Top

'ಧೀರನ್' ಸಿನಿಮಾ ಹಾಡುಗಳಿಗೆ ದನಿಯಾದ ಸ್ಟಾರ್​ ಸಿಂಗರ್ಸ್

  • ಗಣೇಶ್​ ನಾರಾಯಣ್​ ಸಂಗೀತ ಸಂಯೊಜನೆ.
  • ಹಾಡಿಗೆ ಬಹದ್ದೂರ್​ ಚೇತನ್​ ಸಾಹಿತ್ಯ.
  • ಉಪ್ಪಿ ಕಂಠಸಿರಿಯಲ್ಲಿ ಧೀರನ್ ಸಿನಿಮಾ ಹಾಡು.

ಧೀರನ್ ಸಿನಿಮಾ ಹಾಡುಗಳಿಗೆ ದನಿಯಾದ ಸ್ಟಾರ್​ ಸಿಂಗರ್ಸ್
X

ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್ ಅಭಿಮಾನಿ ವೈಬಿಎನ್ ಸ್ವಾಮಿ ನಿರ್ದೇಶಿಸಿ, ನಟಿಸ್ತಿರೋ ಸಿನಿಮಾ ಧೀರನ್. ಕೆಲ ದಿನಗಳಿಂದ ಪೋಸ್ಟರ್ಸ್​ ಮತ್ತು ಟೀಸರ್​ನಿಂದ ಸದ್ದು ಮಾಡಿದ್ದ ಧೀರನ್​, ಈಗ ಸಾಂಗ್ಸ್​ನಿಂದ ಎಲ್ಲರ ಗಮನ ಸೆಳಿತ್ತಿದ್ದಾರೆ. ಕಾರಣ ಉಪೇಂದ್ರ, ನವೀನ್​ ಸಜ್ಜು, ರಾಜೇಶ್​ ಕೃಷ್ಣನ್ ರೀತಿಯ ಸ್ಟಾರ್​​ ಗಾಯಕರು ಹಾಡುಗಳನ್ನ ಹಾಡಿದ್ದಾರೆ.

ಸಸ್ಪೆನ್ಸ್​ ಥ್ರಿಲ್ಲರ್​ ಕಥಾಹಂದರದ ಹೊಸಬರ ಸಿನಿಮಾ ಧೀರನ್​. ಹೊಸ ಪ್ರತಿಭೆ ವೈಬಿಎನ್ ಸ್ವಾಮಿ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುವ ಜೊತೆಗೆ ಲೀಡ್​ ರೋಲ್​ನಲ್ಲಿ ಮಿಂಚಿದ್ದಾರೆ. ಬಹುತೇಕ ಶೂಟಿಂಗ್​ ಕಂಪ್ಲೀಟ್​ ಮಾಡಿ ಸೆನ್ಸಾರ್​​ ಕದ ತಟ್ಟೋಕ್ಕೆ ರೆಡಿಯಾಗಿರೋ ಚಿತ್ರತಂಡ, ಸಿನಿಮಾ ಆಲ್ಬಮ್​ ಬಗ್ಗೆ ಮಾಹಿತಿ ಹಂಚಿಕೊಂಡಿದೆ.


ಡಯಾಕ್ಸ್​ ಎಂಟ್ರಟ್ರೈನ್​ಮೆಂಟ್​ ಬ್ಯಾನರ್​ನಲ್ಲಿ ಧೀರನ್​ ಸಿನಿ ಸರ್ವೀಸಸ್​ ನಿರ್ಮಾಣದಲ್ಲಿ ಮೂಡಿ ಬರುತ್ತಿರು ಸಿನಿಮಾ ಧೀರನ್. ಇತ್ತೀಚೆಗೆ ಗುರುಕಿರಣ್​ ಸ್ಟುಡಿಯೋದಲ್ಲಿ ಚಿತ್ರದ ಬೊಂಬಾಟ್​ ಸಾಂಗ್​​ವೊಂದಕ್ಕೆ ರೆಕಾರ್ಡ್​ ಮಾಡಲಾಗಿದೆ. ಉಪೇಂದ್ರ ಒಳ್ಳೆ ಬರಹಗಾರ, ನಿರ್ದೇಶಕ, ನಟ ಮಾತ್ರವಲ್ಲ, ಒಳ್ಳೆ ಗಾಯಕ ಕೂಡ ಹೌದು. ಉಪ್ಪಿ ಕಂಠಸಿರಿಯಲ್ಲಿ ಧೀರನ್ ಸಿನಿಮಾ ಹಾಡೊಂದನ್ನ ರೆಕಾರ್ಡ್​ ಮಾಡಲಾಗಿದೆ.

