Top

ಕೆಜಿಎಫ್​ 2ನಲ್ಲಿ ಅನಂತ್​ ನಾಗ್ ಜಾಗಕ್ಕೆ ಪ್ರಕಾಶ್​ ರೈ ಬಂದಿದ್ದೇಕೆ..?

ಕೆಜಿಎಫ್ ಅಖಾಡಕ್ಕೆ ಪ್ರಕಾಶ್​ ರೈ ಎಂಟ್ರಿಯಾಗಿದೆ. ಥೇಟ್​ ಆನಂದ್​ ಇಂಗಳಗಿ ಸ್ಟೈಲ್​ನಲ್ಲಿ ಪ್ರಕಾಶ್​ ರೈ ದರ್ಶನ ಕೊಟ್ಟಿದ್ದಾರೆ.

ಕೆಜಿಎಫ್​ 2ನಲ್ಲಿ ಅನಂತ್​ ನಾಗ್ ಜಾಗಕ್ಕೆ ಪ್ರಕಾಶ್​ ರೈ ಬಂದಿದ್ದೇಕೆ..?
X

ಅಭಿಮಾನಿಗಳ ಕಾಯುವಿಕೆಗೆ ಬ್ರೇಕ್​ ಬಿದ್ದಿದೆ. ಮೋಸ್ಟ್​ ಎಕ್ಸ್​ಪೆಕ್ಟೆಡ್​​ ಕೆಜಿಎಫ್​ ಚಾಪ್ಟರ್​ -2 ಶೂಟಿಂಗ್​ ಮತ್ತೆ ಶುರುವಾಗಿದೆ. ಆದಷ್ಟು ಬೇಗ ರಾಕಿ ಭಾಯ್​ ವರ್ಸಸ್​​ ಅಧೀರ ಫೈಟ್​ ನೋಡ್ಬೋದು ಅನ್ನೋ ಆಶಾಭಾವನೆ ಮೂಡಿದೆ. ಇದೆಲ್ಲದರ ಮಧ್ಯೆ ಕೆಜಿಎಫ್​​ ಅಖಾಡಕ್ಕೆ ಖ್ಯಾತ ನಟ ಪ್ರಕಾಶ್​ ರೈ ಎಂಟ್ರಿ ಕೊಟ್ಟಿರೋದು ಅಚ್ಚರಿ ಮತ್ತು ಗೊಂದಲ ಮೂಡಿಸಿದೆ.

ಕೆಜಿಎಫ್​.. ಕೆಜಿಎಫ್​.. ಕೆಜಿಎಫ್.. ಕಳೆದ ಒಂದೂವರೆ ವರ್ಷದಿಂದ ಭಾರತೀಯ ಚಿತ್ರರಂಗದಲ್ಲಿ ಸದ್ದು ಗದ್ದಲ ಮಾಡ್ತಿರೋ ಸಿನಿಮಾ. ಕನ್ನಡ ಸಿನಿಮಾವೊಂದು ಈ ಪಾಟಿ ಕ್ರೇಜ್​ ಹುಟ್ಟಾಕಿರೋದು ಇದೇ ಮೊದಲು. ಎಲ್ಲಾ ಅಂದುಕೊಂಡಂತೆ ಆಗಿದ್ರೆ, ಇಷ್ಟೊತ್ತಿಗೆ ಶೂಟಿಂಗ್​ ಕಂಪ್ಲೀಟ್​ ಆಗಿ ಸಿನಿಮಾ ಪ್ರಮೋಷನ್​ ಸ್ಟಾರ್ಟ್ ಆಗಬೇಕಿತ್ತು​ ಆದರೆ, ಕೊರೊನಾ ಅದಕ್ಕೆ ಅಡ್ಡಗಾಲು ಹಾಕಿತ್ತು. ಕಳೆದ ಆರು ತಿಂಗಳಿನಿಂದ ಯಾವುದೇ ಸಿನಿಮಾ ಶೂಟಿಂಗ್​ ಸಾಧ್ಯವಾಗಿರಲಿಲ್ಲ. ಇದೀಗ ಫೈನಲಿ ಕೆಜಿಎಫ್​ ಚಾಪ್ಟರ್​-2 ಶೂಟಿಂಗ್​ ಪುನರಾರಂಭವಾಗಿದೆ.

