Top

ಆರ್​ಸಿಬಿ ಜೆರ್ಸಿಯಲ್ಲಿ ಮಿಂಚಿದ ಸ್ಯಾಂಡಲ್​​ವುಡ್​ ಸೆಂಚುರಿ ಸ್ಟಾರ್​ ಶಿವಣ್ಣ

  • ಆರ್​ಸಿಬಿ ತಂಡಕ್ಕೆ ಸ್ಯಾಂಡಲ್​ವುಡ್​ ಸೆಂಚುರಿ ಸ್ಟಾರ್ ಶಿವಣ್ಣ ಜೈ.
  • ಆರ್​ಸಿಬಿ ಜೆರ್ಸಿ ತೊಟ್ಟು ಶಿವರಾಜ್​​​ ಕುಮಾರ್​ ಮಿಂಚಿಂಗ್.
  • ಆರ್​​ಸಿಬಿ ಫ್ಯಾನ್ಸ್ ಜೊತೆ ಫೋಟೊ ಕ್ಲಿಕ್ಕಿಸಿದ ಹ್ಯಾಟ್ರಿಕ್ ಹೀರೋ.
  • 'ಲೀಡರ್' ಜೋಶ್​ ನೋಡಿ ಫಾನ್ಸ್​ ಫುಲ್ ಖುಷ್​.

ಆರ್​ಸಿಬಿ ಜೆರ್ಸಿಯಲ್ಲಿ ಮಿಂಚಿದ ಸ್ಯಾಂಡಲ್​​ವುಡ್​ ಸೆಂಚುರಿ ಸ್ಟಾರ್​ ಶಿವಣ್ಣ
X

ರಾಯಲ್​ ಚಾಲೆಂಜರ್ಸ್​​ ಬೆಂಗಳೂರು (ಆರ್​ಸಿಬಿ) ಜೆರ್ಸಿಯಲ್ಲಿ ಮಿಂಚಿದ ಸ್ಯಾಂಡಲ್​​ವುಡ್​ ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್

ದೂರದ ದುಬೈನಲ್ಲಿ ಭಾರತದ ಕ್ರಿಕೆಟ್​ ಜಾತ್ರೆ ಜೋರಾಗಿದೆ. ದಿನದಿಂದ ದಿನಕ್ಕೆ ಐಪಿಎಲ್​​ ಕ್ರಿಕೆಟ್ ಫೀವರ್​​ ಹೆಚ್ಚಾಗ್ತಾ ಇದೆ. ಅದರಲ್ಲೂ ಕರ್ನಾಟಕದ ಕ್ರಿಕೆಟ್​ ಅಭಿಮಾನಿಗಳು ಆರ್​​ಸಿಬಿ ಗುಂಗಿನಲ್ಲಿ ಮುಳುಗಿಬಿಟ್ಟಿದ್ದಾರೆ. ಸ್ಯಾಂಡಲ್​​ವುಡ್​ ಸ್ಟಾರ್​​​ಗಳು ಆರ್​​​ಸಿಬಿಗೆ ಚಿಯರ್​ ಮಾಡಿ ಫಾನ್ಸ್ ಜೋಶ್​ ಹೆಚ್ಚಿಸುತ್ತಿದ್ದಾರೆ. ಇದೀಗ ಸ್ಯಾಂಡಲ್​ವುಡ್ ಲೀಡರ್, ಸೆಂಚುರಿ ಸ್ಟಾರ್ ಶಿವರಾಜ್​​ಕುಮಾರ್​​​​​ ಆರ್​​ಸಿಬಿಗೆ ಉಘೇ ಉಘೇ ಎಂದಿದ್ದಾರೆ.

ಸ್ಯಾಂಡಲ್​ವುಡ್​ ಸೆಂಚುರಿ ಸ್ಟಾರ್​ ಆರ್​​ಸಿಬಿಗೆ ಜೈ ಎಂದಿದ್ದಾರೆ. ಆರ್​​​ಸಿಬಿ ಜೆರ್ಸಿ ತೊಟ್ಟು ಫೋಟೋಗೆ ಫೋಸ್​ಕೊಟ್ಟಿದ್ದಾರೆ. ಬೆಂಗಳೂರು ತಂಡ ಜೆರ್ಸಿಯಲ್ಲಿ ಶಿವಣ್ಣ ಪಳಪಳನೇ ಮಿಂಚಿದ್ದಾರೆ. ಶಿವಣ್ಣ ಅಂದ್ರೆ ಎನರ್ಜಿ..! ಎನರ್ಜಿ ಅಂದ್ರೆ ಶಿವಣ್ಣ..! ತೆರೆಮೇಲೆ ಕಾಣುವ ಶಿವಣ್ಣನ ಎನರ್ಜಿ ಈ ಫೋಟೊಗಳಲ್ಲಿ ಕೂಡ ಕಾಣಿಸ್ತಿದೆ. ಸಿನಿಮಾದಲ್ಲಿ ಸೆಂಚುರಿ ಹೊಡೆದಿದ್ದು ಟಿ20 ಅಖಾಡದಲ್ಲೂ ಸೆಂಚುರಿ ಹೊಡೆಯೋದಕ್ಕೆ ಸಿದ್ಧ ಅನ್ನುವಂತಿದೆ ಶಿವಣ್ಣನ ಲುಕ್.

