Top

ಹಾಸನ: ಯಶ್ ಬೆಂಬಲಿಗ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ

ಈ ಎಲ್ಲ ಬೆಳೆವಣಿಗೆಗಳು ನಡೆದ ಬಳಿಕ ರಾಕಿಂಗ್​ ಸ್ಟಾರ್​ ಯಶ್ ಅವರು ದುದ್ದ ಪೊಲೀಸ್​ ಠಾಣೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ

X

ಹಾಸನ: ಜಮೀನಿಗೆ ಓಡಾಡುವ ದಾರಿಯ ವಿಚಾರದಲ್ಲಿ ತಿಮ್ಲಾಪುರ ಗ್ರಾಮಸ್ಥರು ಮತ್ತು ಯಶ್ ತಾಯಿಯ ನಡುವೆ ಗಲಾಟೆ ನಡೆದಿದೆ. ಹೀಗಾಗಿ ದುದ್ದ ಪೊಲೀಸರು ಇಂದು ಜಮೀನಿನ ಬಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಯಶ್ ಬೆಂಬಲಿಗ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಜರುಗಿದ್ದು, ಸದ್ಯ ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿದ್ದಾರೆ.

ಯಶ್ ಅವರ ಜಮೀನಿಗೆ ಓಡಾಡಲು ಗ್ರಾಮಸ್ಥರು ದಾರಿ ಕೊಟ್ಟಿದ್ದೇವೆ. ಈಗ ಓಡಾಡಲು ಬಿಟ್ಟಿರುವ ಜಾಗವಲ್ಲದೇ ಬೇರೆ ಜಾಗದಲ್ಲೂ ಓಡಾಡಲು ಅವಕಾಶ ಕೊಡುವಂತೆ ಯಶ್ ತಾಯಿ ದೌರ್ಜನ್ಯ ಮಾಡುತ್ತಿದ್ದಾರೆ. ಆದರೆ, ನಾವು ಓಡಾಡಲು ಅವರ ಜಮೀನಿನಲ್ಲಿ ಸ್ವಲ್ಪ ಜಾಗ ಬಿಡಿ ಅಂದರೆ ಬಿಡಲ್ಲ. ಹೀಗಿರುವಾಗ ನಾವು ಮಾತ್ರ ಅವರಿಗೆ ದಾರಿ ಕೊಡಬೇಕು ಎಂಬುದು ಯಾವ ನ್ಯಾಯ(?) ತಮ್ಮ ಮಗ ಸ್ಟಾರ್ ಎಂದು ಯಶ್ ತಾಯಿ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಬೆಳೆವಣಿಗೆಗಳು ನಡೆದ ಬಳಿಕ ರಾಕಿಂಗ್​ ಸ್ಟಾರ್​ ಯಶ್ ಅವರು ದುದ್ದ ಪೊಲೀಸ್​ ಠಾಣೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.

Next Story

RELATED STORIES