Top

ನಟ ಕಿಚ್ಚ ಸುದೀಪ್ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ರಾ ನಟ ಚೇತನ್ ಕುಮಾರ್ ?

  • ಜೂಜು (ರಮ್ಮಿ) ಜಾಹಿರಾತು ನೀಡುವ ಸ್ಟಾರ್​ಗಳ ಬಗ್ಗೆ ಬೆರಳು ತೋರಿಸದಿರುವುದು ಮೋಸವಲ್ಲವೇ (?)
  • ಇವರು ಸಾಮಾಜಿಕ ದುಷ್ಕರ್ಮಿಗಳ 'ರಾಯಭಾರಿಗಳ್ಳವೇ'(?)

ನಟ ಕಿಚ್ಚ ಸುದೀಪ್ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ರಾ ನಟ ಚೇತನ್ ಕುಮಾರ್ ?
X

ಬೆಂಗಳೂರು: ಜೂಜು (ರಮ್ಮಿ) ಜಾಹಿರಾತು ನೀಡುವ ಸ್ಟಾರ್​ಗಳ ಬಗ್ಗೆ ಬೆರಳು ತೋರಿಸದಿರುವುದು ಮೋಸವಲ್ಲವೇ ಎಂದು ಟ್ವಿಟ್​ ಮಾಡುವ ಮೂಲಕ ನಟ ಚೇತನ್​ ಕುಮಾರ್ ಅವರು ನಟ ಕಿಚ್ಚ ಸುದೀಪ್​ ಅವರಿಗೆ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

ಟ್ವಿಟರ್​ ಖಾತೆಯಲ್ಲಿಂದು ಪೋಸ್ಟ್​ ಮಾಡಿರುವ ಅವರು, ಮಾದಕ ವಸ್ತುಗಳನ್ನು ಬಳಸುವ ಸೆಲಬ್ರಟಿಗಳ ಹೆಸರನ್ನು ಬಹಿರಂಗಪಡಿಸುವುದರ ಮೇಲೆ ಎಲ್ಲರ ಗಮನವಿದೆ. ಆದರೆ, ಹಣಕ್ಕಾಗಿ ಮದ್ಯ(ಸೋಡ),ಗುಟ್ಕಾ/ಪಾನ್ ಮಸಾಲಾ, ಜೂಜು(ರಮ್ಮಿ) ಪರ ಜಾಹಿರಾತು ನೀಡುವ ಸ್ಟಾರ್​ಗಳ ವಿರುದ್ಧ ಬೆರಳು ತೋರಿಸದಿರುವುದು ಮೋಸವಲ್ಲವೇ(?) ಇವರು ಸಾಮಾಜಿಕ ದುಷ್ಕರ್ಮಿಗಳ 'ರಾಯಭಾರಿಗಳ್ಳವೇ'(?)

ಎಂದು ಟ್ವಿಟ್​ ಮಾಡಿದ್ದಾರೆ.



ಇನ್ನು ಪ್ರಸ್ತುತವಾಗಿ ಎಲ್ಲರ ಗಮನ ಮಾದಕವಸ್ತುಗಳನ್ನು ಖಾಸಗಿಯಾಗಿ ಬಳಸುವ ಚಲಚಚಿತ್ರ ಸಿಬ್ಬಂದಿ ಮತ್ತು ನಟರನ್ನು ಬಹಿರಂಗ ಪಡಿಸುವುದರ ಮೇಲಿದೆ ಎಂದು ನಟ ಚೇತನ್​ ಅವರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

Next Story

RELATED STORIES