Top

ಹಾರ್ಡ್ ಡಿಸ್ಕ್, ಲ್ಯಾಪ್​ಟ್ಯಾಪ್​ ಇದೆ ಅದರಲ್ಲಿ ಏನಿದೆ ಅನ್ನುವ ಮಾಹಿತಿ ಈಗ ಹೇಳುವುದಿಲ್ಲ - ಇಂದ್ರಜಿತ್​ ಲಂಕೇಶ್​

ಹಾರ್ಡ್ ಡಿಸ್ಕ್, ಲ್ಯಾಪ್​ಟ್ಯಾಪ್​ ಇದೆ ಅದರಲ್ಲಿ ಏನಿದೆ ಅನ್ನುವ ಮಾಹಿತಿ ಈಗ ಹೇಳುವುದಿಲ್ಲ - ಇಂದ್ರಜಿತ್​ ಲಂಕೇಶ್​
X

ಬೆಂಗಳೂರು: ಚಿತ್ರರಂಗಕ್ಕೆ ಕೆಟ್ಟ ಹೆಸರು ಬರಬಾರದು ಅನ್ನೋದು ನನ್ನ ಉದ್ದೇಶ. ನನಗೆ ಎಷ್ಟು ಮಾಹಿತಿ ಗೊತ್ತಿದಿಯೋ ಅದನ್ನ ಸಿಸಿಬಿಗೆ ತಿಳಿಸಿದ್ದೇನೆ ಎಂದು ಚಲನಚಿತ್ರ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಅವರು ಗುರುವಾರ ಹೇಳಿದ್ದಾರೆ.

ನಗರದಲ್ಲಿ ಸಿಸಿಬಿ ವಿಚಾರಣೆಗೂ ಮುನ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ಯಾಗ್​ನಲ್ಲಿ ಹಾರ್ಡ್ ಡಿಸ್ಕ್, ಲ್ಯಾಪ್​ಟ್ಯಾಪ್​ ಇದೆ ಅದರಲ್ಲಿ ಏನಿದೆ ಅನ್ನುವ ಮಾಹಿತಿ ಈಗ ಹೇಳುವುದಿಲ್ಲಹಾರ್ಡ್ ಡಿಸ್ಕ್, ಲ್ಯಾಪ್​ಟ್ಯಾಪ್​ ಇದೆ ಅದರಲ್ಲಿ ಏನಿದೆ ಅನ್ನುವ ಮಾಹಿತಿ ಈಗ ಹೇಳುವುದಿಲ್ಲ, ಚಿರು ಸರ್ಜಾ ಹೆಸರನ್ನ ತೆಗೆದುಕೊಂಡಿದ್ದು ತಪ್ಪು ಅಂತ ಗೊತ್ತಾಗಿ ವಾಪಸ್ ಪಡೆದೆ. ಹಾಗಾದ್ರೆ ನಮ್ಮ ಅಕ್ಕನ ಸಾವು ಸಾವಲ್ಲವಾ(?). ನಮ್ಮ ಅಕ್ಕ ಈ ರೀತಿ ಮಾಡಿದ್ದರು ಅಂತ ಮಾತಾಡಿದ್ದಾರೆ ಎಂದು ಭಾವುಕರಾಗಿ ಮಾತನಾಡಿದ್ದಾರೆ.

ಇನ್ನು ನಮ್ಮ ತಂದೆ ನಮ್ಮ ಅಕ್ಕ ಕೊನೆಯ ಗಳಿಗೆವರೆಗೂ ಮಾಧ್ಯಮಕ್ಕೆ ಸೇವೆ ಮಾಡಿದ್ದಾರೆ. ನಮ್ಮ ಅಕ್ಕ ಒಂದು ಸಿದ್ಧಾಂತಕ್ಕಾಗಿ ಸಾವು ಅನುಭವಿಸಬೇಕಿತ್ತಾ(?) ಎಸ್​ಐಟಿಗೆ ಹ್ಯಾಟ್ಸ್ ಆಫ್. ಗೌರಿ ಲಂಕೇಶ್ ಅವರ ಹಂತಕರು ಅರೆಸ್ಟ್ ಆಗಿದ್ದಾರೆ ಎಂದರು.

ಅಲ್ಲದೇ, ದಾಬೋಲ್ಕರ್, ಕಲಬುರ್ಗಿ ಅವರ ಸಾವಿನ ಹಂತಕರು. ಅವರು ಬಂಧನ ಆಗಬೇಕು. ನಮ್ಮ ಅಕ್ಕ, ತಂದೆ ಕೊನೆಯ ಗಳಿಗೆವರೆಗೂ ಬರೆಯುತ್ತಲೇ ಸಾವನ್ನಪ್ಪಿದ್ದಾರೆ. ಇಂಡಸ್ಟ್ರಿಯಲ್ಲಿದ್ದು ಕಾರ್ ಅಪಘಾತ ಆದಾಗ ಚಿತ್ರರಂಗದಲ್ಲಿ ಮಾಫಿಯಾ ಇದೆ ಅಂದಾಗ ವಾಣಿಜ್ಯ ಮಂಡಳಿ ಏಕೆ ಪ್ರಶ್ನೆ ಮಾಡಿಲ್ಲ, ಬನ್ನಿ ಎಲ್ಲರೂ ಸೇರಿ ಸರಿಪಡಿಸೋಣ. ನನ್ನ ಮೇಲೆ ವಾಣಿಜ್ಯ ಮಂಡಳಿ ನೋಟಿಸ್​ ಕೊಟ್ಟರೆ ನಾನು ಕಾನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಇಂದ್ರಜಿತ್​ ಲಂಕೇಶ್ ಅವರು ತಿಳಿಸಿದ್ದಾರೆ.

Next Story

RELATED STORIES