Top

ಕುಡಿದ ಮತ್ತಿನಲ್ಲಿ ಪೊಲೀಸರ ಜೊತೆ ಮಹಿಳೆ ರಂಪಾಟ

ಕಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ಪೊಲೀಸರ ಜೊತೆ ಮಹಿಳೆಯ ರಂಪಾಟ

X

ಬೆಂಗಳೂರು: ಕಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ಪೊಲೀಸರ ಜೊತೆ ಮಹಿಳೆಯ ರಂಪಾಟ ಮಾಡಿರುವ ಘಟನೆ ಕಬ್ಬನ್ ಪಾರ್ಕ್ ಬಳಿ ಡ್ರಿಂಕ್ ಆಂಡ್ ಡ್ರೈವ್ ಚೆಕ್ಕಿಂಗ್ ವೇಳೆ ನಡೆದಿದೆ.

ಇನ್ನು ಈ ಮಹಿಳೆ ಸುಮಾರು 3 ಗಂಟೆಗಳ ಕಾಲ ನಡು ರಸ್ತೆಯಲ್ಲಿ ಕಿರಿಕ್ ಮಾಡಿದ್ದು, ಆಕೆಯನ್ನು ಸಾಗಹಾಕಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಇನ್ನು ಆ ಮಹಿಳೆ ಎಸ್​ಪಿನೇ ಸ್ಥಳಕ್ಕೆ ಬರಬೇಕೆಂದು ಕುಡಿದು ಟೈಟಾಗಿರೋ ಮಹಿಳೆಯಿಂದ ರಂಪಾಟ ನಡೆಸಿದ್ದಾಳೆ.

ಈ ವೇಳೆ ಬುದ್ಧಿ ಹೇಳಿದ ಪೊಲೀಸರಿಗೇ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದು, ಆಟೋದಲ್ಲಿ ಕೂರಿಸಿ ಮನೆಗೆ ಕಳಿಸೋಕೆ ಹೋದ್ರೆ ಓಡಿ ಹೋಗಲು ಯತ್ನಿಸಿದ್ದಾರೆ.

ಕುಡಿದು ವಾಹನ ಓಡಿಸಿದಕ್ಕೆ ಪೊಲೀಸರು ತಡೆದಿದ್ದಾರೆ. ವಾಹನ ಸೀಝ್ ಮಾಡಿ ಆಟೋದಲ್ಲಿ ಕಳಿಸೋದಕ್ಕೆ ಮುಂದಾದಾಗ ಮಹಿಳೆ ಕಿರಿಕ್​ ಮಾಡಿದ್ದಾಳೆ. ಮಹಿಳೆಯ ಕಿರಿಕ್​ಗೆ ಪೊಲೀಸರು ಸುಸ್ತಾಗಿದ್ದಾರೆ.

Next Story

RELATED STORIES