Top

ಮುಂದಿನ ತಿಂಗಳು ಬಾರ್​, ಪಬ್​ ಎಲ್ಲಾ ಶುರು - ಸಚಿವ ಹೆಚ್​ ನಾಗೇಶ್​

ಬೆಂಗಳೂರಿನಲ್ಲಿ ಡ್ರಗ್ ಅಡಿಕ್ಟ್​ಗೆ, ಉತ್ತಮ ಆರ್ಥಿಕ ಹೊಂದಿದವರು, ಶ್ರೀಮಂತ ಮಕ್ಕಳು, ಪ್ರಭಾವಿಗಳ ಮಕ್ಕಳು ಮಾತ್ರ ತೆಗೆದುಕೊಳ್ಳುತ್ತಾರೆ.

ಮುಂದಿನ ತಿಂಗಳು ಬಾರ್​, ಪಬ್​ ಎಲ್ಲಾ ಶುರು - ಸಚಿವ ಹೆಚ್​ ನಾಗೇಶ್​
X

ಬೆಳಗಾವಿ: ಬೆಳಗಾವಿಯಲ್ಲಿ ಈ ಬಾರಿ ಕೇವಲ ಶೇ. 50ರಷ್ಟು ಕಲೆಕ್ಷನ್ ಆಗಿದೆ ಅದರ ಬಗ್ಗೆ ಸಭೆ ಮಾಡುತ್ತೇನೆ ಎಂದು ಅಬಕಾರಿ ಸಚಿವ ಹೆಚ್​ ನಾಗೇಶ್​ ಅವರು ಶನಿವಾರ ಹೇಳಿದರು.

ಬೆಳಗಾವಿನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳು ಬಾರ್​, ಪಬ್ ಎಲ್ಲಾ ಚಾಲು ಆಗುತ್ತವೆ ಇದರಿಂದ ಅಬಕಾರಿ ಇಲಾಖೆಗೆ ಆದಾಯ ಹೆಚ್ಚಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಡ್ರಗ್ ಜಾಲ ಪತ್ತೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳ ಜಂಟಿ ದಾಳಿ ಮಾಡಲಾಗುವುದು. ಡ್ರಗ್ ನಿಯಂತ್ರಣಕ್ಕೆ ಪ್ಲಾನ್​ ಮಾಡಲಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಡ್ರಗ್ ಅಡಿಕ್ಟ್​ಗೆ ರಾಜಕೀಯ ಮಕ್ಕಳು ಮತ್ತು ಸಿನೆಮಾ ನಟ ನಟಿಯರ ಮಕ್ಕಳು ಬಲಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರಿನಲ್ಲಿ ಡ್ರಗ್ ಅಡಿಕ್ಟ್​ಗೆ, ಉತ್ತಮ ಆರ್ಥಿಕ ಹೊಂದಿದವರು, ಶ್ರೀಮಂತ ಮಕ್ಕಳು, ಪ್ರಭಾವಿಗಳ ಮಕ್ಕಳು ಮಾತ್ರ ತೆಗೆದುಕೊಳ್ಳುತ್ತಾರೆ. ರಾಜಕಾರಣ ಮಕ್ಕಳು, ಶ್ರೀಮಂತ ಮಕ್ಕಳು ಭಾಗಿಯಾಗುವ ವಿಚಾರ ಬೆಳಕಿಗೆ ಬಂದಿದೆ ಎಂದಿದ್ದಾರೆ.

ಬೆಂಗಳೂರನಲ್ಲಿ ಡ್ರಗ್ ಜಾಲ ಪತ್ತೆ, ಇದು ಸ್ಯಾಂಪಲ್​ ಮಾತ್ರ, ಬೆಂಗಳೂರಿನಲ್ಲಿ ಇನ್ನು ದೊಡ್ಡ ಪ್ರಮಾಣದ ಈ ತರ ದಂದೆ ಇದೆ. ಇದಕ್ಕೆ ಪತ್ತೆ ಹಚ್ಚಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಏರಿಯಾದಲ್ಲಿ ಡ್ರಗ್ ಹೆಚ್ಚಾಗುವ ಸಾಧ್ಯತೆ ಇದೆ. ಚೆಕ್ ಮಾಡಿ ನಿಯಂತ್ರಣ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಡ್ರಗ್ ಆಡಿಕ್ಟ್ ಆದವರು ಆರ್ಥಿಕ ಸದೃಢ ಇದ್ದವರು ಮಾತ್ ತೆಗೆದುಕೊಳ್ಳುತ್ತಾರೆ. ಈ ಪ್ರಕರಣದ ಬಗ್ಗೆ ಮತ್ತಷ್ಟು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಸಚಿವ ಹೆಚ್​ ನಾಗೇಶ್​ ಅವರು ಪ್ರತಿಕ್ರಿಯಿಸಿದ್ದಾರೆ.

Next Story

RELATED STORIES