ಕೆಜಿಎಫ್. ಕನ್ನಡ ಚಿತ್ರರಂಗದ ಮಾಸ್ಟರ್​​ ಪೀಸ್​​. ಈ ಚಿತ್ರದ ಪ್ರತಿ ಪಾತ್ರ, ಪ್ರತಿ ಡೈಲಾಗ್, ಪ್ರತಿ ಲೊಕೇಶನ್, ಸೆಟ್​ ಎಲ್ಲವೂ ಸಿನಿರಸಿಕರ ಮನಸ್ಸಿನಲ್ಲಿ ಉಳಿದು ಬಿಟ್ಟಿದೆ. ಅದರಲ್ಲೂ ನಾರಾಚಿ ಅನ್ನೋ ಚಿನ್ನದ ಗಣಿಯ ಚಿತ್ರಣವನ್ನ ಮರೆಯೋಕ್ಕೆ ಸಾಧ್ಯವಿಲ್ಲ. ಸೂರ್ಯವರ್ಧನ್​ ಕಟ್ಟಿಕೊಂಡಿದ್ದ ನಾರಾಚಿ ಅನ್ನೋ ಚಿನ್ನದ ಸಾಮ್ರಾಜ್ಯ, ಅದನ್ನ ವಶಪಡಿಸಿಕೊಳ್ಳೋಕ್ಕೆ ಹವಣಿಸುವ ರಾಕ್ಷಸರು. ಆ ರಾಕ್ಷಸರಿಗೆ ಬುದ್ದಿ ಕಲಿಸೋಕ್ಕೆ ಬರೋ ರಾಕಿ. ನರಾಚಿ ರಾಕ್ಷಸರ ಹುಟ್ಟಡಗಿಸಿದ ರಾಕಿ, ರಾಕಿ ಭಾಯ್​ ಆಗಿ ಅಬ್ಬರಿಸೋ ಕಥೆ ಕೆಜಿಎಫ್​​ ಮುಂದುವರಿದ ಭಾಗದಲ್ಲಿ ಇರಲಿದೆ. ಈಗಾಗಲೇ ಪ್ರೀಕ್ವೆಲ್​​ನಲ್ಲಿ ಅದರ ಸಣ್ಣ ಝಲಕ್​ ನೋಡಿದ್ದೇವೆ.ಕೆಜಿಎಫ್​ ಪ್ರೀಕ್ವೆಲ್ ಕಥೆ ಶುರುವಾಗೋದೇ ಪತ್ರಕರ್ತ ಆನಂದ್​ ಇಂಗಳಗಿ ಮತ್ತು ಟಿವಿ ಚಾನೆಲ್ ಪತ್ರಕರ್ತೆ ದೀಪಾ ಹೆಗ್ಡೆ ಸಂಭಾಷಣೆ ಮೂಲಕ ಇಡೀ ಕೆಜಿಎಫ್​​ ಸಿನಿಮಾಗೆ ಪೀಠಿಕೆ ಹಾಕೋದೇ ಅಲ್ಲಿ. ಕಥೆಗೆ ತಿರುವುಗಳನ್ನ ಕೊಡ್ತಾ ಕೊಡ್ತಾ ಕಥೆಯನ್ನ ಕುತೂಹಲಭರಿತವಾಗಿ ಹೇಳುತ್ತಾ ಹೋಗೋದೇ ಆನಂದ್​ ಇಂಗಳಗಿ. ಈ ರೀತಿಯ ನಿರೂಪಣೆ ಶೈಲಿಯೇ ಕೆಜಿಎಫ್​ ಚಿತ್ರದ ಹೈಲೆಟ್​​ ಆಗಿತ್ತು. ಆನಂದ್​ ಇಂಗಳಗಿ ಪಾತ್ರದಲ್ಲಿ ಹಿರಿಯ ನಟ ಅನಂತ್​ ನಾಗ್​ ಮತ್ತು ಟಿವಿ ವಾಹಿನಿ ಸಂಪಾದಕಿ ದೀಪಾ ಹೆಗ್ಡೆ ಪಾತ್ರದಲ್ಲಿ ಮಾಳವಿಕಾ ಅವಿನಾಶ್​ ಮೋಡಿ ಮಾಡಿದ್ದರು.