ಗಣೇಶ್​ ನಾರಾಯಣ್​ ಸಂಗೀತ ಸಂಯೊಜನೆಯ ಹಾಡಿಗೆ ಬಹದ್ದೂರ್​ ಚೇತನ್​ ಸಾಹಿತ್ಯ ಬರೆದಿದ್ದಾರೆ. ಡಾ. ರಾಜ್​, ಡಾ. ವಿಷ್ಣು, ಅಂಬಿ ಮತ್ತು ಶಂಕರ್​ ನಾಗ್​ ಅವರ ಆದರ್ಶಗಳನ್ನ ಈ ಹಾಡಿ ಎತ್ತಿಹಿಡಿಯಲಾಗಿದೆಯಂತೆ. ಇನ್ನು ಧೀರನ್ ಚಿತ್ರದ ಮತ್ತೊಂದು ಹಾಡಿಗೆ ರಾಜೇಶ್​ ಕೃಷ್ಣನ್​ ದನಿಯಾಗಿದ್ದಾರೆ. ಈ ಹಾಡಿಗೂ ಬಹದ್ಧೂರ್​ ಚೇತನ್​ ಸಾಹಿತ್ಯವಿದೆ.


ಎಣ್ಣೆ ಸಾಂಗ್​ಗಳಿಂದ ಸ್ಯಾಂಡಲ್​ವುಡ್​ನಲ್ಲಿ ಸೌಂಡ್​ ಮಾಡ್ತಿರೋ ಗಾಯಕ ನವೀನ್ ಸಜ್ಜು.. 'ಓಲಾಡ್​ ಮಗಾ ಓಲಾಡ್​' ಅಂತ ಶುರುವಾಗುವ ಹಾಡನ್ನ ನವೀನ್​ ಸಜ್ಜು ಹಾಡಿದ್ದಾರೆ..

ಒಟ್ಟಾರೆಯಾಗಿ ಸ್ಟಾರ್​ ಗಾಯಕರಿಂದ ಹಾಡುಗಳನ್ನ ಹಾಡಿಸಿ, ಧೀರನ್ ಟೀಮ್ ಗಮನ ಸೆಳೆದಿದೆ. ಸ್ವಾಮಿ ವೈ ಬಿ ಎನ್ ಅವರಿಗೆ ನಾಯಕಿಯಾಗಿ ಮಂಗಳೂರು ಬೆಡಗಿ ಲಕ್ಷ್ಯ ಶೆಟ್ಟಿ ನಟಿಸಿದ್ದು, ಇನ್ನುಳಿದಂತೆ ಪ್ರಮೋದ್ ಶೆಟ್ಟಿ, ತೇಜಸ್ವಿನಿ ಪ್ರಕಾಶ್, ಮಿಮಿಕ್ರಿ ದಯಾನಂದ್, ರಘು ಪಾಂಡೇಶ್ವರ, ರವೀಂದ್ರ ಹೀಗೆ ಸಾಕಷ್ಟು ಕಲಾವಿದರ ದಂಡೇ ಧೀರನ್​​ ಸಿನಿಮಾದಲ್ಲಿದೆ. ಶೀಘ್ರದಲ್ಲೇ ಧೀರನ್​ ಸಿನಿಮಾ ಆಲ್ಬಮ್​ ರಿಲೀಸ್​ ಆಗಲಿದೆ.

Next Story

RELATED STORIES