Top

ಪುಟಾಣಿ ಯಶ್​​ಗೆ 'ಯಥರ್ವ್​​' ಎಂದು ಹೆಸರಿಟ್ಟ ಜೋಡಿ

ಪುಟಾಣಿ ಯಶ್​​ಗೆ ಯಥರ್ವ್​​ ಎಂದು ಹೆಸರಿಟ್ಟ ಜೋಡಿ
X

ರಾಕಿಂಗ್​ ಸ್ಟಾರ್​ ಯಶ್​ ಮತ್ತು ರಾಧಿಕಾ ಪಂಡಿತ್​ ದಂಪತಿ ಮುದ್ದಿನ ಮಗನ ಹೆಸರೇನು(?) ಅನ್ನೋ ಕುತೂಹಲ ಅವರ ಅಭಿಮಾನಿಗಳನ್ನ ಬಹಳ ದಿನಗಳಿಂದ ಕಾಡ್ತಿತ್ತು. ಒಂದಷ್ಟು ಹೆಸರುಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡ್ತಿತ್ತು. ಫೈನಲಿ ಮಗನ ನಾಮಕರಣ ಮಾಡಿರುವ ರಾಕಿಂಗ್​ ದಂಪತಿ ಮಗನ ಹೆಸರನ್ನ ರಿವೀಲ್​ ಮಾಡಿದ್ದಾರೆ.

ಐರಾ ಯಶ್​ ನಂತರ ಕಳೆದ ವರ್ಷ ಯಶ್​ ಕುಟುಂಬಕ್ಕೆ ಪುಟಾಣಿ ಯಶ್ ಆಗಮನವಾಗಿತ್ತು. ಐರಾ ಜೊತೆಗಿನ ಜ್ಯೂನಿಯರ್​ ಯಶ್​ ಫೋಟೋಗಳಂತೂ ಸಖತ್​ ವೈರಲ್ಲಾಗಿತ್ತು. ಆದರೆ, ಪುಟಾಣಿ ಯಶ್​ ಹೆಸರೇನು ಅನ್ನೋ ಕುತೂಹಲ ಅಭಿಮಾನಿಗಳಲ್ಲಿತ್ತು. ಇತ್ತೀಚೆಗೆ ಆಯುಷ್​ ಎಂದು ಮಗನಿಗೆ ಹೆಸರಿಟ್ಟಿದ್ದಾರೆ ಅನ್ನೋ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ನಡೆದಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ್ದ ರಾಧಿಕಾ, ಮಗನ ಹೆಸರು ಆಯುಷ್​ ಅಲ್ಲ, ಶೀಘ್ರದಲ್ಲೇ ಹೆಸರನ್ನ ಹೇಳ್ತೀವಿ ಅಂದಿದರು. ಇದೀಗ ನಾಮಕರಣ ಮುಗಿಸಿ, ಮಗನ ಹೆಸರನ್ನ ತಿಳಿಸಿದ್ದಾರೆ.

ಯಶ್​ ಮತ್ತು ರಾಧಿಕಾ ದಂಪತಿ ಮಗನಿಗೆ ಯಥರ್ವ್​​ ಯಶ್​ ಎಂದು ನಾಮಕರಣ ಮಾಡಿದ್ದಾರೆ. ಬಹಳ ಅದ್ಧೂರಿಯಾಗಿ ಅಷ್ಟೇ ಶಾಸ್ತ್ರೋಕ್ತವಾಗಿ ನಾಮಕರಣ ಸಮಾರಂಭ ನಡೆದಿದೆ. ಕೊರೊನಾ ಹಾವಳಿ ಹಿನ್ನಲೆ ಯಶ್​ ಮತ್ತು ರಾಧಿಕಾ ಕುಟುಂಬ ಸದಸ್ಯರು ಮಾತ್ರ ಯಥರ್ವ್​​ ನಾಮಕರಣದಲ್ಲಿ ಭಾಗಿಯಾಗಿದ್ದಾರೆ.

ಕುಟುಂಬ ಮಟ್ಟಿಗಾದರೂ ಬಹಳ ಜೋರಾಗಿ ನಾಮಕರಣ ಸಮಾರಂಭ ನಡೆಸಲಾಗಿದೆ. ಪ್ರತಿ ವಿಚಾರವನ್ನ ರಾಕಿಂಗ್​ ದಂಪತಿ ಬಹಳ ವಿಶೇಷವಾಗಿ ಅಭಿಮಾನಿಗಳ ಜೊತೆ ಹಂಚಿಕೊಳ್ತಾರೆ. ಅದರಂತೆ ಮಗನ ನಾಮಕರಣದ ವಿಡಿಯೋವನ್ನ ಬಹಳ ಸೊಗಸಾಗಿ ಶೂಟ್​ ಮಾಡಿ ಹಾಡಿನ ಮೂಲಕ ಅಭಿಮಾನಿಗಳ ಮುಂದಿಟ್ಟಿದ್ದಾರೆ.

ಯಥರ್ವ್​ ಯಶ್ ನಾಮಕರಣದ ವೀಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ಲಾಗಿದೆ. ಅಭಿಮಾನಿಗಳು ತಮ್ಮ ಸೋಷಿಯಲ್​ ಮೀಡಿಯಾ ಪೇಜ್​ಗಳಲ್ಲಿ ಫೋಟೋಗಳು, ವೀಡಿಯೋ ರಾರಾಜಿದಸುತ್ತಿದೆ.

Next Story

RELATED STORIES