರ್ ಶಾಪಿಂಗ್ ಮಾಲ್‌ನಲ್ಲಿ ಈ ದಾಳಿ ಸಂಭವಿಸಿದ್ದು, ಸ್ಥಳಕ್ಕೆ ನಮ್ಮ ಅಧಿಕಾರಿಗಳು ತೆರಳಿದ್ದಾರೆ. ಸ್ಥಳೀಯ ಪೊಲೀಸರು ಅವರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಎಫ್‌ಬಿಐ ಮತ್ತು ಮಿಲ್ವಾಕೀ ಕೌಂಟಿ ಶೆರಿಫ್‌ ಕಚೇರಿ ಟ್ವಿಟ್​ ಮಾಡಿ ತಿಳಿಸಿದೆ.


ಇನ್ನು ತುರ್ತು ಕಾರ್ಯ ಪಡೆ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದಾಗ ದಾಳಿಕೋರ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವೌವಾಟೋಸಾ ಪೊಲೀಸರು ತಮ್ಮ ಪ್ರಕರಣೆಯಲ್ಲಿ ತಿಳಿಸಿದೆ.

ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗಳುಗಳ ಸ್ಥಿತಿಗತಿಗಳ ಬಗ್ಗೆ ತಕ್ಷಣಕ್ಕೆ ಮಾಹಿತಿ ದೊರೆತಿಲ್ಲ. ಆದರೆ, ಯಾರೂ ಕೂಡ ಮಾರಣಾಂತಿಕವಾಗಿ ಗಾಯಗೊಂಡಿಲ್ಲ ಎಂದು ವೌವಾಟೋಸಾ ಮೇಯರ್ ಡೆನ್ನಿಸ್ ಮೆಕ್‌ಬ್ರೈಡ್ ತಿಳಿಸಿದ್ದಾರೆ.

Next Story

RELATED STORIES