ಶಿವಣ್ಣ ಏನೇ ಮಾಡಿದ್ರೂ ಅಲ್ಲೊಂದು ವೈಬ್ರೇಷನ್ ಇರುತ್ತೆ. ಇದೀಗ ಆರ್​ಸಿಬಿ ಜೆರ್ಸಿ ತೊಟ್ಟಿರುವ ಸ್ಯಾಂಡಲ್​ವುಡ್​ ಲೀಡರ್​​ ಆರ್​​ಸಿಬಿ ಅಭಿಮಾನಿಗಳಲ್ಲಿ ವೈಬ್ರೇಷನ್ ಸೃಷ್ಟಿಸಿದ್ದಾರೆ. ಆರ್​ಸಿಬಿ ಕಾಪ್ಟನ್​ ವಿರಾಟ್​​​ ಕೊಹ್ಲಿ ರಗಡ್​ ಪೋಸ್ಟರ್​ ಬಳಿ ನಿಂತು ಸಖತ್ ಪೋಸ್​​ ಕೊಟ್ಟಿದ್ದಾರೆ ಹ್ಯಾಟ್ರಿಕ್​​ ಹೀರೋ. ವಿರಾಟ್​ ಕೊಹ್ಲಿ ಕಣ್ಣಿನಲ್ಲಿ ಕಾಣುತ್ತಿರುವ ಬೆಂಕಿ. ಶಿವಣ್ಣ ಕಣ್ಣಿನಲ್ಲೂ ಎದ್ದು ಕಾಣಿಸುತ್ತಿದ್ದಾರೆ.

ಆರ್​ಸಿಬಿ ಫಾನ್ಸ್​ ಜೊತೆ ಕೂಡ ಹ್ಯಾಟ್ರಿಕ್​ ಹೀರೋ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸ್ಯಾಂಡಲ್​ವುಡ್ ಲೀಡರ್, ಜೋಶ್ ನೋಡಿ ಫಾನ್ಸ್​ ಫುಲ್​ ಖುಷ್ ಆಗಿದ್ದಾರೆ. ಅದರಲ್ಲೂ ಆರ್​ಸಿಬಿಯ ಅಪ್ಪಟ ಅಭಿಮಾನಿಯಾಗಿರುವ ಸುಕುಮಾರ್ ಜೊತೆ ಶಿವಣ್ಣ ಫೋಸ್​ ಕೊಟ್ಟಿರೋದು ಜರ್ಬದಸ್ತ್​ ಆಗಿ ಕಾಣಿಸುತ್ತಿದೆ. ಸುಕುಮಾರ್​ ಆರ್​ಸಿಬಿ ಪಂದ್ಯಗಳು ನಡೆಯುವ ವೇಳೆ ಮೈದಾನಕ್ಕೆ ಹೋಗಿ ಇದೇ ವೇಷಭೂಷಣದಲ್ಲಿ ತಂಡಕ್ಕೆ ಚಿಯರ್ ಮಾಡುತ್ತಿದರು. ಆದರೆ, ಈ ಬಾರಿ ಕೊರೊನಾ ಇರೋದ್ರಿಂದ ಬೆಂಗಳೂರಿನಲ್ಲೇ ಇದ್ದುಕೊಂಡು ಚಿಯರ್ ಮಾಡುತ್ತಿದ್ದಾರೆ. ಇದೀಗ ಸುಕುಮಾರ್​ ಶಿವಣ್ಣ ಜೊತೆ ಕಾಣಿಸಿಕೊಂಡು ಆರ್​​ಸಿಬಿ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದ್ದಾರೆ.

ಶಿವಣ್ಣನಿಗೆ ಕ್ರಿಕೆಟ್ ಅಂದ್ರೆ ಅಚ್ಚುಮೆಚ್ಚು. ಹಾಗೆ ನೋಡಿದ್ರೆ ಅವರ ಹೆಸರಿನಲ್ಲೇ ಕ್ರಿಕೆಟ್​ ತುಂಬಿಕೊಂಡಿದೆ. ಸೆಂಚುರಿ. ಹ್ಯಾಟ್ರಿಕ್​​. ಲೀಡರ್​. ಶಿವಣ್ಣನ ಹೆಸರಿನಲ್ಲಿದೆ. ಇದೀಗ ಆರ್​ಸಿಬಿ ಜೆರ್ಸಿ ತೊಟ್ಟು ಮಿಂಚಿರುವ ಶಿವಣ್ಣ ಲುಕ್​ ನೋಡಿ ಫಾನ್ಸ್ ಫುಲ್ ಫಿದಾ ಆಗಿದ್ದಾರೆ.

Next Story

RELATED STORIES