Top

ಮೆಗಾಸ್ಟಾರ್​ ಹೊಸ​ ಲುಕ್​ ನೋಡಿ ಅಭಿಮಾನಿಗಳು ಶಾಕ್..!

  • ತಲೆ ಬೋಳಿಸಿಕೊಂಡು ಸನ್ಯಾಸಿ ಅವತಾರ ತಾಳಿದ್ರಾ ಚಿರು(?)
  • 'ವೇದಾಳಂ' ರೀಮೇಕ್​ ಲುಕ್​ ಟೆಸ್ಟ್​​ಗಾಗಿ ಚಿರು ಹೊಸ ಪ್ರಯತ್ನ.

ಮೆಗಾಸ್ಟಾರ್​ ಹೊಸ​ ಲುಕ್​ ನೋಡಿ ಅಭಿಮಾನಿಗಳು ಶಾಕ್..!
X

ಕಳೆದೆರಡು ದಿನಗಳಿಂದ ಮೆಗಾಸ್ಟಾರ್​ ಚಿರಂಜೀವಿ ಫೋಟೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ಲಾಗಿದೆ. ಹಿಂದೆಂದು ಮೆಗಾ ಫ್ಯಾನ್ಸ್ ತಮ್ಮ ನೆಚ್ಚಿನ ನಟನನ್ನ ಈ ಅವತಾರದಲ್ಲಿ ನೋಡೇಯಿಲ್ಲ. ಅಷ್ಟಕ್ಕೂ ಏನಿದು ಮೆಗಾಸ್ಟಾರ್​ ಹೊಸ ಅವತಾರದ ಕಥೆ(?)

ಚಿರಂಜೀವಿ. ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಟಾಲಿವುಡ್​​​ನ ಸೂಪರ್ ಸುಪ್ರೀಂ ಸ್ಟಾರ್. ಇವತ್ತಿಗೂ ಚಿರಂಜೀವಿ ಕಾಲ್​ ಶೀಟ್​​ಗೆ ನಿರ್ಮಾಪಕರು ಕ್ಯೂ ನಿಲ್ತಾರೆ. ಕೇಳಿದಷ್ಟು ಸಂಭಾವನೆ ಕೊಟ್ಟು ತಮ್ಮ ಚಿತ್ರದ ಹೀರೋ ಆಗಿ ಬುಕ್​ ಮಾಡಿಕೊಳ್ಳೋಕ್ಕೆ ಕಾಯ್ತಿರ್ತಾರೆ. ಪಾಲಿಟಿಕ್ಸ್​​ನಿಂದ ಮತ್ತೆ ಚಿತ್ರರಂಗಕ್ಕೆ ವಾಪಸ್​ ಆಗಿರೋ ಚಿರು, ದೊಡ್ಡ ದೊಡ್ಡ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನ ರಂಜಿಸ್ತಿದ್ದಾರೆ. ವಯಸ್ಸು 65 ದಾಟಿದ್ರು, ಚಿರು ಎನರ್ಜಿ ಮತ್ತು ಜೋಶ್​ ಕಿಂಚಿತ್ತೂ ಕಮ್ಮಿಯಾಗಿಲ್ಲ.

ಇತ್ತಿಚೆಗೆ ಸೋಷಿಯಲ್​ ಮೀಡಿಯಾದಲ್ಲಿ ಚಿರಂಜೀವಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಹೊಸ ಹೊಸ ಪೋಸ್ಟ್​​​ಗಳು, ಕಮೆಂಟ್​ಗಳ ಮೂಲಕ ಗಮನ ಸೆಳೀತ್ತಿದ್ದಾರೆ. ತಮ್ಮದೇ ಹೊಸ ಹೊಸ ಲುಕ್​ನ ಫೋಟೋಗಳನ್ನ ಶೇರ್​ ಮಾಡ್ತಿರ್ತಾರೆ. ಲಾಕ್​ಡೌನ್​ ಸಮಯದಲ್ಲಿ ತಮ್ಮನ್ನ ತಾವು ಪರೀಕ್ಷೆಗೆ ಒಡ್ಡಿಕೊಳ್ಳುತ್ತಿರುವ ಚಿರಂಜೀವಿ ಇತ್ತೀಚೆಗೆ ಗಡ್ಡ ಮೀಸೆ ತೆಗೆದು ದರ್ಶನ ಕೊಟ್ಟಿದರು. ಇದೀಗ ಏಕಾಏಕಿ ತಲೆ ಬೋಳಿಸಿಕೊಂಡು ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದಾರೆ.

