Top

ಇಂದು ತುಂಬಾ ವಿಶೇಷ ದಿನ 11:07ಕ್ಕೆ ಗಂಡು ಮಗುವಿನ ಜನನ ಆಗಿದೆ

ಹೊಟ್ಟೆಲಿ ಮಗು ಇಟ್ಟುಕೊಂಡು ಮಗಳು ಸಂಕಟ ಅನುಭವಿಸಿದ್ಲು. ಮೇಘನಾ ವೆರಿ ಬೋಲ್ಡ್ ಗರ್ಲ್. ಹೆಣ್ಮಕ್ಕಳೇ ಸ್ಟ್ರಾಂಗ್ ಅನ್ನೋದೆ ಅದಕ್ಕೆ.

ಇಂದು ತುಂಬಾ ವಿಶೇಷ ದಿನ 11:07ಕ್ಕೆ ಗಂಡು ಮಗುವಿನ ಜನನ ಆಗಿದೆ
X

ಬೆಂಗಳೂರು: ಇಡೀ ಪ್ರಪಂಚವೇ ಕೊರೊನಾದಿಂದ ನಲುಗಿದೆ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಇದೆ. ರೈತರು ಸಂಕಷ್ಟದಲ್ಲಿದ್ದಾರೆ. ದೊಡ್ಡ ಆಘಾತ ನಮ್ಮ ಇಡೀ ಕುಟುಂಬಕ್ಕೆ ಆಗಿತ್ತು. ತುಂಬಾ ಇಷ್ಟಪಟ್ಟು ಮದುವೆ ಆದ ಚಿರು ಇಲ್ಲವಾಗಿದರು ಎಂದು ಮೇಘನಾ ರಾಜ್​ ತಂದೆ ಸುಂದರ್ ರಾಜ್ ಅವರು ಹೇಳಿದರು.

ಗುರುವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಗಳಿಗೆ ಗಂಡು ಮಗು ಜನಿಸಿದ ಹಿನ್ನೆಲೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಪ್ರತಿ ಕ್ಷಣ ನಾವು ಅನುಭವಿಸಿದ್ವಿ. ಹೊಟ್ಟೆಲಿ ಮಗು ಇಟ್ಟುಕೊಂಡು ಮಗಳು ಸಂಕಟ ಅನುಭವಿಸಿದ್ಲು. ಮೇಘನಾ ವೆರಿ ಬೋಲ್ಡ್ ಗರ್ಲ್. ಹೆಣ್ಮಕ್ಕಳೇ ಸ್ಟ್ರಾಂಗ್ ಅನ್ನೋದೆ ಅದಕ್ಕೆ ಎಂದಿದ್ದಾರೆ.

ಇನ್ನು ಚಿರು ಪ್ರೇಮದ ಕಾಣಿಕೆ ದಸಾರ ಹಬ್ಬದಲ್ಲಿ ಬಂದಿದೆ. ಇವತ್ತು ತುಂಬಾ ವಿಶೇಷ ದಿನ. 11:07ಕ್ಕೆ ಗಂಡು ಮಗುವಿಗೆ ಜನನ ಆಗಿದೆ. ಅಭಿಮಾನಿಗಳ ಮಾತು ಸುಳ್ಳಾಗಿಲ್ಲ, ಚಿರು ಮತ್ತೆ ಹುಟ್ಟಿ ಬಂದಿದ್ದಾನೆ. ಡೆಲಿವರಿ ಸಂದರ್ಭ ಎಲ್ಲಾ ಮನೆಯವರಿಗೂ ಆತಂಕ ಇರುತ್ತೆ. ನೀರಿಕ್ಷೆಯಿಂದ ಅಭಿಮಾನಿಗಳಿಗೆ ಖುಷಿ ಸಂಗತಿ. ಚಿರು ಅಭಿಮಾನಿಗಳ ನಿರೀಕ್ಷೆಯಂತೆ ಚಿರು ಹುಟ್ಟಿ ಬಂದಿದ್ದಾನೆ ಎಂದು ಸಂತಸ ಹಂಚಿಕೊಂಡರು.

ಸದ್ಯ 22 ಅಕ್ಟೋಬರ್ ನಾನು ನೆನೆಪಿಕೊಳ್ಳುತ್ತೇನೆ. ಅವರ ಎಂಗ್ಲೇಜ್ಮೆಂಟ್ ಆಗಿದ್ದು ಕೂಡ ಇವತ್ತೆ. ನಾಲ್ಕು ತಿಂಗಳು 40 ವರ್ಷ ಕಳೆದ ಹಾಗಾಯ್ತು. ದೇವರು ಇದ್ದಾನೇ ಎಂಬ ನಂಬಿಕೆ ಫಲ ನೀಡಿದೆ. ಸಾಯಿ ಬಾಬಾನನ್ನಾ ಪ್ರಾರ್ಥಿಸುತ್ತಿದೆ. ಆಶಿರ್ವಾದ ಮಾಡಿದ್ದಾನೆ. ರಾಯರ ವಾರ ಹುಟ್ಟಿದ್ದಾನೆ. ಮಗು 2.9 ಕೆ.ಜಿ ಇದೆ. ಮಗುವನ್ನು ದೂರದಿಂದ ನೋಡಿದ್ದೇನೆ. ನಂಗೆ ಸ್ವಲ್ಪ ಭಯ ಹಾಗಾಗಿ ಎತ್ತಿಕೊಂಡಿಲ್ಲ ಎಂದು ಹೇಳಿದರು.

ಅಂತೆಯೇ ಚಿರು ಮನೆಯಲ್ಲಿ ಇವತ್ತು ಹೋಳೆಗೆ ಊಟ ಮಾಡಲಾಗಿದೆ. ಗಂಡು-ಹೆಣ್ಣು ಎಂಬ ಭೇದ ನನಗಿರಲಿಲ್ಲ, ಹೆಣ್ಣು ಮಕ್ಕಳಿಗರ ಧೈರ್ಯ ಜಾಸ್ತಿ. ಮನುಷ್ಯನ ಪ್ರತಿ ಹಂತದಲ್ಲಿ ನಾನಿದ್ದೇನೆ. ಇಂದು ತಾತಾ ಆಗಿದ್ದೇನೆ ಎಂದು ಹಿರಿಯ ನಟ ಸುಂದರ್​ ರಾಜ್​ ಹೇಳಿದ್ದಾರೆ.

Next Story

RELATED STORIES