Top

ಅಭಿಮಾನಿಗಳಿಗೆ ₹5000 ಧನ ಸಹಾಯ ಮಾಡಿದ ಕಾಲಿವುಡ್​ ಬ್ರದರ್ಸ್

ರಿಯಲ್​ ಹಿರೋಸ್​ ಎನಿಸಿಕೊಂಡ ಸೂರ್ಯ ಮತ್ತು ಕಾರ್ತಿ

ಅಭಿಮಾನಿಗಳಿಗೆ ₹5000 ಧನ ಸಹಾಯ ಮಾಡಿದ ಕಾಲಿವುಡ್​ ಬ್ರದರ್ಸ್
X

ಸಿನಿಮಾ ನಟರು ಮತ್ತು ಅಭಿಮಾನಿಗಳದ್ದೂ ಅವಿನಾಭಾವ ಸಂಬಂಧ. ಅಭಿಮಾನಿಗಳಿಂದಲೇ ಕಲಾವಿದರಿಗೆ ಸ್ಟಾರ್ ಪಟ್ಟ ಸಿಗೋದು. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ಬರ್ತ್​ಡೇ ಆಗ್ಲಿ, ಸಿನಿಮಾ ರಿಲೀಸ್ ಆಗ್ಲಿ ಹಬ್ಬದ ಥರ ಆಚರಿಸ್ತಾರೆ. ತಮ್ಮ ಬರ್ತ್​ಡೇ ನೆನೆಪಿರುತ್ತೋ ಇಲ್ವೋ. ತಾವು ಮೆಚ್ಚೋ ಹೀರೋಗಳ ಬರ್ತ್​ಡೇಯನ್ನ ಹಾಲಿನಭೀಷೆಕ ಮಾಡಿ ಅದ್ದೂರಿ ಯಾಗಿ ಆಚರಿಸ್ತಾರೆ. ಹಾಗಾಗಿ ಇಂತಹ ಅಭಿಮಾನಿಗಳ ಕಷ್ಟಕ್ಕೆ ನಿಲ್ಲೋನೇ ನಿಜವಾದ ಹೀರೋ.

ಇದೀಗ ಕಾಲಿವುಡ್​ ಬ್ರದರ್ಸ್​ ಸೂರ್ಯ ಮತ್ತು ಕಾರ್ತಿ ರೀಲ್​ ಲೈಫ್​​ನಲ್ಲಿ ಮಾತ್ರವಲ್ಲದೇ ರಿಯಲ್​​ ಲೈಫ್​ನಲ್ಲೂ ಹೀರೋ ಅನ್ನಿಸಿಕೊಂಡಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಬಹಳಷ್ಟು ಜನರಿಗೆ ಅನೇಕ ಸ್ಟಾರ್​​ಗಳು ಸಹಾಯ ಮಾಡಿದ್ದಾರೆ. ಇದೀಗ ತಮ್ಮ ಅಭಿಮಾನಿಗಳ ಕಷ್ಟಕ್ಕೆ ಸ್ಪಂದಿಸಿ ತಮಿಳು ನಟ ಸೂರ್ಯ ಮತ್ತು ಕಾರ್ತಿ ಆರ್ಥಿಕ ಸಹಾಯ ಮಾಡಿದ್ದಾರೆ.

ಸೂರ್ಯ ಮತ್ತು ಕಾರ್ತಿ ಅಭಿಮಾನಿಗಳ ಸಂಘದಲ್ಲಿ ಯಾರೆಲ್ಲಾ ತೀರಾ ಕಷ್ಟದಲ್ಲಿದ್ದರೋ , ಅಂತಹ ಅಭಿಮಾನಿಗಳಿಗೆ ಹಣಕಾಸಿನ ನೆರವು ನೀಡಿದ್ದಾರೆ. ಸುಮಾರು 250 ಅಭಿಮಾನಿಗಳ ಬ್ಯಾಂಕ್ ಅಕೌಂಟ್‌ಗೆ ನಟ ಸೂರ್ಯ ತಲಾ 5000 ರೂಪಾಯಿ ಜಮೆ ಮಾಡಿದ್ದಾರಂತೆ ಹಾಗೂ ನಟ ಕಾರ್ತಿ 150 ಮಂದಿಗೆ ತಲಾ ₹5000 ಜಮೆ ಮಾಡಿದ್ದಾರೆ ಅನ್ನೋ ಸುದ್ದಿ ಕಾಲಿವುಡ್​ನಲ್ಲಿ ವರದಿಯಾಗಿದೆ.

ಒಟ್ಟಿನಲ್ಲಿ ಅಭಿಮಾನಿಗಳು ಸ್ಟಾರ್​ಗಳಿಗೋಸ್ಕರ ಏನೆಲ್ಲಾ ಮಾಡ್ತಾರೆ. ಹಾಗೇ ಸ್ಟಾರ್​ಗಳು ಕೂಡ ಅಭಿಮಾನಿಗಳ ಕಷ್ಟಕ್ಕೆ ಮರುಗಿದಾಗ, ಆ ಅಭಿಮಾನಕ್ಕೊಂದು ಸಾರ್ಥಕತೆ ಸಿಕ್ಕಂತೆ.

Next Story

RELATED STORIES