16 ವರ್ಷ ಪೂರೈಸಿದ ಕಲಾಸಿಪಾಳ್ಯ; ಡಿ ಫ್ಯಾನ್ಸ್ ಸಂಭ್ರಮಾಚರಣೆ
ಇಂದು ಕಲಾಸಿಪಾಳ್ಯ ಚಿತ್ರ 16 ವರ್ಷಗಳನ್ನ ಪೂರೈಸಿದ ಸಂಭ್ರಮದಲ್ಲಿದೆ.

ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಇಂದು ಸಂಭ್ರಮವೋ ಸಂಭ್ರಮ. ಯಾಕಂದ್ರೆ ಡಿ ಬಾಸ್ ಅಭಿನಯದ ಸಿನಿಮಾವೊಂದು 16 ವರ್ಷಗಳನ್ನ ಪೂರೈಸಿದೆ. ಕೈಯ್ಯಲ್ಲಿ ಲಾಂಗ್ ಹಿಡಿದು, ಮಾಸ್ ಪ್ರೇಕ್ಷಕರನ್ನ ರಂಜಿಸಿ, ಬಾಕ್ಸಾಫೀಸ್ ಧೂಳೆಬ್ಬಿಸಿದರು ಚಾಲೆಂಜಿಂಗ್ ಸ್ಟಾರ್.
ಮೆಜೆಸ್ಟಿಕ್ ಸಿನಿಮಾ ಮೂಲಕ ನಾಯಕನಟನಾಗಿ ಎಂಟ್ರಿ ಕೊಟ್ಟ ಚಾಲೆಂಜಿಂಗ್ ಸ್ಟಾರ್. ಎಂಟ್ರಿ ಕೊಡ್ತಾನೇ ಕೈಯಲ್ಲಿ ಲಾಂಗ್ ಹಿಡಿದು, ಮಾಸ್ಪ್ರೇಕ್ಷಕರ ಗಮನ ಸೆಳೆದಿದರು. ಅಲ್ಲಿಂದ ಬ್ಯಾಕ್ ಟು ಬ್ಯಾಕ್ ಕರಿಯ, ದಾಸ ಸಿನಿಮಾಗಳಲ್ಲೂ ದಚ್ಚು ಲಾಂಗ್ ಹಿಡಿದು ಗಾಂಧೀನಗ್ರದಲ್ಲಿ ಧೂಳೆಬ್ಬಿಸಿದರು. ಅಷ್ಟು ಹೊತ್ತಿಗಾಗಲೇ ಮಾಸ್ ಹೀರೋ ಅನ್ನಿಸಿಕೊಂಡಿದ್ದ ದಚ್ಚು ಮತ್ತೊಮ್ಮೆ ಕಲಾಸಿಪಾಳ್ಯದಲ್ಲಿ ಲಾಂಗ್ ಹಿಡಿದು ಅಬ್ಬರಿಸಿದರು. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಇಂದು ಕಲಾಸಿಪಾಳ್ಯ ಚಿತ್ರ 16 ವರ್ಷಗಳನ್ನ ಪೂರೈಸಿದ ಸಂಭ್ರಮದಲ್ಲಿದೆ.
ಕಲಾಸಿಪಾಳ್ಯ, ಬೆಂಗಳೂರಿನ ಬ್ಯುಸಿಯೆಸ್ಟ್ ಏರಿಯಾ. ಚಿತ್ರದ ಟೈಟಲ್ ಕೇಳಿಯೇ ಥ್ರಿಲ್ ಆಗಿದ್ದ ಸಿನಿಪ್ರಿಯರು, ಚಿತ್ರ ರಿಲೀಸ್ ಆಗುತ್ತಿದ್ದ ಹಾಗೇ ಥಿಯೇಟರ್ಗಳಲ್ಲಿ ಮುಗಿಬಿದ್ದು ಸಿನಿಮಾ ನೋಡಿದರು. ಶತದಿನೋತ್ಸವ ಪೂರೈಸಿ ಸಿನಿಮಾ ಮುನ್ನುಗಿತ್ತು..ಕಾಲೇಜು ಹುಡುಗರು, ಮಾಸ್ ಆಡಿಯನ್ಸ್ಗೆ ಸಿನಿಮಾ ಇಷ್ಟವಾಗಿತ್ತು. ಅದರಲ್ಲೂ ಸುಂಟರಗಾಳಿ ಹಾಡು ಎಲ್ಲರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

ಸುಂಟರಗಾಳಿ ಸಾಂಗ್ ಮಾತ್ರವಲ್ದೆ ಸಾಧುಕೋಕಿಲ ಮತ್ತು ವೆಂಕಟ್ ನಾರಾಯಣ್ ಸಂಗೀತ ನಿರ್ದೇಶನದಲ್ಲಿ ಪೇಟೆ ಪೇಟೆರಾ,ಧೂಳ್ ಮಗಾ ಧೂಳ್,ಕೆಂಚ ಓ ಕೆಂಚ ಹೀಗೆ ಚಿತ್ರದ ಫುಲ್ ಆಲ್ಬಂ ಹಿಟ್ ಲಿಸ್ಟ್ ಸೇರಿತ್ತು.
