Top

ಧರ್ಮಸ್ಥಳ ಶ್ರೀಮಂಜುನಾಥನ ಸನ್ನಿಧಿಯಲ್ಲಿ 'ಶಿವಾನಿ'ಯ ತುಂಟಾಟ ಜೋರು

  • ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಕಳೆದ ಒಂದು ತಿಂಗಳ ಹಿಂದೆ ಹೊಸ ಅತಿಥಿಯ ಆಗಮನ.
  • ಶಿವನ ರಕ್ಷಣೆಯಲ್ಲಿರುವ ಶಿವಾನಿಯ ತುಂಟಾಟ.
  • ಶ್ರೀಕ್ಷೇತ್ರ ಧರ್ಮಸ್ಥಳದ ಹೊಸ ಅತಿಥಿಗೆ ನಾಮಕರಣದ ಸಂಭ್ರಮ.

ಧರ್ಮಸ್ಥಳ ಶ್ರೀಮಂಜುನಾಥನ ಸನ್ನಿಧಿಯಲ್ಲಿ ಶಿವಾನಿಯ ತುಂಟಾಟ ಜೋರು
X

ಬೆಳ್ತಂಗಡಿ, ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಕಳೆದ ಒಂದು ತಿಂಗಳ ಹಿಂದೆ ಹೊಸ ಅತಿಥಿಯ ಆಗಮನವಾಗಿತ್ತು. ಇಂದು ಆ ಹೊಸ ಅತಿಥಿಗೆ ನಾಮಕರಣ ಮಾಡಲಾಯಿತು. ಆ ಮುದ್ದು ಕಂದಮ್ಮ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ. ಯಾಕಂದ್ರೆ ಅಷ್ಟು ತುಂಟಿ ಅವಳು. ಅಷ್ಟು ಆ ತುಂಟ ಅತಿಥಿ ಯಾರು. ಅವಳ ನಾಮಕರಣದ ಸಂಭ್ರಮ ಹೇಗಿತ್ತು.

ನಿಂತಲ್ಲಿ ನಿಲ್ಲಲ್ಲ. ನೀರು ಅಂದ್ರೆ ಇವಳಿಗೆ ಪಂಚಪ್ರಾಣ. ಕೆಸರಾಟ ಅಂದ್ರೆ ಎಲ್ಲಿಲ್ಲದ ಹುರುಪು. ಬಾಲ್ ನಲ್ಲಿ ಆಡಲು ಸೈ. ಅಜ್ಜಿ ಮತ್ತು ಅಮ್ಮನ ಜೊತೆ ವಾಕಿಂಗ್ ಗೆ ಹೋಗಲು ಸೈ. ಅಂದಹಾಗೆ ಹೀಗೆ ತುಂಟಾಟ ಆಡುತ್ತಾ ಎಲ್ಲರ ನ ಸೆಳೆದು ಕಳೆದ ಒಂದು ತಿಂಗಳಿನಿಂದ ಎಲ್ಲರ ನ ಸೆಳೆಯುತ್ತಿರುವ ಇವಳು ಧರ್ಮಸ್ಥಳ ವಾಸಿನಿ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಜನ್ಮ ಒಡೆದ ಮೊದಲ ಆನೆ ಮರಿ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳದ ಆನೆ ಲಕ್ಷ್ಮೀ ಕಳೆದ ಜುಲೈ 1ರಂದು ಹೆಣ್ಣು ಮರಿಗೆ ಜನ್ಮ ನೀಡಿದ್ದು ಆ ಆನೆ ಮರಿಯ ನಾಮಕರಣ ಇಂದು ರಂದು ತುಲಾ ಲಗ್ನ ಮುಹೂರ್ತದಲ್ಲಿ ನಡೆಯಿತು.

ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಆನೆ ಮರಿಗೆ ಶ್ರೀ ದೇವರ ಪ್ರಸಾದ ನೀಡಿ, ಗಂಟೆ ಕಟ್ಟುವ ಮೂಲಕ ವಿಧಿ ನೆರವೇರಿಸಿದರು. ಧರ್ಮಸ್ಥಳದ ಡಾ.ಡಿ.ಹೆಗ್ಗಡೆ ಮೊಮ್ಮಗಳು ಮಾನ್ಯ ಶಿವಾನಿ ಹೆಸರು ಉದ್ಘೋಶಿಸುವ ಮೂಲಕ ನಾಮಕರಣ ಮಾಡಿದರು. ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಆನೆಯ ಮಾವುತ ಕೃಷ್ಣ ರಿಗೆ ಸನ್ಮಾನ ನೆರವೇರಿಸಿದರು. ಧರ್ಮಸ್ಥಳದಲ್ಲಿ ಸಾಕಾನೆಯೊಂದು ಇದೆ ಮೊದಲ ಭಾರೀಗೆ ಮರಿ ಹಾಕಿತ್ತು. ಆದರಿಂದ ಇದರ ನಾಮಕರಣವನ್ನು ಅಮೃತವರ್ಷಿಣಿ ಸಭಾಂಗಣದಲ್ಲಿ ಅದ್ದೂರಿಯಾಗೆ ಏರ್ಪಡಿಸಲಾಗಿತ್ತು. ಹೆಗ್ಗೆಡೆ ಕುಟುಂಬಸ್ಥರು ಈ ಕಾರ್ಯದಲ್ಲಿ ಭಾಗವಹಿಸಿದ್ದರು. ಇನ್ನು ಈ ಆನೆ ಮರಿಗೆ ಶಿವಾನಿ ಎಂಬ ಹೆಸರನ್ನು ಇಡಲಾಯ್ತು. ಶಿವಾನಿ ಜೊತೆ ಆಕೆಯ ತಾಯಿ ಲಕ್ಷ್ಮಿ ಮತ್ತು ಅಜ್ಜಿಯ ಉಪಸ್ಥಿತಿ ಎಲ್ಲರನ್ನು ಆಕರ್ಷಿಸಿತು. ಭೂರಿ ಭೋಜನವನ್ನು ಆನೆಗಳಿಗೆ ಅಲ್ಲಿ ನೀಡಲಾಯ್ತು. ಇನ್ನು ಆನೆಗೆ ಬಲು ಇಷ್ಟವಾದ ನೀರಿನ ಪೂಲ್, ಆಟವಾಡಲು ಬಾಲ್ ಇಡಲಾಗಿತ್ತು. ತನ್ನ ನಾಮಕರಣ ಆದ ಖುಷಿಯಲ್ಲಿ ಶಿವಾನಿ ಕುಣಿದು ಕುಪ್ಪಳಿಸಿದಳು.

ಇನ್ನು ಭಕ್ತರಿಗೆ ಇಂದು ಡಬಲ್ ಧಮಾಕವಾಗಿತ್ತು. ಒಂದು ಕಡೆ ಸಾಕ್ಷತ್ ಶಿವನ ದರ್ಶನವಾದ್ರೆ ಮತ್ತೊಂದು ಕಡೆ ಶಿವಾನಿಯ ನಾಮಕರಣದ ದರ್ಶನವಾಯ್ತು. ಜೊತೆಗೆ ಅವಳ ತುಂಟಾಟ ಎಲ್ಲರನ್ನು ರಂಜಿಸಿತು. ಬಂದ ಭಕ್ತಗಣ ಈಕೆಯ ತುಂಟಾಟಕ್ಕೆ ಮನಸೋತು ಹೋದರು. ಬಂದವರೆಲ್ಲಾ ಈ ಪೋರಿಯ ಜೊತೆ ಫೋಟೊ ತೆಗಸಿಕೊಂಡರು. ಈಕೆಯ ಸೆಲ್ಫಿಗೆ ಮುಗಿಬಿದ್ದರು. ಇನ್ನು ಹೆಗ್ಗಡೆ ಕುಟುಂಬದ ಕುಡಿಗಳು ಕೂಡ ಆನೆಯೊಂದಿಗೆ ಆಟ ಆಡಿ ಎಂಜಾಯ್ ಮಾಡಿದರು.

ಇನ್ನು ಈಕೆಯ ತುಂಟಾಟಗಳ ವೀಡಿಯೋ ಫುಲ್ ವೈರಲ್ ಆಗ್ತಾ ಇದೆ. ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರು ಈ ಮರಿ ಆಟ ನೋಡದೆ ವಾಪಾಸ್ ಹೋಗೊದು ವಿರಳವಾಗಿದೆ. ಅದೇನೆ ಇದ್ದರು ಇನ್ನು ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ಶಿವ ಮಂಜುನಾಥಸ್ವಾಮಿ ದರ್ಶನದ ಜೊತೆಗೆ ಶಿವಾನಿಯ ತುಂಟಾಟದ ಅನುಭವವು ಆಗುತ್ತದೆ.

Next Story

RELATED STORIES