ಕೆಜಿಎಫ್​ ಚಾಪ್ಟರ್​-2 ಸಿನಿಮಾದಲ್ಲೂ ಇದೇ ರೀತಿ ಪರ್ತಕರ್ತರ ನಡುವಿನ ಸಂಭಾಷಣೆ, ನಿರೂಪಣೆ ಶೈಲಿ ಇರಲಿದೆ. ಸದ್ಯ ಇದೇ ಭಾಗದ ಚಿತ್ರೀಕರಣವನ್ನ ನಡೆಸಲಾಗುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿ ಸೆಟ್​ ಹಾಕಿ ಚಿತ್ರೀಕರಣ ನಡೆಸ್ತಿದ್ದಾರೆ ಪ್ರಶಾಂತ್​ ನೀಲ್. ಕೊರೊನಾ ಹಾವಳಿ ಮತ್ತು ಲಾಕ್​ಡೌನ್​ನಿಂದ ನಾಲ್ಕೈದು ತಿಂಗಳು ಶೂಟಿಂಗ್​ ಸಾಧ್ಯವಾಗಿರಲಿಲ್ಲ. ಆದ್ರೀಗ, ಇದೇ ಸನ್ನಿವೇಶವನ್ನ ಸೆರೆ ಹಿಡಿಯುವ ಮೂಲಕ ಕೆಜಿಎಫ್- 2 ಚಿತ್ರೀಕರಣಕ್ಕೆ ಚಾಲನೆ ಕೊಡಲಾಗಿದೆ. ಆದರೆ, ಇಲ್ಲೊಂದು ಅಚ್ಚರಿ ಎದುರಾಗಿದೆ.

ಕೆಜಿಎಫ್​ ಸಿನಿಮಾದ ಯಾವುದೇ ಪಾತ್ರವನ್ನ ಪ್ರೇಕ್ಷಕರು ಮರೆಯೋಕ್ಕೆ ಸಾಧ್ಯವಿಲ್ಲ. ಅದರಲ್ಲೂ ಅನಂತ್​ ನಾಗ್​ ಮಾಡಿದ್ದ ಆನಂದ್​ ಇಂಗಳಗಿ ಪಾತ್ರ ಕೂಡ ಚಿತ್ರದ ಆಧಾರಸ್ತಂಭ. ಆದರೆ, ಈಗ ಆ ಜಾಗಕ್ಕೆ ಅನಂತ್​ ನಾಗ್​ ಬದಲು ಪ್ರಕಾಶ್​ ರೈ ಬಂದಿದ್ದಾರೆ ಅನ್ನೋ ಅನುಮಾನು ಮೂಡಿತ್ತಿದೆ. ಸ್ವತಃ ಪ್ರಕಾಶ್​ ರೈ ಟ್ವೀಟ್​ ಮಾಡಿ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಸಂತಸವನ್ನ ಹಂಚಿಕೊಂಡಿದ್ಧಾರೆ ಅದಕ್ಕೆ ಸಂಬಂಧಿಸಿ ಫೋಟೋಗಳನ್ನ ಶೇರ್​ ಮಾಡಿದ್ದಾರೆ. ಆದರೆ, ಇಲ್ಲಿ ಮಾಳವಿಕಾ ಅವಿನಾಶ್​ ಎದುರು ಅನಂತ್​ ನಾಗ್​​ ಬದಲು ಪ್ರಕಾಶ್​ ರೈ ಕೂತಿದ್ದಾರೆ.


