Top

ಬಹುಶಃ ಅವರು ಪ್ರಧಾನಿ ಮೋದಿ ಬಗ್ಗೆ ಮಾತಾಡಿರಬೇಕು - ನಟ ಕಿಚ್ಚ ಸುದೀಪ್​

  • ನಾಳೆ ಹುಟ್ಟುಹಬ್ಬದ ಹಿನ್ನೆಲೆ ನಟ ಸುದೀಪ್​ ಇಂದು ತುಮಕೂರಿನಲ್ಲಿರುವ ಸಿದ್ದಗಂಗಾ ಶ್ರೀಗಳ ಮಠಕ್ಕೆ ಭೇಟಿ.
  • ಸುದೀಪ್​ ಜೊತೆಗೆ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಕೂಡ ಭೇಟಿ.

ಬಹುಶಃ ಅವರು ಪ್ರಧಾನಿ ಮೋದಿ ಬಗ್ಗೆ ಮಾತಾಡಿರಬೇಕು - ನಟ  ಕಿಚ್ಚ ಸುದೀಪ್​
X

ತುಮಕೂರು: ನಾಳೆ ನನ್ನ ಹುಟ್ಟುಹಬ್ಬ ಇರೋ ಪ್ರಯುಕ್ತ ಮಠಕ್ಕೆ ಬಂದಿದ್ದೇನೆ. ನನ್ನ ಕೈಲಾದ ಕೊಡುಗೆ ಕೊಡಬೇಕು ಅನ್ನೋ ಆಸೆಯಿಂದ ಬಂದಿದ್ದೇನೆ ಎಂದು ನಟ ಕಿಚ್ಚ ಸುದೀಪ್ ಅವರು ಮಂಗಳವಾರ ಹೇಳಿದ್ದಾರೆ.

ಸೆಪ್ಟೆಂಬರ್​ 2ರಂದು (ನಾಳೆ) ಸುದೀಪ್​ ಅವರ ಜನ್ಮದಿನವಾದರಿಂದ ತುಮಕೂರಿನ ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಶ್ರೀಗಳ ಮಠಕ್ಕೆ ಭೇಟಿ ನೀಡಿದರು ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಬಾರಿ ಸರಳವಾಗಿ ನನ್ನ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದ್ದೇನೆ. ಅಭಿಮಾನಿಗಳು ಯಾರು ಮನೆ ಬಳಿ ಬರೋದು ಬೇಡ. ಅಲ್ಲಿ ಸೇರಿದ್ರೇ ಎಲ್ಲರೂ ಹತ್ತಿರನೇ ನಿಲ್ತಾರೆ. ವಾಪಸ್ ಮನೆಗಳಿಗೆ ಸುರಕ್ಷಿತವಾಗಿ ಹೋಗ್ತಾರೆ ಅನ್ನೋ ನಂಬಿಕೇನು ನನಗಿಲ್ಲ. ನನ್ನ ತಂದೆ ತಾಯಿನಾ ನೋಡಿ ತುಂಬಾ ದಿನವೇ ಆಯ್ತು. ದಿನಾ ಅವರ ಆಶೀರ್ವಾದ ಇಲ್ಲದೇ ಮನೆಯಿಂದ ಹೊರಗೇ ಬರ್ತಿಲಿಲ್ಲ ಎಂದರು.

ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸುದೀಪ್ ಅವರು, ಅದರ ಕುರಿತಾಗಿ ನಾನು ಮಠದಲ್ಲಿ ಮಾತಾಡೋದಿಲ್ಲ. ಇಂದ್ರಜಿತ್ ನನಗೆ ತುಂಬಾ ವರ್ಷದ ಪರಿಚಯ. ಸಿನಿಮಾ ರಂಗಕ್ಕೆ ಬರೋ ಮೊದಲಿನಿಂದಲೂ ಒಟ್ಟಾಗಿದ್ದೇವೆ. ಅವರೊಟ್ಟಿಗೆ ಕಾಣಿಸಿಕೊಂಡ ಮಾತ್ರಕ್ಕೇ ಏನು ಆಗಿಲ್ಲ, ಅವರ ಒಳ್ಳೆ ಕೆಲಸ,ಕೆಟ್ಟ ಕೆಲಸ ಎಲ್ಲದರಲ್ಲೂ ನಾನು ಭಾಗಿ ಆಗಿದ್ದೀನಿ ಅಂತಾನಾ(?) ಎಂದು ಹೇಳಿದರು.

ನಮಗೆ ರೈಸ್, ದಾಲ್ ಗೊತ್ತು. ಜೀವನ ಅದರಲ್ಲಿ ಸಾಗಿಸ್ತಿವಿ. ಆದರೆ, ಡ್ರಗ್ಸ್ ಬಗ್ಗೆ ಗೊತ್ತಿಲ್ಲ. ಏನು ಗೊತ್ತಿಲ್ಲ ಅದರ ಬಗ್ಗೆ ಚರ್ಚೆ ಮಾಡಲ್ಲ ಅದು ತಪ್ಪಾಗುತ್ತೆ. ಇವಾಗ ನಡೀತಿರುವ ವಿಷಯದ ಬಗ್ಗೆ ಮಾತಾಡೋದೂ ತಪ್ಪು. ಇದು ಚಿತ್ರರಂಗಕ್ಕೆ ಕಳಂಕ ಅನ್ನೋದು ತಪ್ಪು. ಸಮಸ್ಯೆ ಯಾವಾಗಲೂ ಸವಾಲ್​ ಆಗುತ್ತೆ. ಆದರೆ, ಇಲ್ಲದೇ ಇರೋದನ್ನ ಲಿಂಕ್ ಕೊಟ್ಟು ಮಾತಾಡಬಾರದು. ಚಿರಂಜೀವಿ ನನ್ನ ತಮ್ಮನ ತರ, ಡ್ರಗ್​ನಲ್ಲಿ ಅವರ ಹೆಸರು ಥಳಕು ಹಾಕುವುದು ಬೇಡ ಎಂದಿದ್ದಾರೆ.

ನಟ ಚೇತನ್ ಕುಮಾರ್​ ಟ್ವಿಟರ್​ ಮಾಡಿರುವ ಬಗ್ಗೆ ಮಾತನಾಡಿದ ಅವರು, ಬಹುಶಃ ಅವರು ಪ್ರಧಾನಿ ಮೋದಿ ಬಗ್ಗೆ ಮಾತಾಡಿರಬೇಕು. ಮಾಧ್ಯಮಗಳು ಕೆಲ ಅನಾವಶ್ಯಕ ವಿಚಾರಗಳನ್ನು ಜೀವಂತ ಇಡುತ್ತಿದೆ ಎಂದು ಸುದೀಪ್​ ಅವರು ಚೇತನ್​ ಅವರನ್ನು ಲೇವಡಿ ಮಾಡಿದರು.

ಇಂದ್ರಜಿತ್​ಗೆ ಬೆದರಿಕೆ ಕರೆ ವಿಷಯದ ಕುರಿತು ಮಾತನಾಡಿದ ಅವರು, ಇಂದ್ರಜಿತ್ ಅವರ ಇಡೀ ಲೈಫ್ ನಾ...ನಿಲ್ಲದೆ ಸಾಗಿದೆ. ಅವರು ನನಗಾಗಿ ಇಲ್ಲ. ನಾನೂ ಅವರಿಗಾಗಿ ಇಲ್ಲ. ಆದರೆ, ಅದಕ್ಕೆಲ್ಲ ಅವರು ಹೆದರಲ್ಲ ಎಂದು ನಟ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಸಿದ್ದಗಂಗಾ ಶ್ರೀಗಳ ಮಠಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟ ಸುದೀಪ್ ಅವರು ಭೇಟಿ ನೀಡಿದ್ದರು.

Next Story

RELATED STORIES