Top

ಬುದ್ದಿವಂತನ ತಾಕತ್ತು ನೋಡಿ ಶಿವಣ್ಣ ಹೇಳಿದ್ದೇನು?

  • ಉಪೇಂದ್ರ ಸರಸ್ವತಿ ಪುತ್ರ, ಅದ್ಭುತ ನಿರ್ದೇಶಕ - ನಟ ಶಿವರಾಜ್​ ಕುಮಾರ್.
  • ಓಂ ಸಿನಿಮಾ ಆಗೋದಕ್ಕೆ ಶಿವಣ್ಣನೇ ಕಾರಣ - ನಟ, ನಿರ್ದೇಶಕ ಉಪೇಂದ್ರ

ಬುದ್ದಿವಂತನ ತಾಕತ್ತು ನೋಡಿ ಶಿವಣ್ಣ ಹೇಳಿದ್ದೇನು?
X

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​ ಮತ್ತು ರಿಯಲ್​ ಸ್ಟಾರ್​ ಉಪೇಂದ್ರ ಕಾಂಬಿನೇಷನ್​ನಲ್ಲಿ ಬಂದ ಓಂ ಸಿನಿಮಾ ಸೃಷ್ಟಿಸಿದ ದಾಖಲೆಗಳು ಒಂದೆರಡಲ್ಲ. ಇತ್ತೀಚೆಗಷ್ಟೆ ಓಂ ಸಿನಿಮಾ 25 ವರ್ಷ ಪೂರೈಸಿತ್ತು. ಇದೀಗ ಮತ್ತೊಮ್ಮ ಓಂ ಸಿನಿಮಾವನ್ನ ಶಿವಣ್ಣ ಮತ್ತು ಉಪ್ಪಿ ನೆನಪಿಸಿಕೊಂಡಿದ್ಧಾರೆ.

ಸೆಟ್ಟೇರಿದ ದಿನದಿಂದಲೂ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿರೋ ಸಿನಿಮಾ ಕಬ್ಜ. ಅಂಡಲ್​ವರ್ಲ್ಡ್​​ ಅಧಿಪತಿಯಾಗಿ ಇಡೀ ಭೂಗತಲೋಕವನ್ನ ಕಬ್ಜ ಮಾಡಿಕೊಳ್ಳೋಕ್ಕೆ ಉಪೇಂದ್ರ ರೆಡಿಯಾಗಿದ್ದಾರೆ. ಫೋಟೋಶೂಟ್​, ಮುಹೂರ್ತ ಮುಗಿಸಿ, ಶೂಟಿಂಗ್​ ನಡಿತ್ತಿದ್ದ ಸಮಯದಲ್ಲೇ ಲಾಕ್​ಡೌನ್​​ ಎದುರಾಗಿತ್ತು. ಇದೀಗ ಮತ್ತೆ ಶೂಟಿಂಗ್​ ಶುರು ಮಾಡುವ ಮುನ್ನ, ಚಿತ್ರದ ಎಕ್ಸ್​ಕ್ಲೂಸಿವ್​ ವೆಬ್​ಸೈಟ್​ ಲಾಂಚ್​ ಮಾಡಲಾಗಿದೆ.


ಕೆಜಿಎಫ್​ ಮಾದರಿಯಲ್ಲಿ ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಕಬ್ಜ ಸಿನಿಮಾ ನಿರ್ಮಾಣವಾಗುತ್ತಿದೆ. ಬರೋಬ್ಬರಿ 7 ಭಾಷೆಗಳಲ್ಲಿ ಸಿನಿಮಾ ರಿಲೀಸ್​ಗೆ ಪ್ಲಾನ್ ಮಾಡಲಾಗುತ್ತಿದೆ. 70- 80ರ ದಶಕದ ರೆಟ್ರೋ ಸ್ಟೈಲ್​​ ಡಾನ್​ ಅವತಾರದಲ್ಲಿ ರಿಯಲ್​ ಸ್ಟಾರ್​ ಉಪೇಂದ್ರ ದರ್ಶನ ಕೊಟ್ಟಿದ್ದಾರೆ. ಹಾಲಿವುಡ್​ ಸ್ಟೈಲ್​ನಲ್ಲಿ ಇಡೀ ಚಿತ್ರವನ್ನ ಸೆರೆ ಹಿಡಿಯಲಾಗುತ್ತಿದೆ. ಅದ್ಧೂರಿ ಸೆಟ್​ಗಳನ್ನ ನಿರ್ಮಿಸಿ, ನೂರಾರು ಸಹಕಲಾವಿದರು ಮತ್ತು ತಂತ್ರಜ್ಞರನ್ನ ಬಳಸಿಕೊಂಡು ಚಿತ್ರೀಕರಣ ನಡೆತೀದೆ.

ಏಳು ಭಾಷೆಗಳಲ್ಲಿ ನಿರ್ಮಾಣವಾಗಿರೋ ಕಬ್ಜ ಸಿನಿಮಾವನ್ನ ಶಿವಣ್ಣ ಕೊಂಡಾಡಿದರು. ಇಂತಾದೊಂದು ಸಿನಿಮಾ ಮಾಡ್ತಿರೋ ಆರ್​. ಚಂದ್ರು ಮತ್ತು ಉಪ್ಪಿಗೆ ಆಲ್​ದಿ ಬೆಸ್ಟ್​ ಹೇಳಿದರು. ಓಂ ಸಿನಿಮಾ ನೆನಪಿಸಿಕೊಂಡು, ