Top

ಮತ್ತೆ ನಾಯಕನ ಪಾತ್ರದಲ್ಲಿ ಮಿಂಚಲಿದ್ದಾರೆ ರಿಷಬ್ ಶೆಟ್ಟಿ

  • ಸೆಪ್ಟೆಂಬರ್​ 10ರಂದು ನಟ, ನಿರ್ದೇಶಕ ರಿಷಬ್​ ಶೆಟ್ಟಿ ಅಭಿನಯದ ಹೊಸ ಸಿನಿಮಾದ ಟೈಟಲ್​ ಫಸ್ಟ್​ಲುಕ್​ ಬಿಡುಗಡೆ.
  • ಕೊರೊನಾ ಕೇಕೆ ನಡುವೆ ಪ್ರೇಕ್ಷಕರಿಗೆ ಸರ್ಪ್ರೈಸ್​ ಕೊಟ್ಟ ಸ್ಟಾರ್ ಡೈರೆಕ್ಟರ್.
  • ಸದ್ದೇ ಇಲ್ಲದೇ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿದ ರಿಷಬ್​​​ ಶೆಟ್ಟಿ.

ಮತ್ತೆ ನಾಯಕನ ಪಾತ್ರದಲ್ಲಿ ಮಿಂಚಲಿದ್ದಾರೆ ರಿಷಬ್ ಶೆಟ್ಟಿ
X

ರಿಷಬ್​ ಶೆಟ್ಟಿ ಸದಾ ಹೊಸತನಕ್ಕಾಗಿ ಹಾತರೊಯುವ ನಿರ್ದೇಶಕ. ಸ್ಯಾಂಡಲ್​ವುಡ್​ನ ಮೋಸ್ಟ್ ಟ್ಯಾಲೆಂಟೆಡ್​ ಡೈರೆಕ್ಟರ್​ಗಳಲ್ಲಿ ಒಬ್ಬರು. ಸದಾ ಸಿನಿಮಾ ವಿಚಾರಗಳಲ್ಲೇ ಮುಳುಗಿರೋ ರಿಷಭ್​​ ಶೆಟ್ಟಿ ಕೊರೊನಾದ ಫ್ರಿ ಟೈಮ್​ನಲ್ಲೂ ಫುಲ್ ಬ್ಯುಸಿಯಾಗಿದರು. ಯಾಕೆ ರಿಷಬ್ ಶೆಟ್ಟಿ ಇಷ್ಟೊಂದು ಬ್ಯುಸಿಯಾಗಿದರು ಅನ್ನೋದಕ್ಕೆ ಉತ್ತರ ಇದೀಗ ಸಿಕ್ಕಿದೆ.

ಬುಧವಾರ ನಿಮ್ಗೆಲ್ಲಾ ಸರ್ಪೈಸ್​ ಕೊಡ್ತಿವಿ ಅಂತ ಪೋಸ್ಟ್ ಹಾಕಿದ್ದ ರಿಷಬ್ ಶೆಟ್ಟಿ ಗುರುವಾರ ಆ ಸರ್ಪೈಸ್​ನ ಸಣ್ಣದೊಂದು ತುಣುಕನ್ನು ಪೋಸ್ಟ್ ಮಾಡಿದ್ದಾರೆ. ಜಾಸ್ತಿ ದಿನ ಮನೇಲಿ ಸುಮ್ಮ್ನೆ ಕುಳಿತುಕೊಳ್ಳೋಕೆ ಆಗದೇ ಸಿನೆಮಾ ಮಾಡಿಕೊಂಡು ಬಂದಿದ್ದೀವಿ, ಟೈಟಲ್​, ಫಸ್ಟ್​ ಲುಕ್​ ಹಾಗೂ ಉಳಿದ ವಿವರಗಳೊಂದಿಗೆ ಮತ್ತೆ ಬೇಟಿಯಾಗೋಣ ಅಂತ ಸ್ವಲ್ಪ ಸರ್ಪೈಸ್​ ಅನ್ನು ಹಾಗೇ ಇಟ್ಟು ಮತ್ತೊಂದು ಪೋಸ್ಟ್ ಮಾಡಿದ್ದಾರೆ.

ಕೊರೊನಾ ಆರ್ಭಟದಿಂದ ಚಿತ್ರರಂಗದ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು. ತಿಂಗಳ ಹಿಂದಷ್ಟೆ ಶೂಟಿಂಗ್​ಗೆ ಪರ್ಮಿಶನ್ ಸಿಕ್ಕಿತ್ತು. ಇದೇ ಗ್ಯಾಪ್​​ನಲ್ಲಿ ರಿಷಬ್ ಶೆಟ್ಟಿ ಹೊಸ ಸಿನಿಮಾದ ಶೂಟಿಂಗ್​ನ್ನ ಮುಗಿಸಿಬಿಟ್ಟಿದ್ದಾರೆ. ಅದು ಕೂಡ ಈ ಸಿನಿಮಾ ತಮ್ಮದೇ ಹೋಮ್ ಬ್ಯಾನರ್​ನಲ್ಲಿ ಸಿನಿಮಾ ರೆಡಿಯಾಗಿ ಬಿಟ್ಟಿದೆ.

