Top

ಪೊಲೀಸರು ಶಪಥ ಮಾಡಿದರಷ್ಟೇ ಡ್ರಗ್ಸ್ ನಿಯಂತ್ರಣಕ್ಕೆ ಬರೋದು - ಶಾಸಕ ರಿಜ್ವಾನ್ ಹರ್ಷದ್

ಬೆಂಗಳೂರಿನ ಎಲ್ಲಾ ಕಡೆ ಡ್ರಗ್ಸ್ ಇದೆ ಇದನ್ನ ತಡೆಗಟ್ಟಲು ಸಮಾಜ ಒಂದಾಗಬೇಕು. ಪೊಲೀಸರು ಪ್ರಮಾಣ ಮಾಡಿ ಹೊರಟರೆ ಮಾತ್ರ ಡ್ರಗ್ಸ್ ನಿಲ್ಲೋದು

ಪೊಲೀಸರು ಶಪಥ ಮಾಡಿದರಷ್ಟೇ ಡ್ರಗ್ಸ್ ನಿಯಂತ್ರಣಕ್ಕೆ ಬರೋದು - ಶಾಸಕ ರಿಜ್ವಾನ್ ಹರ್ಷದ್
X

ಮೈಸೂರು: ರಾಜ್ಯದಲ್ಲಿ ಡ್ರಗ್ಸ್​ ದಂಧೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​​ ಶಾಸಕ ರಿಜ್ವಾನ್ ಹರ್ಷದ್ ಅವರು ಪ್ರತಿಕ್ರಿಯೆ ನೀಡಿದ್ದು, ಶಾಲೆಗಳ ಮುಂದೇಯೆ ಡ್ರಗ್ಸ್ ಮಾರಾಟ ಆಗುತ್ತಿದೆ. 10-12 ವರ್ಷದ ಮಕ್ಕಳಿಗೆ ಡ್ರಗ್ಸ್ ಅಮಲು ಅತ್ತಿಸುವ ಪ್ರಯತ್ನ ಆಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮೈಸೂರುನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲೆ ಡ್ರಗ್ಸ್ ದಂಧೆ ನಿರಂತರವಾಗಿ ನಡೆಯುತ್ತಿದೆ. ಇದು ಪೊಲೀಸರ ಗಮನಕ್ಕೂ ಇದೆ. ಪೊಲೀಸರ ಗಮನಕ್ಕೆ ಬಾರದೆ ಯಾವ ದಂಧೆಯೂ ನಡೆಯುವುದಿಲ್ಲ ಎಂದರು.

ಕೆಲವು ಏರಿಯಾಗಳಲ್ಲಿ ಡ್ರಗ್ಸ್ ಇಲ್ಲ. ಬೆಂಗಳೂರಿನ ಎಲ್ಲಾ ಕಡೆ ಡ್ರಗ್ಸ್ ಇದೆ ಇದನ್ನ ತಡೆಗಟ್ಟಲು ಸಮಾಜ ಒಂದಾಗಬೇಕು. ಪೊಲೀಸರು ಪ್ರಮಾಣ ಮಾಡಿ ಹೊರಟರೆ ಮಾತ್ರ ಡ್ರಗ್ಸ್ ನಿಲ್ಲೋದು ಎಂದು ಹೇಳಿದ್ದಾರೆ.

ಸದ್ಯ ಸಿನಿಮಾದಲ್ಲಿ ಡ್ರಗ್ಸ್ ಇರೋದು ನನಗೆ ಗೊತ್ತಿಲ್ಲ. ನನಗೆ ಕೆಲವು ಗೆಳೆಯರು ಸಿನಿಮಾದಲ್ಲಿ ಇದ್ದಾರೆ. ನಾನು ಅವರೊಂದಿಗೆ ಪಾರ್ಟಿ ಮಾಡಿಲ್ಲ. ಹಾಗಾಗಿ ಸಿನಿಮಾದಲ್ಲಿ ಡ್ರಗ್ಸ್ ಇರೋದು ನನಗೆ ಗೊತ್ತಿಲ್ಲ. ಆದರೆ, ಬೆಂಗಳೂರಿನಲ್ಲಿ ವ್ಯಾಪಕವಾಗಿ ಡ್ರಗ್ಸ್ ಇದೆ. ಪೊಲೀಸರು ಶಪಥ ಮಾಡಿದರಷ್ಟೇ ಡ್ರಗ್ಸ್ ನಿಯಂತ್ರಣಕ್ಕೆ ಬರೋದು ಎಂದು ಶಾಸಕ ರಿಜ್ವಾನ್ ಹರ್ಷದ್ ಅವರು ಮಾತನಾಡಿದ್ದಾರೆ.

Next Story

RELATED STORIES