Top

ನೊಂದವರ ಬಾಳಿಗೆ ಬೆಳಕಾದ ಸ್ಯಾಂಡಲ್ವುಡ್ ಮಾಣಿಕ್ಯ..

ಕಿಚ್ಚ ಮತ್ತೊಂದು ವಿಚಾರದಲ್ಲಿ ಮಾನವೀಯತೆ ಮೆರೆದಿದ್ದಾರೆ. ಹರಿಜನ ಹೆಣ್ಣುಮಕ್ಕಳ ಶಾಲೆಗೆ ಅತ್ಯಂತ ಅಗತ್ಯವಿದ್ದ ಸಹಾಯ ಮಾಡಿದ್ದಾರೆ

ನೊಂದವರ ಬಾಳಿಗೆ ಬೆಳಕಾದ ಸ್ಯಾಂಡಲ್ವುಡ್ ಮಾಣಿಕ್ಯ..
X

ಸ್ಯಾಂಡಲ್​ವುಡ್​ ಬಾದ್ಶಾ ಕಿಚ್ಚ ಸುದೀಪ್ ರೀಲ್​ನಲ್ಲಿ ಮಾತ್ರ ಹೀರೋ ಅಲ್ಲ. ರಿಯಲ್​ ಲೈಫ್​ನಲ್ಲೂ ಹೀರೋ ಅನ್ನೋದನ್ನ ಬಹಳಷ್ಟು ಸಾರಿ ಪ್ರೂವ್​ ಮಾಡಿದ್ದಾರೆ. ಇದೀಗ ಮಾಣಿಕ್ಯ ಸುದೀಪ್, ಹುಬ್ಬಳ್ಳಿಯ ಶಾಲಾ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಕಲಿಕೆಗೆ ಸೂರಿಲ್ಲದ ಮಕ್ಕಳಿಗೆ ಸೂರನ್ನ ಒದಗಿಸಿದ್ದಾರೆ.

ಸಿನಿಮಾಗಳ ಜೊತೆಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಅತಿ ಹೆಚ್ಚು ಸಾಮಾಜಿಕ ಕಳಕಳಿ ಹೊಂದಿರುವ ನಟ ಸುದೀಪ್​ , ಯಾರೇ ಆಗಲಿ ಕಷ್ಟ ಅಂದಾಗ ಸ್ಪಂದಿಸಿದ್ದಾರೆ. ಅದರಲ್ಲೂ ಶಿಕ್ಷಣದ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆಯೇ ಇಟ್ಟಿದ್ದಾರೆ. ಈಗಾಗಲೇ ಬೇರೆ ಬೇರೆ ಜಿಲ್ಲೆಗಳಲ್ಲಿ ಸಾಕಷ್ಟು ಶಾಲೆಗಳನ್ನ ದತ್ತು ಪಡೆದಿರೋದು ಗೊತ್ತೇಯಿದೆ.

ಇದೀಗ ಕಿಚ್ಚ ಮತ್ತೊಂದು ವಿಚಾರದಲ್ಲಿ ಮಾನವೀಯತೆ ಮೆರೆದಿದ್ದಾರೆ. ಹರಿಜನ ಹೆಣ್ಣುಮಕ್ಕಳ ಶಾಲೆಗೆ ಅತ್ಯಂತ ಅಗತ್ಯವಿದ್ದ ಸಹಾಯ ಮಾಡಿ, ಆ ಹೆಣ್ಣುಮಕ್ಕಳ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ.

ಹುಬ್ಬಳ್ಳಿಯ ಹರಿಜನ ಅನುದಾನಿತ ಹೆಣ್ಣುಮಕ್ಕಳ ಶಾಲೆಯನ್ನ ಸ್ಥಳಾಂತರಿಸೋ ಪರಿಸ್ಥಿತಿ ಎದುರಾದಾಗ, ಮುಂದೇನು ಅಂತ ಕಂಗಾಲಾಗಿ ಕಣ್ಣೀರು ಹಾಕ್ತಿದ್ದ, ಈ ಮಕ್ಕಳ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಈ ವಿಡಿಯೋ ಸುದೀಪ್ ಗಮನಕ್ಕೆ ಬಂದಿದ್ದೇ ತಡ ಸಹಾಯಕ್ಕೆ ಮುಂದಾಗಿದ್ದಾರೆ. ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್ನವರು ತಕ್ಷಣವೇ ಹುಬ್ಬಳ್ಳಿಗೆ ಭೇಟಿ ನೀಡಿ ಶಾಲೆಯ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿ, ಈಗಾಗಲೇ ಬೇರೊಂದು ಕಡೆ ಸ್ಥಳದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಈಗಾಗಲೇ ಶಾಲೆ ಶುರುವಾಗಿದ್ದು, ಆಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮುಂದುವರೆದಿದೆ.

ಇನ್ನು ಇಡೀ ಹರಿಜನ ಶಾಲೆಯ ಹೆಣ್ಣುಮಕ್ಕಳು ವಿಡಿಯೋ ಕಾಲ್​ನಲ್ಲಿ ಸುದೀಪ್​ರೊಂದಿಗೆ ಮಾತನಾಡಿ ಖುಷಿಪಟ್ಟಿದ್ದಾರೆ..ಶಾಲೆಯ ಎಲ್ಲಾ ಶಿಕ್ಷಕರು ಕೂಡ ಸುದೀಪ್​​ರಿಗೆ ಧನ್ಯವಾದ ತಿಳಿಸಿದ್ದಾರೆ.

Next Story

RELATED STORIES