ಸಂಪೂರ್ಣವಾಗಿ ಗುಂಡು ಹೊಡೆಸಿಕೊಂಡು ಸ್ಟೈಲಿಶ್​​​ ಸನ್​ಗ್ಲಾಸ್​​ ತೊಟ್ಟು ಚಿರಂಜೀವಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಸಿಟಿ ಸನ್ಯಾಸಿ​ ಅಂತ ಬರೆದುಕೊಂಡಿರುವ ಚಿರು, ನಾನು ​ ಸನ್ಯಾಸಿ ತರ ಯೋಚಿಸಬಹುದಲ್ಲವೆ(?) ಅಂತ ಕ್ಯಾಪ್ಷನ್​ ಕೊಟ್ಟು ಫೋಟೋ ಪೋಸ್ಟ್​ ಮಾಡಿದ್ದಾರೆ.

ಅಭಿಮಾನಿಗಳು ಚಿರಂಜೀವಿ, ಹೊಸ ಅವತಾರ ನೋಡಿ ಹುಬ್ಬೇರಿಸಿದ್ದಾರೆ. ಅಂದಹಾಗೆ ಚಿರಂಜೀವಿ, ಈವರೆಗೆ ಯಾವುದೇ ಸಿನಿಮಾದಲ್ಲೂ ಈ ತರ ಲುಕ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಚಿರು ಹೊಸ ಅವತಾರ ಕಂಡು ಫ್ಯಾಮಿಲಿ ಮೆಂಬರ್ಸ್​ ಕೂಡ ದಂಗಾಗಿದ್ದಾರೆ.. ಕಾಮೆಂಟ್​ ಬಾಕ್ಸ್​ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಅಭಿಮಾನಿಗಳಂತೂ ನೀವು ಯಾವುದೇ ಲುಕ್​ನಲ್ಲಿದ್ರು ಸೂಪರ್​, ಈ ಲುಕ್​​ ಕೂಡ ಬೊಂಬಾಟ್​ ಅಂತಿದ್ದಾರೆ.

ಸೈರಾ ನರಸಿಂಹ ರೆಡ್ಡಿ ನಂತರ ಚಿರು ಆಚಾರ್ಯ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಆಚಾರ್ಯ ನಂತ್ರ ತಮಿಳಿನ ವೇದಾಳಂ ರೀಮೇಕ್​ನಲ್ಲಿ ಚಿರು ನಟಿಸ್ತಿದ್ಧಾರೆ. ತಮಿಳಿನಲ್ಲಿ ಫ್ಲ್ಯಾಶ್​ ಬ್ಯಾಕ್​ನಲ್ಲಿ ಅಜಿತ್​​ ಹೆಚ್ಚು ಕಡಿಮೆ ಇದೇ ರೀತಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ವೇದಾಳಂ ರೀಮೇಕ್​ ಲುಕ್​ ಟೆಸ್ಟ್​​ಗಾಗಿ ಚಿರು, ತಲೆ ಬೋಳಿಸಿಕೊಂಡು ಈ ರೀತಿ ದರ್ಶನ ಕೊಟ್ಟಿದ್ದಾರೆ ಅನ್ನಲಾಗ್ತಿದೆ. ಇದೆಲ್ಲ ಒಂದ್ಕಡೆ ಇದ್ರೆ, ಕೆಲವರು ಚಿರು ಹೊಸ ಲುಕ್​ ಮೇಲೆ ಫನ್ನಿ ಕಾಮೆಂಟ್ಸ್​ ಮಾಡ್ತಿದ್ದಾರೆ.

Next Story

RELATED STORIES