Top

ಕಿಚ್ಚ ಸುದೀಪ್​ಗೆ ಕನ್ನಡದಲ್ಲೇ ಹುಟ್ಟುಹಬ್ಬದ ಶುಭಾಶಯ ಕೋರಿದ ತೆಲುಗು ಸ್ಟಾರ್​ ನಟ ಪವನ್ ಕಲ್ಯಾಣ್

ಸ್ಯಾಂಡಲ್​ವುಡ್​ ನಟ-ನಟಿರು ಸೇರಿ ಪರಭಾಷಾ ಸೆಲೆಬ್ರೆಟಿಗಳು ಸುದೀಪ್​ ಮತ್ತು ಪವನ್​ ಹುಟ್ಟುಹಬ್ಬಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಶುಭ ಕೋರಿದ್ದಾರೆ.

ಕಿಚ್ಚ ಸುದೀಪ್​ಗೆ ಕನ್ನಡದಲ್ಲೇ ಹುಟ್ಟುಹಬ್ಬದ ಶುಭಾಶಯ ಕೋರಿದ ತೆಲುಗು ಸ್ಟಾರ್​ ನಟ ಪವನ್ ಕಲ್ಯಾಣ್
X

ಬೆಂಗಳೂರು: ಪವರ್​ ಸ್ಟಾರ್​ ಪವನ್​ ಕಲ್ಯಾಣ್, ಅಭಿಮಾನಿಗಳ ಆರಾಧ್ಯ ದೈವ. ಬರೀ ಚಿತ್ರರಂಗ ಮಾತ್ರವಲ್ಲ ಈಗ ಜನಸೇನಾ ಪಕ್ಷ ಕಟ್ಟಿ, ರಾಜಕೀಯ ರಂಗದಲ್ಲೂ ಪವನ್​ ಸಕ್ರಿಯರಾಗಿದ್ದಾರೆ. ರಾಜಕಾರಣದ ಜೊತೆಜೊತೆಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಜನಸೇನಾನಿ ಕನ್ನಡಾಭಿಮಾನ ಎಲ್ಲರ ಗಮನ ಸೆಳೆಯುತ್ತಿದೆ.

ಸೆಪ್ಟೆಂಬರ್​ ಎರಡಕ್ಕೆ ಬರೀ ಕಿಚ್ಚ ಸುದೀಪ್​ ಹುಟ್ಟುಹಬ್ಬ ಮಾತ್ರವಲ್ಲ. ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಹುಟ್ಟುಹಬ್ಬ ಕೂಡ. ಪ್ರತಿವರ್ಷದಂತೆ ಈ ವರ್ಷವೂ ಅಭಿಮಾನಿಗಳು ಸೇರಿದಂತೆ ಸ್ಯಾಂಡಲ್​ವುಡ್​ ಮತ್ತು ಅಕ್ಕಪಕ್ಕದ ಇಂಡಸ್ಟ್ರಿ ಸೆಲೆಬ್ರೆಟಿಗಳು ಸುದೀಪ್​ ಮತ್ತು ಪವನ್​ ಹುಟ್ಟುಹಬ್ಬಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಶುಭ ಕೋರಿದ್ದಾರೆ. ಕೊರೊನಾ ಹಾವಳಿ ಹಿನ್ನಲೆ ಈ ಬಾರಿ ಅಭಿಮಾನಿಗಳ ಜೊತೆ ಇಬ್ಬರು ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗಲಿಲ್ಲ.

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಸುದೀಪ್, ಪವನ್​ ಕಲ್ಯಾಣ್​ ಅವರಿಗೂ ಟ್ವೀಟ್​ ಮಾಡಿ ಶುಭಾಶಯ ಕೋರಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಪವನ್‌ ಕಲ್ಯಾಣ್‌ ಸರ್‌. ನಿಮಗೆ ಇನ್ನಷ್ಟು ಯಶಸ್ಸು, ಆರೋಗ್ಯ ಸಿಗಲಿ. ಮುಂಬರುವ ದಿನಗಳು ಚೆನ್ನಾಗಿರಲಿ' ಅಂತ ಸುದೀಪ್​ ಟ್ವೀಟ್​ ಮಾಡಿದ್ದರು. ಸುದೀಪ್​ ಟ್ವೀಟ್​ಗೆ ಪವನ್​ ಕಲ್ಯಾಣ್​ ಕನ್ನಡದಲ್ಲೇ ಪ್ರತಿಕ್ರಿಯಿಸಿರೋದು ಗಮನ ಸೆಳೆಯುತ್ತಿದೆ.