ಕೆಜಿಎಫ್ ಅಖಾಡಕ್ಕೆ ಪ್ರಕಾಶ್​ ರೈ ಎಂಟ್ರಿಯಾಗಿದೆ. ಥೇಟ್​ ಆನಂದ್​ ಇಂಗಳಗಿ ಸ್ಟೈಲ್​ನಲ್ಲಿ ಪ್ರಕಾಶ್​ ರೈ ದರ್ಶನ ಕೊಟ್ಟಿದ್ದಾರೆ. ಹಾಗಾದ್ರೆ ಅನಂತ್​ ನಾಗ್​ ಎಲ್ಲಿ, ಅನಂತ್​ ನಾಗ್​ ಪಾತ್ರವನ್ನ ಸೀಕ್ವೆಲ್​​ನಲ್ಲಿ ಪ್ರಕಾಶ್​ ರೈ ಮಾಡ್ತಿದ್ದಾರಾ(?) ಚಾಪ್ಟರ್​​ ಟೂನಲ್ಲಿ ಅನಂತ್​ ನಾಗ್​ ಜೊತೆಗೆ ಪ್ರಕಾಶ್​ ರೈ ಪಾತ್ರವೂ ಇರುತ್ತಾ ಹೀಗೆ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿದೆ. ಅದೆಲ್ಲ ಏನೇ ಇದ್ರು, ಪ್ರಕಾಶ್​ ರೈ ರೀತಿಯ ಅದ್ಭುತ ನಟ ಕೆಜಿಎಫ್​ ಭಾಗವಾಗ್ತಿರೋದು ಕೆಲವರ ಸಂತಸಕ್ಕೆ ಕಾರಣವಾಗಿದೆ.

ಪ್ರಕಾಶ್​ ರೈಗಾಗಿ ಕೆಜಿಎಫ್​ ಸೀಕ್ವೆಲ್​ನಲ್ಲಿ ಹೊಸ ಪಾತ್ರ ಸೃಷ್ಟಿಯಾಗಿದ್ಯಾ(?) ಅಥವಾ ಅನಂತ್​ ನಾಗ್​ ಮಾಡಿದ್ದ ಪಾತ್ರವನ್ನೇ ಪ್ರಕಾಶ್​ ರೈ ಮುಂದುವರೆಸ್ತಾರಾ(?) ಗೊತ್ತಿಲ್ಲ. ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಕೊಟ್ಟಿಲ್ಲ. ಕೆಲ ಮೂಲಗಳ ಪ್ರಕಾರ ಸೀಕ್ವೆಲ್​ನಲ್ಲಿ ಅನಂತ್​ ನಾಗ್​ ಪಾತ್ರ ಬಹಳ ಹೊತ್ತು ಇರೋದಿಲ್ಲ ಅನ್ನಲಾಗುತ್ತಿದೆ. ಇನ್ನುಳಿದ ಕಥೆಯನ್ನ ನನ್ನ ಜ್ಯೂನಿಯರ್​ ಮುಂದುವರೆಸ್ತಾರೆ ಅಂತ ಹೇಳಿ ಅನಂತ್​ ನಾಗ್​ ನಿರ್ಗಮಿಸ್ತಾರೆ. ಅಲ್ಲಿಂದ ಪ್ರಕಾಶ್​ ರೈ ರಾಖಿ ಭಾಯ್​ ರೋಚಕ ಕಥೆ ಹೇಳ್ತಾ ಹೋಗ್ತಾರೆ ಅನ್ನಲಾಗುತ್ತಿದೆ.


