Top

ಆಧ್ಯಾತ್ಮದ ಕಡೆ ಚೈತ್ರಾ ಕೊಟ್ಟೂರು ಒಲವು

ಓಶೋ ಧ್ಯಾನ ಶಿಬಿರದ ನೆನಪು ಹಂಚಿಕೊಂಡ ಬಿಗ್​ಬಾಸ್ ಸ್ಪರ್ಧಿ

ಆಧ್ಯಾತ್ಮದ ಕಡೆ ಚೈತ್ರಾ ಕೊಟ್ಟೂರು ಒಲವು
X

ಬಿಗ್​ಬಾಸ್​ ಸೀಸನ್​ 7 ಸ್ಪರ್ಧಿ ಚೈತ್ರಾ ಕೊಟ್ಟೂರು ಆಧ್ಯಾತ್ಮದ ಕಡೆ ಒಲವು ತೋರಿದ್ದಾರೆ. ಜೀವನದಲ್ಲಿ ಇತ್ತೀಚಿಗೆ ಅನೇಕ ಏರಿಳಿತಗಳನ್ನು ಕಂಡ ಅವರು, ಯೋಗ ಧ್ಯಾನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಈ ವಿಚಾರಗಳನ್ನು ಚೈತ್ರಾ ಕೊಟ್ಟೂರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಓಶೋ ಧ್ಯಾನ ಶಿಬಿರದಲ್ಲಿ ತೊಡಗಿಸಿಕೊಂಡಿರುವ ಅವರು, ಅಲ್ಲಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಶಿಬಿರದಲ್ಲಿನ ಫೋಟೋಗಳನ್ನು ಸಹ ಶೇರ್​ ಮಾಡದ್ದಾರೆ.

ಸದ್ಯ ಆಧ್ಯಾತ್ಮದ ಕಡೆ ಒಲವು ತೋರಿರುವ ಚೈತ್ರಾ ಕೊಟ್ಟೂರು ತಮ್ಮ ಹೆಸರನ್ನು ಮಾ ಪ್ರಗ್ಯಾ ಭಾರತಿ ಎಂದು ಬದಲಾಯಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ. ಸ್ವಾಮಿ ಗೋಪಾಲ ಭಾರತಿ ಅವರೊಂದಿಗಿನ ಫೋಟೋ ಶೇರ್​ ಮಾಡಿರುವ ಅವರು, ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಮಾ ಪ್ರಗ್ಯಾ ಭಾರತಿ ಎಂದು ಬರೆದುಕೊಂಡಿದ್ದಾರೆ ಹೀಗಾಗಿ ಅವರು ಹೆಸರು ಬದಲಾಯಿಸುತ್ತಾರೆ ಎನ್ನಲಾಗಿದೆ.

Next Story

RELATED STORIES