Top

ಸುದೀಪಿಯನ್ಸ್​​ ಕಿಚ್ಚೋತ್ಸವಕ್ಕೆ ಸೆಂಚುರಿ ಸ್ಟಾರ್​​ ಸಾಥ್

ಸೋಷಿಯಲ್​ ಮೀಡಿಯಾದಲ್ಲಿ ಈಗಾಗಲೇ ಕಿಚ್ಚೋತ್ಸವ ಶುರುವಾಗಿದ್ದು, ಸೆಂಚುರಿ ಸ್ಟಾರ್​ ಸಾಥ್​ ಸಿಕ್ಕಿರೋದು ವಿಶೇಷ.

ಸುದೀಪಿಯನ್ಸ್​​ ಕಿಚ್ಚೋತ್ಸವಕ್ಕೆ ಸೆಂಚುರಿ ಸ್ಟಾರ್​​ ಸಾಥ್
X

ಸೆಪ್ಟೆಂಬರ್​​​ 2ರಂದು ಕಿಚ್ಚ ಸುದೀಪ್​ ಹುಟ್ಟುಹಬ್ಬ. ಒಂದು ಕಡೆ ಕೊರೊನಾ ಹಾವಳಿ ಮತ್ತೊಂದು ಕಡೆ ಕಳೆದ ಮೂರು ವರ್ಷಗಳಿಂದ ಸುದೀಪ್​ ಅದ್ಧೂರಿ ಹುಟ್ಟುಹಬ್ಬಕ್ಕೆ ಬ್ರೇಕ್​ ಹಾಕಿದ್ದಾರೆ. ಈ ಬಾರಿ ಅಭಿಮಾನಿಗಳು ಸುದೀಪ್​ ಅವರನ್ನ ಭೇಟಿ ಮಾಡಿ ವಿಶ್​ ಮಾಡೋದು ಕಷ್ಟವಾಗಲಿದೆ. ಆದರೆ, ಸೋಷಿಯಲ್​ ಮೀಡಿಯಾದಲ್ಲಿ ಈಗಾಗಲೇ ಕಿಚ್ಚೋತ್ಸವ ಶುರುವಾಗಿದ್ದು, ಸೆಂಚುರಿ ಸ್ಟಾರ್​ ಸಾಥ್​ ಸಿಕ್ಕಿರೋದು ವಿಶೇಷ.

ನೆಚ್ಚಿನ ನಟನ ಹುಟ್ಟುಹಬ್ಬ ಅಂದ್ರೆ, ಅಭಿಮಾನಿಗಳಿಗೆ ಅಂದೇ ಯುಗಾದಿ. ಅಂದೇ ದೀಪಾವಳಿ. ಆದರೆ, ಕೊರೊನಾ ಆ ಸಂಭ್ರಮಕ್ಕೆಲ್ಲಾ ಕೊಳ್ಳಿ ಇಟ್ಟಿದೆ. ಕಳೆದ ಐದು ತಿಂಗಳಿಂದ ಸ್ಯಾಂಡಲ್​ವುಡ್​ ಸ್ಟಾರ್ಸ್​ ಯಾರು ಅಭಿಮಾನಿಗಳ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳೋಕ್ಕೆ ಸಾಧ್ಯವಾಗಲಿಲ್ಲ. ಈ ಬಾರಿ ಸುದೀಪ್​ ಅಭಿಮಾನಿಗಳಿಗೂ ಕೊಂಚ ನಿರಾಸೆ ಕಾದಿದೆ. ಅದ್ರೂ ಇದ್ದಿದ್ದರಲ್ಲಿ ಸಂಭ್ರಮ ಪಡೋಕ್ಕೆ ಫ್ಯಾನ್ಸ್​ ನಿರ್ಧರಿಸಿದ್ದಾರೆ.