ಪ್ರಿಯ ಕಿಚಾ ಸುದೀಪ್ ಜೀ, ನಿಮ್ಮ ಬೆಚ್ಚಗಿನ ಹುಟ್ಟುಹಬ್ಬದ ಶುಭಾಶಯಗಳಿಗಾಗಿ ತುಂಬಾ ಧನ್ಯವಾದಗಳು. 'ಪೈಲ್ವಾನ್' ನಲ್ಲಿ ನಿಮ್ಮ ಅಭಿನಯವನ್ನು ನಾನು ನಿಜವಾಗಿಯೂ ಆನಂದಿಸಿದೆ. ನಾವಿಬ್ಬರು ಜನ್ಮದಿನಾಂಕ ಒಂದೇ ಅಂತ ಗೊತ್ತಾಯ್ತು. ನಿಮಗೂ ಹುಟ್ಟುಹಬ್ಬದ ಶುಭಾಶಯಗಳು ಅಂತ ಪವನ್​ ಕಲ್ಯಾಣ್​ ಟ್ವೀಟ್​ನಲ್ಲಿ ತಿಳಿಸಿದ್ದಾರೆ. ಇವರಿಬ್ಬರ ಈ ಟ್ವೀಟ್ ಸಂಭಾಷಣೆ ಈಗ ವೈರಲ್ಲಾಗಿದೆ.

ಪವನ್​ ಕಲ್ಯಾಣ್​ ಕನ್ನಡದಲ್ಲಿ ಟ್ವೀಟ್​ ಮಾಡಿ ಕಿಚ್ಚನಿಗೆ ಶುಭಾಶಯ ಕೋರಿದ್ದಕ್ಕೆ ಸುದೀಪಿಯನ್ಸ್​​ ಖುಷಿಯಾಗಿದ್ದಾರೆ. ಇನ್ನು ಪವನ್​ ಕಲ್ಯಾಣ್​ ಹುಟ್ಟುಹಬ್ಬದ ಸಂಭ್ರಮದಲ್ಲೇ ಮೂರು ಹೊಸ ಸಿನಿಮಾಗಳನ್ನ ಘೋಷಿಸಲಾಗಿದೆ. ಪವರ್​ ಸ್ಟಾರ್​ ನಟಿಸ್ತಿರೋ ವಕೀಲ್​ ಸಾಬ್​ ಮೋಷನ್​ ಪೋಸ್ಟರ್​ ರಿವೀಲ್​ ಆಗಿದೆ.

ಇನ್ನು ಈ ವರ್ಷ ಪವನ್​ ಕಲ್ಯಾಣ್​ ಹುಟ್ಟುಹಬ್ಬದ ದಿನ ಸೂತಕದ ವಾತಾವರಣ ನಿರ್ಮಾಣವಾಗಿತ್ತು. ತಮ್ಮ ನೆಚ್ಚಿನ ನಟನ ಬ್ಯಾನರ್‌ ಕಟ್ಟುತ್ತಿದ್ದ ವೇಳೆ ಮೂವರು ಅಭಿಮಾನಿಗಳು ವಿದ್ಯುತ್​ ತಂತಿ ತಗುಲಿ ಮೃತಪಟ್ಟ ಘಟನೆ ಚಿತ್ತೂರು ಜಿಲ್ಲೆಯಲ್ಲಿ ವರದಿಯಾಗಿದೆ. ಅಭಿಮಾನಿಗಳ ನಿಧನಕ್ಕೆ ಪವನ್​ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ಕೊಡೋದಾಗಿ ಜನಸೇನಾ ಪಕ್ಷ ಘೋಷಿಸಿದೆ.

Next Story

RELATED STORIES