ರಿಷಬ್ ಶೆಟ್ಟಿ ಮುಂದಿನ ಸಿನಿಮಾ ರುದ್ರಪ್ರಯಾಗ ಆಗಲೇ ಸೆಟ್ಟೇರಿತ್ತು. ಅನಂತ್​ನಾಗ್​ ಅಭಿನಯದ ಈ ಸಿನಿಮಾದ ಟೈಟಲೇ ಬಾರಿ ಸೌಂಡ್ ಮಾಡಿತ್ತು. ಆದರೆ, ಕೊರೊನಾ ಆರ್ಭಟದಿಂದ ಈ ಸಿನಿಮಾದ ಶೂಟಿಂಗ್ ನಡೆಸಲು ಸಾಧ್ಯವಾಗಿಲ್ಲ. ಶೂಟಿಂಗ್ ಪರ್ಮಿಶನ್ ಸಿಕ್ರೂ ಅನಂತ್​​ನಾಗ್​​​ ಆರೋಗ್ಯದ ದೃಷ್ಟಿಯಿಂದ ಚಿತ್ರಿಕರಣ ಸದ್ಯಕ್ಕೆ ಪೋಸ್ಟ್​ಪೋನ್ ಆಗಿದೆ. ಹೀಗಾಗಿ ರಿಷಬ್​​ ಶೆಟ್ಟಿ ಈ ಹೊಸ ಸಿನಿಮಾಗೆ ಕೈ ಹಾಕಿ ಕೆಲಸ ಮುಗಿಸಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಸಹಾಯಕ ನಿರ್ದೇಶಕ ಭರತ್ ರಾಜ್ ರಿಷಬ್ ಶೆಟ್ಟಿಯವರ ಈ ಹೊಸ ಸಿನಿಮಾಗೆ ಆಕ್ಷನ್​ ಹೇಳಿದ್ದು, ಚಿಕ್ಕಮಗಳೂರಿನ ಹಸಿರು ತಾಣಗಳಲ್ಲಿ ಸಂಪೂರ್ಣ ಸಿನಿಮಾದ ಚಿತ್ರಕರಣ ನಡೆದಿದೆ. ರಿಷಬ್ ಶೆಟ್ಟಿಗೆ ನಾಯಕಿಯಾಗಿ ಗಾನವಿ ಲಕ್ಷಮಣ್ ಜೋಡಿಯಾಗಿದ್ದಾರೆ. ಇದೊಂದು ಫನ್​ ಲವ್​ಸ್ಟೋರಿಯಾಗಿದ್ದು. ಪ್ರಮೋದ್ ಶೆಟ್ಟಿ​, ಉಗ್ರಂ ಮಂಜು ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇನ್ನು ಅಜನಿಶ್​ ಲೋಕನಾಥ್​ ಈ ಹೊಸ ಸಿನಿಮಾಗೆ ಮ್ಯೂಸಿಕ್ ಕಂಪೋಸ್​ ಮಾಡಿದ್ದಾರೆ. ಅರವಿಂದ್ ಕಶ್ಯಪ್​ ಸಿನಿಮಾಟೋಗ್ರಫಿ ಚಿತ್ರಕ್ಕಿದೆ.

ರಿಷಬ್​ ಶೆಟ್ಟಿ ಸಿನಿಮಾವೆಂದರೆ ಅಲ್ಲಿ ಏನೋ ಒಂದು ವಿಶೇಷವಿರುತ್ತದೆ. ಕ್ರಿಯೆಟಿವಿಟಿ ಇರುತ್ತದೆ. ಹೊಸತನ ಇರುತ್ತದೆ ಎಂಬ ಟ್ರೆಂಡಅನ್ನು ಹುಟ್ಟುಹಾಕಿದ ಅಪರೂಪದ ನಿರ್ದೇಶಕ. ಸರ್ಕಾರಿ ಶಾಲೆ ಕಾಸರಗೋಡು ಡೈರಕ್ಟರ್​ ಕ್ಯಾಪ್​ ಬಿಟ್ಟು ಬೆಲ್​ ಬಾಟಂನಲ್ಲಿ ನಾಯಕನಾಗಿ ನಟಿಸಿದರು. ಇದೀಗ ಮತ್ತೊಮ್ಮೆ ನಾಯಕ ನಾಟನಾಗಿ ಕಾಣಿಸಿಕೊಂಡು ಸಿನಿ ಪ್ರೇಕ್ಷಕರಿಗೆ ಸರ್ಪ್ರೈಸ್​ ಕೊಡಲು ಸಿದ್ದರಾಗಿದ್ದಾರೆ. ಈ ಚಿತ್ರದ ಟೈಟಲ್​ ಏನು ಅನೋದರ ಬಗ್ಗೆ ಇದೇ ಶುಕ್ರವಾರ ಅಂದ್ರೆ ನಾಳೆ ರೀವಿಲ್​ ಆಗಲಿದೆ.

Next Story

RELATED STORIES