Top

ರಾಹುಲ್ ಜೊತೆ ಆರ್​ .ಅಶೋಕ್​ ಇದ್ದ ಪೋಟೋ ಬಹಿರಂಗ, ಸ್ಪಷ್ಟನೆ

ರಾಹುಲ್ ಜೊತೆ ಆರ್​ .ಅಶೋಕ್​ ಇದ್ದ ಪೋಟೋ ಬಹಿರಂಗ, ಸ್ಪಷ್ಟನೆ
X

ಬೆಂಗಳೂರು: ಡೀಮ್ಡ್ ಫಾರೆಸ್ಟ್ ಮತ್ತು ಕಂದಾಯ ಜಮೀನು ಬಗ್ಗೆ ತಕರಾರಿತ್ತು. 6 ಲಕ್ಷ ಹೆಕ್ಟರ್ ಕಂದಾಯ ಇಲಾಖೆಗೆ ಬಿಟ್ಟುಕೊಡುವುದು. ಅರಣ್ಯ ಇಲಾಖೆಗೆ 3.3 ಲಕ್ಷ ಹೆಕ್ಟರ್ ಅನ್ನು ಬಿಟ್ಟುಕೊಡುವ ಬಗ್ಗೆ ಇಂದಿನ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ ಎಂದು ಕಂದಾಯ ಸಚಿವ ಆರ್​ ಅಶೋಕ್ ಅವರು ಸೋಮವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನೆರೆ ಪರಿಹಾರಕ್ಕಾಗಿ ಕೇಂದ್ರಕ್ಕೆ ಪರಿಹಾರ ಕೇಳಲು ಹೋಗಲು ತೀರ್ಮಾನ ಮಾಡಿದ್ದೇವೆ. ಸಿಎಂ ಮತ್ತು ನಾವು ಸೇರಿ ಹೋಗಬೇಕು. ಆ ಬಗ್ಗೆ ಇನ್ನೂ ತೀರ್ಮಾನ ವಾಗಿಲ್ಲ. ಹೆಚ್ಚಿನ ಅನುದಾನ ಕೇಳಬೇಕು ಅಂತಾ ಅಂದುಕೊಂಡಿದ್ದೇವೆ ಎಂದರು.

ಇದೇ ವೇಳೆ ಡ್ರಗ್ಸ್​ ದಂಧೆಯ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಂಬಂಧ ಇಂಪಾರ್ಟೆಂಟ್, ನನಗೂ ಅವನಿಗೂ ಯಾವ ಸಂಬಂಧವೂ ಇಲ್ಲ. ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡಿರೋರನ್ನ ಮುಲಾಜಿಲ್ಲದೇ ಒಳಗೆ ಹಾಕ್ತೀವಿ ಎಂದು ಖಡಕ್​ ಆಗಿ ಹೇಳಿದ್ದಾರೆ.

ರಾಹುಲ್ ಜೊತೆ ಅಶೋಕ್ ಇದ್ದ ಫೋಟೊ ಬಹಿರಂಗವಾದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಸಿದ್ದರಾಮಯ್ಯ ಜೊತೆ, ಡಿ.ಕೆ. ಶಿವಕುಮಾರ್ ಜೊತೆಗೂ ಫೋಟೊ ಇದೆ. ಕಮಿಷನರ್ ಜೊತೆಗೂ ಅವರ ಫೋಟೊ ಇದೆ. ಹಾಗಾದರೆ ಅವರೆಲ್ಲಾ ಅಪರಾಧಿಗಳೇ(?) ಎಂದು ಪ್ರಶ್ನೆ ಮಾಡಿದರು.

ನನ್ನ ಕ್ಷೇತ್ರದಲ್ಲಿ ನಾಮಕರಣ ಕಾರ್ಯಕ್ರಮದಲ್ಲಿ ಅವರೇ ಬಂದು ಫೋಟೊ ತೆಗೆಸಿಕೊಂಡಿದ್ದಾರೆ. ಸಮಾರಂಭದಲ್ಲಿ ಶಾಲು ಹಾಕೋದು ,ಕೇಕ್ ತಿನಿಸ್ತಾರೆ. ಅದನ್ನೆಲ್ಲಾ ನಾವು ಪಬ್ಲಿಕ್ ಫಿಗರ್ ಆಗಿ, ಬೇಡ ಅನ್ನೋಕೆ ಆಗಲ್ಲ. ನನಗೂ ಅವನಿಗೂ ಯಾವ ಸಂಬಂಧವೂ ಇಲ್ಲ. ಅವ ನನಗೆ ಫೋನ್ ಮಾಡಿಲ್ಲ. ನಾನು ಅವನಿಗೆ ಫೋನ್ ಮಾಡಿಲ್ಲ. ರಾಗಿಣಿ ಜೊತೆಗೂ ನಾವು ಮಾಸ್ಕ್ ಡೇ ದಿನ ಪಾದಯಾತ್ರೆ ಮಾಡಿದ್ದೆವು. ಹಾಗಾದರೆ ನಮ್ಮನ್ನೂ ಸೇರಿಸಿಬಿಡ್ತೀರೇನು(?) ಎಂದಿದ್ದಾರೆ.

Next Story

RELATED STORIES