ಹುಟ್ಟುಹಬ್ಬದ ಹೆಸರಿನಲ್ಲಿ ಅನಗತ್ಯ ಖರ್ಚಿಗೆ ಸುದೀಪ್​ ಈಗಾಗಲೇ ಬ್ರೇಕ್​ ಹಾಕಿದ್ದಾರೆ. ಆದರೆ, ಕಳೆದರೆಡು ವರ್ಷಗಳಿಂದ ಹುಟ್ಟುಹಬ್ಬದ ದಿನ ಅಭಿಮಾನಿಗಳು ಜೆಪಿ ನಗರದ ಸುದೀಪ್​ ಮನೆ ಮುಂದೆ ಜಮಾಯಿಸಿ, ನೆಚ್ಚಿನ ನಟನ ಕೈ ಕುಲುಕಿ ಶುಭಾಶಯ ಕೋರಿ, ಫೋಟೋ ಕ್ಲಿಕ್ಕಿಸಿಕೊಳ್ಳಲು ಅವಕಾಶ ಸಿಕ್ಕಿತ್ತು. ಆದರೆ, ಈ ಬಾರಿ ಕೊರೊನಾ ಅದಕ್ಕೂ ಅವಕಾಶ ಕೊಡುತ್ತಿಲ್ಲ. ಇನ್ನು ಫ್ಯಾಂಟಮ್​ ಶೂಟಿಂಗ್​ಗಾಗಿ ಹೈದರಾಬಾದ್​ನಲ್ಲಿರೋ ಸುದೀಪ್​, ಸೆಪ್ಟೆಂಬರ್​ನಲ್ಲಿ 2ಕ್ಕೆ ಬೆಂಗಳೂರಿಗೆ ಬರ್ತಾರಾ ಅಂತ ಫ್ಯಾನ್ಸ್​ ಕಾಯ್ತಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಈಗಾಗಲೇ ಕಿಚ್ಚೋತ್ಸವಕ್ಕೆ ಚಾಲನೆ ಸಿಕ್ಕಿದೆ. ಕಿಚ್ಚೋತ್ಸವ 2020 ಕಾಮನ್​ ಡಿಪಿ ರೆಡಿಯಾಗಿದ್ದು, ನಟ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಅದನ್ನ ಲಾಂಚ್​ ಮಾಡಿದ್ಧಾರೆ. ಆ ಮೂಲಕ ಸುದೀಪ್​ ಅಭಿಮಾನಿಗಳ ಅಭಿಮಾನೋತ್ಸವಕ್ಕೆ ಶಿವಣ್ಣ ಸಾಥ್​ ಕೊಟ್ಟಿದ್ದಾರೆ. ಶಿವಣ್ಣ ಕಿಚ್ಚೋತ್ಸವ ಕಾಮನ್​ ಡಿಪಿ ಲಾಂಚ್​ ಮಾಡಿದ್ದಕ್ಕೆ ಸುದೀಪ್​ ಧನ್ಯವಾದ ತಿಳಿಸಿದ್ದಾರೆ. ಕಿಚ್ಚೋತ್ಸವ ಡಿಪಿ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಕ್ರಿಯೇಟ್​ ಮಾಡಿದೆ.


ಸುದೀಪ್​ ಹುಟ್ಟುಹಬ್ಬದ ವಿಶೇಷವಾಗಿ ಕೋಟಿಗೊಬ್ಬ-3 ಸಿನಿಮಾ ಹೊಸ ಟೀಸರ್​, ಬರ್ತ್​ ಡೇ ಸ್ಪೆಷಲ್ಲಾಗಿ ಬರಲಿದೆ. ಶಿವ ಕಾರ್ತಿಕ್​ ನಿರ್ದೇಶನದ ಕೋಟಿಗೊಬ್ಬ-3 ಸಿನಿಮಾ ಶೂಟಿಂಗ್​ ಬಹುತೇಕ ಕಂಪ್ಲೀಟ್​ ಆಗಿದೆ.

ಸುದೀಪ್​ ಬಯೋಗ್ರಫಿ ಪುಸ್ತಕದ ರೂಪದಲ್ಲಿ ಬರ್ತಿದೆ.. ಇದು ಸಹಜವಾಗಿಯೇ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ. ಸುದೀಪ್​ ಹುಟ್ಟುಹಬ್ಬದ ಸ್ಪೆಷಲ್ಲಾಗಿ 'ಕಿಚ್ಚ ಬರ್ತಾವ್ನೆ' ಅನ್ನೋ ಸ್ಪೆಷಲ್​ ಟ್ರಿಬ್ಯೂಟ್​ ಸಾಂಗ್​ ಬರ್ತಿದೆ. ಈಗಾಗಲೇ ಅದ್ರ ಝಲಕ್​ ಸೋಷಿಯಲ್​ ಮೀಡಿಯಾದಲ್ಲಿ ಸೌಂಡ್​ ಮಾಡುತ್ತಿದೆ.

ಇನ್ನು ಫ್ಯಾಂಟಮ್​ ಸಿನಿಮಾ ಶೂಟಿಂಗ್​ ಕೂಡ ಜೋರಾಗಿ ನಡೀತಿದೆ. ಈಗಾಗಲೇ ಚಿತ್ರದ ಸಣ್ಣ ಸಣ್ಣ ಝಲಕ್​ ರಿವೀಲ್​ ಮಾಡಿ ಭಾರೀ ಕುತೂಹಲ ಕೆರಳಿಸಿದೆ ಚಿತ್ರತಂಡ. ಜಾಕ್​ ಮಂಜು ನಿರ್ಮಾಣದ ಫ್ಯಾಂಟಮ್​ ಚಿತ್ರಕ್ಕೆ ಅನೂಪ್​ ಭಂಡಾರಿ ಆ್ಯಕ್ಷನ್​ ಕಟ್​ ಹೇಳ್ತಿದ್ದಾರೆ. ಬಾದ್​ಶಾ ಬರ್ತ್​ಡೇ ಸ್ಪೆಷಲ್ಲಾಗಿ ಕೋಟಿಗೊಬ್ಬ -3 ಟೀಸರ್​ ಜೊತೆಗೆ ಸರ್ಪ್ರೈಸ್​ ಅನ್ನುವಂತೆ ಫ್ಯಾಂಟಮ್ ಟೀಸರ್​ ಕೂಡ ಬಂದ್ರೆ, ಅಭಿಮಾನಿಗಳಿಗೆ ಹಬ್ಬವೇ ಸರಿ.

Next Story

RELATED STORIES