ಇನ್ನು ಚಿತ್ರದಲ್ಲಿ ದಚ್ಚು-ರಕ್ಷಿತಾ ಲವ್ ಸ್ಟೋರಿ, ಆ್ಯಕ್ಷನ್ ಸೀಕ್ವೆನ್ಸ್ಗಳ ಜೊತೆಗೆ ಹೈಲೈಟ್ ಆಗಿದ್ದು ಸಾಧುಕೋಕಿಲ-ಬುಲೆಟ್ ಪ್ರಕಾಶ್ ಕಾಮಿಡಿ.
ಕಂಪ್ಲೀಟ್ ಪ್ಯಾಕೇಜ್ ಕಲಾಸಿಪಾಳ್ಯ ಚಿತ್ರದಲ್ಲಿ ದರ್ಶನ್ಗೆ ನಾಯಕಿಯಾಗಿ ಫಸ್ಟ್ ಟೈಮ್ ಕ್ರೇಜಿ ಕ್ವೀನ್ ರಕ್ಷಿತಾ ಹೆಜ್ಜೆ ಹಾಕಿದರು. ಕಲಾಸಿಪಾಳ್ಯ ಸೂಪರ್ ಹಿಟ್ ಆಗುತ್ತಿದ್ದ ಹಾಗೇ ಸ್ಯಾಂಡಲ್ವುಡ್ ಹಿಟ್ ಪೇರ್ಗಳ ಲಿಸ್ಟ್ಗೆ ಈ ಜೋಡಿ ಸೇರಿಕೊಳ್ತು. ಬ್ಯಾಕ್ ಟು ಬ್ಯಾಕ್ ಇವರಿಬ್ಬರ ಕಾಂಬಿನೇಷನ್ನಲ್ಲಿ ಅಯ್ಯ, ಮಂಡ್ಯ, ಸುಂಟರಗಾಳಿ ಸಿನಿಮಾಗಳು ತೆರೆಕಂಡ್ವು.
ಅದ್ದೂರಿ ನಿರ್ಮಾಪಕ ರಾಮು ನಿರ್ಮಾಣದಲ್ಲಿ, ಆ್ಯಕ್ಷನ್ ಸಿನಿಮಾಗಳ ಸಾರಥೀ ಓಂ ಪ್ರಕಾಶ್ ರಾವ್ ಕಲಾಸಿಪಾಳ್ಯಕ್ಕೆ ಆ್ಯಕ್ಷನ್ ಕಟ್ ಹೇಳಿದರು. ಕೆ.ವಿ ರಾಜು ಮಾಸ್ ಡೈಲಾಗ್ಸ್ ಕೂಡ ಚಿತ್ರದ ಪ್ಲಸ್ ಪಾಯಿಂಟ್ ಆಗಿತ್ತು. 2004ರಲ್ಲಿ ತೆರೆಕಂಡ ಕಲಾಸಿಪಾಳ್ಯ ರಿಲೀಸ್ ಆಗಿ ಇಂದಿಗೆ 16 ವರ್ಷಗಳು. ಹಾಗಾಗಿ ಡಿ ಫ್ಯಾನ್ಸ್ ಈ ಸಂಭ್ರಮವನ್ನ ಸೋಶಿಯಲ್ ಮೀಡಿಯಾ ಮೂಲಕ ಸೆಲೆಬ್ರೇಟ್ ಮಾಡುತ್ತಿದ್ದಾರೆ.