ಅನಂತ್​ ನಾಗ್​ ಜಾಗದಲ್ಲಿ ಮತ್ತೊಬ್ಬ ನಟನನ್ನ ಕಲ್ಪಿಸಿಕೊಳ್ಳೋದು ಕಷ್ಟ. ಇನ್ನು ಅವರ ಸಹಜಾಭಿನಯ, ಆ ಗತ್ತು, ಡೈಲಾಗ್​ ಡೆಲಿವರಿ ಸ್ಟೈಲ್​ ಮತ್ತೊಬ್ಬರಿಂದ ಸಾಧ್ಯವೇಯಿಲ್ಲ.. ಕೆಜಿಎಫ್​ ಸಿನಿಮಾದಲ್ಲಿ ಯಶ್​​ ಡೈಲಾಗ್​ಗಳ ರೀತಿಯಲ್ಲೇ ಅನಂತ್​ ಸರ್​ ಡೈಲಾಗ್ಸ್​ ಸಂಚಲನ ಸೃಷ್ಟಿಸಿತ್ತು.

ಒಟ್ಟರೆಯಾಗಿ ಪ್ರಕಾಶ್​ ರೈ ಎಂಟ್ರಿಯಿಂದ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಕೆಜಿಎಫ್​-2 ಶೂಟಿಂಗ್​ ಮತ್ತೆ ಶುರುವಾಗಿರೋದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಆದಷ್ಟು ಬೇಗ ಶೂಟಿಂಗ್​ ಮುಗಿದು, ಶೀಘ್ರದಲ್ಲೇ ಸಿನಿಮಾ ತೆರೆಗೆ ಬರುವ ಸುಳಿವು ಸಿಕ್ತಿದೆ. ಸೀಕ್ವೆಲ್​ ಪ್ರೀಕ್ವೆಲ್​ಗಿಂತ ಹತ್ತುಪಟ್ಟು ದೊಡ್ಡದಾಗಿರುತ್ತೆ ಅಂತ ಚಿತ್ರತಂಡ ಹೇಳಿದೆ. ಇದನ್ನ ಕೇಳಿ, ಸಿನಿಮಾ ಯಾವ ರೇಂಜಿಗಿರುತ್ತೋ ಅಂತ ಊಹಿಸಿಕೊಂಡು ಫ್ಯಾನ್ಸ್​ ಥ್ರಿಲ್ಲಾಗಿದ್ದಾರೆ.

ದಸರಾ ಸಂಭ್ರಮದಲ್ಲಿ ಅಂದ್ರೆ, ಅಕ್ಟೋಬರ್​ 23ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಹೇಳಿತ್ತು. ಕೊರೊನಾ ಹಾವಳಿಯಿಂದ ಆರು ತಿಂಗಳು ಶೂಟಿಂಗ್ ಸಾಧ್ಯವಾಗಿಲ್ಲ. ಅತ್ತ ಕ್ರಿಸ್​ಮಸ್​ಗೆ ಬರಬೇಕಿದ್ದ ಆಮೀರ್​ ಖಾನ್​ ಲಾಲ್​ ಸಿಂಗ್​ ಚಡ್ಡಾ, ಇತ್ತ ಸಂಕ್ರಾಂತಿ ರಿಲೀಸ್ ಆಗಬೇಕಿದ್ದ ಆರ್​ಆರ್​ಆರ್​ ಪೋಸ್ಟ್​ಪೋನ್​ ಆಗುತ್ತಿದೆ. ಹಾಗಾಗಿ ಕ್ರಿಸ್​ಮಸ್​ ಅಥವಾ ಸಂಕ್ರಾಂತಿ ಹಬ್ಬಕ್ಕೆ ರಾಕಿ ಭಾಯ್​ ಆರ್ಭಟ ಶುರುವಾಗಲಿದೆ.Next Story

RELATED STORIES