Top

24 ವರ್ಷಗಳ ಹಿಂದೆ ಹೇಗಿತ್ತು ಗೊತ್ತಾ ಶಿವಣ್ಣ ಕ್ರೇಜ್..?

  • ಜನುಮದ ಜೋಡಿ ರಜತ ಮಹೋತ್ಸವ ಎಕ್ಸ್​​ಕ್ಲೂಸಿವ್​​ ಸುದ್ದಿ.
  • ಮಂಡ್ಯದಲ್ಲಿ ನಡೆದಿದ್ದ ಅದ್ಧೂರಿ ಕಾರ್ಯಕ್ರಮ ವೀಡಿಯೋ ವೈರಲ್.
  • ವೇದಿಕೆಯಲ್ಲಿ ಹಾಡು ಹಾಡಿ ಕುಣಿದು ಕುಪ್ಪಳಿಸಿದ ಹ್ಯಾಟ್ರಿಕ್​ ಹೀರೋ.

24 ವರ್ಷಗಳ ಹಿಂದೆ ಹೇಗಿತ್ತು ಗೊತ್ತಾ ಶಿವಣ್ಣ ಕ್ರೇಜ್..?
X

ಸ್ಯಾಂಡಲ್​ವುಡ್​ಗೆ ಎಷ್ಟೇ ಜನ ಹೀರೋಗಳು ಬರ್ಲಿ ಹೋಗ್ಲಿ. ಶಿವಣ್ಣನ ಕ್ರೇಜ್​ ಮಾತ್ರ ಕಿಂಚಿತ್ತೂ ಕಮ್ಮಿಯಾಗಿಲ್ಲ. ಕಳೆದ 30 ವರ್ಷಗಳಿಂದ ಹ್ಯಾಟ್ರಿಕ್​ ಹೀರೋ ಹವಾ ಹಂಗೇ ಇದೆ. ವಯಸ್ಸು 50 ದಾಟಿದ್ರೂ ಸೆಂಚುರಿ ಸ್ಟಾರ್​ ಎನರ್ಜಿ ಮುಂದೆ ಇವತ್ತಿನ ಯಂಗ್​ಸ್ಟರ್ಸ್​ ಕೂಡ ನಾಚ್ಕೊಬೇಕು. ಶಿವಣ್ಣ ಇವಾಗ್ಲೇ ಹಿಂಗೆ, ಇನ್ನು 25 ವರ್ಷಗಳ ಹಿಂದೆ ಅವರ ಕ್ರೇಜ್​ ಹೇಗಿತ್ತು(?) ಅವರ ಎನರ್ಜಿ, ಅವರ ಸರಳತೆ, ವಿನಮ್ರತೆ, ಡ್ಯಾನ್ಸ್​ ಖದರ್​​ ಹೇಗಿತ್ತು(?)

ಬ್ಯಾಕ್​ ಟು ಬ್ಯಾಕ್​ ಮೂರು ಹಿಟ್​ ಸಿನಿಮಾಗಳನ್ನ ಕೊಟ್ಟು ಹ್ಯಾಟ್ರಿಕ್​ ಹಿರೋ ಪಟ್ಟಕ್ಕೇರಿದ ನಟ ಶಿವರಾಜ್​ಕುಮಾರ್​. ಡಾ.ರಾಜ್​ಕುಮಾರ್​​ ಮಗನಾದರೂ ತಮ್ಮದೇ ಪರಿಶ್ರಮದಿಂದ ಚಿತ್ರರಂಗದಲ್ಲಿ ಬೆಳೆದು ಬಂದವರು. ಇವತ್ತಿಗೂ ರಾಜ್ಯದ ಯಾವುದೇ ಚಿತ್ರಮಂದಿರದಲ್ಲಿ ಶಿವಣ್ಣನ ಸಿನಿಮಾ ಮಿಡ್ ನೈಟ್​ ಶೋ ಹಾಕಿದರು ಹೌಸ್​ಫುಲ್​ ಬೋರ್ಡ್​​ ಬೀಳುತ್ತೆ. ಅದು ಶಿವಣ್ಣನ ತಾಕತ್ತು. 58ನೇ ವಯಸ್ಸಿನಲ್ಲಿ 28ರ ಯುವಕನ್ನು ನಾಚಿಸುವಂತೆ ಕಾಣುವ ಶಿವಣ್ಣ ಇವತ್ತಿಗೂ ಸ್ಯಾಂಡಲ್​ವುಡ್​ ಕಿಂಗ್.


ಜನುಮದ ಜೋಡಿ. 90ರ ದಶಕದ ಕನ್ನಡದ ಸೂಪರ್​ ಹಿಟ್ ಸಿನಿಮಾ. ಗುಜರಾತಿ ಕಾದಂಬರಿ ಆಧರಿಸಿ, ಟಿ.ಎಸ್​ ನಾಗಾಭರಣ ಕಟ್ಟಿಕೊಟ್ಟ ಅದ್ಭುತ ಸಿನಿಮಾ. ಪಾರ್ವತಮ್ಮ ರಾಜ್​ಕುಮಾರ್​​​ ನಿರ್ಮಾಣದ ಜಾನಪದ ಸೊಗಡಿನ ಸಿನಿಮಾ. ಕೃಷ್ಣ ಮತ್ತು ಕನಕ ಪಾತ್ರಗಳಲ್ಲಿ ಶಿವಣ್ಣ ಹಾಗೂ ಶಿಲ್ಪ ಜೋಡಿ ಮೋಡಿ ಮಾಡಿದ್ದ ಸಿನಿಮಾ ಅದು. 500 ದಿನಕ್ಕೂ ಹೆಚ್ಚು ಕಾಲ ಪ್ರದರ್ಶನ ಕಂಡು ದಾಖಲೆ ಬರೆದಿತ್ತು ಜನುಮದ ಜೋಡಿ.

ಈಗ ಯಾಕಪ್ಪ ಜನುಮದ ಜೋಡಿ ಸಿನಿಮಾ ಕಥೆ ಅಂತೀರಾ(?) ಬನ್ನಿ ಹೇಳ್ತೀವಿ. ಜನುಮದ ಜೋಡಿ ಚಿತ್ರದ ರಜತ ಮಹೋತ್ಸವದ ವೀಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ಲಾಗಿದೆ. ಅವತ್ತಿನ ಕಾಲಕ್ಕೆ ಶಿವಣ್ಣ ಕ್ರೇಜ್​ ಹೇಗಿತ್ತು(?) ಅವರ ಸರಳತೆ ಹೇಗಿತ್ತು ಅನ್ನೋದನ್ನ ಈ ಅಪರೂಪದ ವೀಡಿಯೋದಲ್ಲಿ ನೋಡಬಹುದು. ಶಿವಣ್ಣ ಅವತ್ತು ಹೇಗಿದ್ರೋ ಇವತ್ತು ಹಾಗೇ ಇದ್ದಾರೆ. ಅದೇ ಕಾರಣಕ್ಕೆ ಶಿವಣ್ಣ ಅಂದ್ರೆ, ಅಭಿಮಾನಿಗಳಿಗೆ ಪಂಚಪ್ರಾಣ.

ಮಂಡ್ಯದ ಕಲ್ಪತರು ಡಾ. ರಾಜ್​ಕುಮಾರ್​ ಅಭಿಮಾನಿಗಳ ಬಳಗ ಜನುಮದ ಜೋಡಿ ರಜತ ಮಹೋತ್ಸವ ಕಾರ್ಯಕ್ರಮ ಆಯೋಜಿಸಿದರು. ಮಂಡ್ಯದ ಸಿಲ್ವರ್​ ಜೂಬಿಲಿ ಪಾರ್ಕ್​ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು. 1997 ಡಿಸೆಂಬರ್​​ 7ರಂದು ನಡೆದ ಕಾರ್ಯಕ್ರಮಕ್ಕೆ ಜನುಮದ ಜೋಡಿ ಸಿನಿಮಾ ಹೀರೋ ಶಿವಣ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಭಿಮಾನಿಗಳ ಸಂಭ್ರಮ ನೋಡಿ ಪುಳಕಗೊಂಡರು. ವೇದಿಕೆ ಏರಿ ಹಾಡು ಹಾಡಿ, ಕುಣಿದು ಕುಪ್ಪಳಿಸಿದರು.

ವಿ.ಮನೋಹರ್​​ ಸಂಗೀತದಲ್ಲಿ ಬಂದಿದ್ದ ಜನುಮದ ಜೋಡಿ ಚಿತ್ರದ ಆಲ್ಬಮ್​ ಸೂಪರ್​ ಹಿಟ್​ ಆಗಿತ್ತು. ಅದ್ಧೂರಿ ರಸಸಂಜೆ ಕಾರ್ಯಕ್ರಮದಲ್ಲಿ ಶಿವಣ್ಣನ ಗಾಯನ ಮತ್ತು ನೃತ್ಯವೇ ಹೈಲೆಟ್.


ಅವತ್ತಿನ ಕಾಲಕ್ಕೆ ಶಿವಣ್ಣ ಇಂಡಸ್ಟ್ರಿ ಬಂದು 10 ವರ್ಷವೂ ಆಗಿರಲಿಲ್ಲ. 30 ಸಿನಿಮಾಗಳಲ್ಲಿ ನಟಿಸಿದ್ದರು ಅಷ್ಟೇ. ಆದರೆ, ಅವರ ಅಭಿನಯಕ್ಕೆ ದೊಡ್ಡ ಅಭಿಮಾನಿಗಳ ಬಳಗ ಸೃಷ್ಟಿಯಾಗಿತ್ತು. ಅಷ್ಟೊತ್ತಿಗೆ ಓಂ ಸಿನಿಮಾ ಬಂದು ಸೆನ್ಸೇಷನ್​ ಕ್ರಿಯೇಟ್​ ಮಾಡಿತ್ತು. 1995ರಲ್ಲಿ ಓಂ ಸಿನಿಮಾದಲ್ಲಿ ಲಾಂಗ್​ ಹಿಡ್ದು, ಸೆನ್ಸೇಷನ್​ ಕ್ರಿಯೇಟ್​ ಮಾಡಿದ್ದ ಶಿವಣ್ಣ ಮರುವರ್ಷವೇ ಜನುಮದ ಜೋಡಿ ಸಿನಿಮಾದಲ್ಲಿ ಹಳ್ಳಿಯ ಹೈದನಾಗಿ ಪ್ರೇಕ್ಷಕರ ಮನ ಗೆದ್ದರು. ಮೊಬೈಲ್​ಗಳಿಲ್ಲದ ಕಾಲದಲ್ಲಿ ಫೋಟೋಗ್ರಫರ್​ಗಳಿಂದ ಶಿವಣ್ಣನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳೋಕ್ಕೆ ಅಭಿಮಾನಿಗಳು ಮುಗಿ ಬಿದ್ದಿದ್ದರು.

ಅವತ್ತಿಗೂ ಇವತ್ತಿಗೂ ಶಿವಣ್ಣನ ಕ್ರೇಜ್​ ಡಬಲ್ಲಾಗಿದೆ. ನಟಿಸಿರೋ ಸಿನಿಮಾಗಳ ಸಂಖ್ಯೆ 100 ದಾಟಿದೆ. ಇವತ್ತಿಗೂ ಶಿವಣ್ಣನ ಕೈಯಲ್ಲಿ ಡಜನ್​ ಸಿನಿಮಾಗಳಿವೆ. ಸ್ಟಾರ್​ ನಿರ್ದೇಶಕರಿಂದ ಹಿಡಿದು ಯುವ ನಿರ್ದೇಶಕರವರೆಗೂ ಎಲ್ಲರೂ ಶಿವಣ್ಣನಿಗೆ ಕಥೆ ಮಾಡ್ತಾನೆ ಇದ್ದಾರೆ. ಕಥೆ ಇಷ್ಟವಾದ್ರೆ, ಹೊಸಬರು, ಹಳಬರು ಅಂತ ನೋಡ್ದೆ ಕಾಲ್​ ಶೀಟ್​ ಕೊಡ್ತಾರೆ. ಇತ್ತೀಚೆಗೆ ಚಿತ್ರರಂಗದ ನಾಯಕತ್ವ ವಹಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಭಜರಂಗಿಯಾಗಿ ಪ್ರೇಕ್ಷಕರನ್ನ ರಂಜಿಸಲು ಶಿವಣ್ಣ ಗ್ರ್ಯಾಂಡ್​ ಎಂಟ್ರಿ ಕೊಡಲಿದ್ದಾರೆ.

Next Story

RELATED STORIES