Top

'ಬಿಚ್ಚುಗತ್ತಿ' ರಾಜವರ್ಧನ್ ಕಾಲಿವುಡ್​ಗೆ ಎಂಟ್ರಿ

ಕನ್ನಡ, ತಮಿಳು ದ್ವಿಭಾಷಾ ಚಿತ್ರಕ್ಕೆ ರಾಜವರ್ಧನ್​ ಗ್ರೀನ್​ ಸಿಗ್ನಲ್ ಕೊಟ್ಟಿದ್ಧಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಬಿಚ್ಚುಗತ್ತಿ ರಾಜವರ್ಧನ್ ಕಾಲಿವುಡ್​ಗೆ ಎಂಟ್ರಿ
X

ಬಿತ್ತುಗತ್ತಿ ಭರಮಣ್ಣ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ನಟ ರಾಜವರ್ಧನ್. ಬಿಚ್ಚುಗತ್ತಿ ಸೀಕ್ವೆಲ್​ ಶೂಟಿಂಗ್​ ನಡುವೆಯೇ ರಾಜವರ್ಧನ್​ ಮತ್ತೊಂದು ಚಿತ್ರಕ್ಕೆ ಕೈ ಜೋಡಿಸಿದ್ದಾರೆ. ಈ ಸಿನಿಮಾ ಮೂಲಕ ಕಾಲಿವುಡ್​ಗೂ ಎಂಟ್ರಿ ಕೊಡುತ್ತಿದ್ದಾರೆ.

ಹಿರಿಯ ನಟ ಡಿಂಗ್ರಿ ನಾಗರಾಜ್​ ಪುತ್ರ ರಾಜವರ್ಧನ್​​ ಬಿಚ್ಚುಗತ್ತಿ ಸಿನಿಮಾ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.. ದಳವಾಯಿ ದಂಗೆಯ ಮುಂದುವರೆದ ಭಾಗವನ್ನು ತೆರೆಮೇಲೆ ತರುವ ಪ್ರಯತ್ನ ನಡೀತಿದೆ. ಇದರ ಮಧ್ಯೆ ಮತ್ತೊಂದು ಚಿತ್ರಕ್ಕೆ ರಾಜವರ್ಧನ್​ ಸಹಿ ಮಾಡಿದ್ದಾರೆ.

ಮೊದಲ ಸಿನಿಮಾದಲ್ಲೇ ಐತಿಹಾಸಿಕ ಪಾತ್ರ ಮಾಡಿ ಸೈ ಅನ್ನಿಸಿಕೊಂಡ ನಟ ರಾಜವರ್ಧನ್. ಹರಿ ಸಂತು ನಿರ್ದೇಶನದ ಬಿಚ್ಚುಗತ್ತಿ ಸಿನಿಮಾ ಒಂದು ರೇಂಜ್​ಗೆ ಸದ್ದು ಮಾಡಿತ್ತು. ರಾಜವರ್ಧನ್​ ಅಭಿನಯಕ್ಕೂ ಒಳ್ಳೆ ಮಾರ್ಕ್ಸ್​ ಸಿಕ್ತು. ಇದೇ ಹುಮ್ಮಸ್ಸಿನಲ್ಲಿ ಕನ್ನಡ, ತಮಿಳು ದ್ವಿಭಾಷಾ ಚಿತ್ರಕ್ಕೆ ರಾಜವರ್ಧನ್​ ಗ್ರೀನ್​ ಸಿಗ್ನಲ್ ಕೊಟ್ಟಿದ್ಧಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಪ್ರೊಡಕ್ಷನ್ ನಂಬರ್​ ವನ್​​ ಹೆಸರಿನಲ್ಲಿ ಪೋಸ್ಟರ್​ ಸಮೇತ ಹೊಸ ಸಿನಿಮಾ ಅನೌನ್ಸ್​ ಮಾಡಿದ್ದಾರೆ ರಾಜವರ್ಧನ್. ಈ ಪೋಸ್ಟರ್​ ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಹುಟ್ಟಿಸುತ್ತಿದೆ. ಅಷ್ಟೇಅಲ್ಲ ಈ ಸಿನಿಮಾವನ್ನ ಏಕಕಾಲದಲ್ಲಿ ಕನ್ನಡ ಮತ್ತು ತಮಿಳಿನಲ್ಲಿ ಚಿತ್ರೀಕರಿಸಲಾಗುತ್ತದೆ. ಪ್ರೊಡಕ್ಷನ್ ನಂಬರ್​ ವನ್​​ ಸಿನಿಮಾ ಸತ್ಯ ಘಟನೆಯಾಧಾರಿತ ಚಿತ್ರ ಅನ್ನೋದು ವಿಶೇಷ.

ರೆಡ್​ ಡೈಮಂಡ್​ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಈ ಸಿನಿಮಾವನ್ನ ಕುಮರೇಶ್​ ಕುಮಾರ್​ ನಿರ್ದೇಶನ ಮಾಡಲಿದ್ದಾರೆ. ಸದ್ಯಕ್ಕೆ ಸಿನಿಮಾ ಬಗ್ಗೆ ಇಷ್ಟೇ ಮಾಹಿತಿ ಸಿಕ್ಕಿರೋದು. ಸದ್ಯದಲ್ಲೇ ಚಿತ್ರದ ಫಸ್ಟ್​ಲುಕ್ ಟೀಸರ್​ ಲಾಂಚ್​ ಮಾಡೋ ಪ್ಲಾನ್​ನಲ್ಲಿದೆ ಚಿತ್ರತಂಡ. ಇನ್ನು ಈ ಚಿತ್ರದ ಟೆಕ್ನಿಕಲ್​ ಟೀಂ ಮತ್ತು ಸ್ಟಾರ್​ಕಾಸ್ಟ್ ದೊಡ್ಡ ಸರ್ಪೈಸ್ ಆಗಿರುತ್ತೆ ಅನ್ನಲಾಗುತ್ತಿದೆ. ಒಟ್ಟಾರೆಯಾಗಿ ರಾಜವರ್ಧನ್​ ಎರಡನೇ ಸಿನಿಮಾದಲ್ಲೇ ಕಾಲಿವುಡ್​ಗೆ ಎಂಟ್ರಿ ಕೊಡ್ತಿರೋದ ವಿಶೇಷ.

Next Story

RELATED STORIES