Top

ನಾನು ಹತ್ತು ಕೋಟಿ ಪಡೆದಿದ್ದು ಸಾಬೀತು ಮಾಡಲಿ

ಏಳು ಬಾರಿ ಜೆಡಿಎಸ್ ಕೈ ಹಿಡಿದ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡೋದು ತಪ್ಪಾ(?)

X

ಬೀದರ್: ಅವರಷ್ಟು ಕೀಳು ಮಟ್ಟಕ್ಕೆ ನಾನು ಇಳಿಯೋಲ್ಲಾ ಅವರ ಬಗ್ಗೆ ಮಾತನಾಡೋಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಬುಧವಾರ ಹೇಳಿದರು.

ಜೆಡಿಎಸ್ ಮುಸ್ಲಿಂ ವಿರೋಧಿ ಪಕ್ಷ ಜಮೀರ್ ಅಹ್ಮದ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜನತಾದಳಕ್ಕೆ ಬಂದಾಗ ಅವರ ಬಾಯಿಂದಲೇ ಹೇಳಿದ್ದಾರೆ. ಜನತಾದಳ ನಾಯಕರುಗಳನ್ನ ತಯಾರು ಮಾಡುವ ಫ್ಯಾಕ್ಟರಿ ಅಂತಾ ಅವರೇ ಹೇಳಿದ್ದಾರೆ. ಏಳು ಬಾರಿ ಜೆಡಿಎಸ್ ಕೈ ಹಿಡಿದ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡೋದು ತಪ್ಪಾ(?) ಎಂದರು.

ಇನ್ನು ಜಮೀರ್ ಅಹ್ಮದ್ ಅವರಿಗೆ ಗೌರವ ಇದ್ದರೆ ನಾನು ಹತ್ತು ಕೋಟಿ ಪಡೆದಿದ್ದು ಸಾಬೀತು ಮಾಡಲಿ. ಇದಕ್ಕಿಂತೂ ಹೆಚ್ಚು ಏನು ಹೇಳೊಲ್ಲಾ. ಆ ದೇವರೆ ಎಲ್ಲಾ ನೋಡುತ್ತಾರೆ ಎಂದು ಹೆಚ್ಡಿಕೆ ಮಾತನಾಡಿದ್ದಾರೆ.

Next Story

RELATED STORIES