Top

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡ್ಯಾನಿಶ್​ ಸೇಠ್

ದ್ಯಾನಿಶ್ ತಮ್ಮ ಮದುವೆ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡ್ಯಾನಿಶ್​ ಸೇಠ್
X

ಕಳೆದ ವರ್ಷದ ಲಾಕ್​ಡೌನ್​ನಂತೆ ಈ ವರ್ಷ ಲಾಕ್​​ಡೌನ್​ನಲ್ಲಿಯೂ ಸಾಕಷ್ಟು ಸೆಲೆಬ್ರೆಟಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದೇ ಹಾದಿಯಲ್ಲಿ ಇದೀಗ ನಟ, ನಿರೂಪಕ ಡ್ಯಾನಿಶ್​ ಸೇಠ್ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ವಿಚಾರವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಆರ್​ಸಿಬಿ ಇನ್​ಸೈಡ್ ಶೋ ಮೂಲಕ ದೇಶದಾಧ್ಯಂತ ಮನೆ ಮಾತಾಗಿರೋ ದ್ಯಾನಿಶ್​ ಸೇಠ್, ಕನ್ನಡದಲ್ಲಿ ಹಂಬಲ್​ ಪೊಲಿಟಿಶೀಯನ್ ನೋಗ್​ರಾಜ್​​ ಮತ್ತು ಫ್ರೆಂಚ್ ಬಿರಿಯಾನಿ ಸಿನಿಮಾಗಳ ಮೂಲಕವೂ ಮಿಂಚಿದ್ದಾರೆ.


ಕೆಲ ದಿನಗಳ ಹಿಂದಷ್ಟೇ ತಾವೂ ಎಂಗೇಜ್​ ಅಗಿರುವ ವಿಚಾರವನ್ನ ಶೇರ್ ಮಾಡಿಕೊಂಡಿದ್ದ ದ್ಯಾನಿಶ್​ ಸೇಠ್, ಇದೀಗ ಲಾಕ್​ಡೌನ್​ನಲ್ಲಿಯೇ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿಂಪಲ್ಲಾಗಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್​ ಆಗಿದ್ದಾರೆ. ಬಹುಕಾಲದ ಗೆಳತಿ, ಮುಂಬೈ ಮೂಲಕ ಗ್ರಾಫಿಕ್​ ಡಿಸೈನರ್​ ಅನ್ಯಾ ರಂಗಸ್ವಾಮಿಯವರನ್ನ ಕೈ ಹಿಡಿದಿದ್ದಾರೆ.

ದ್ಯಾನಿಶ್​ ತಮ್ಮ ಮದುವೆ ವಿಚಾರವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದು, ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

Next Story

RELATED STORIES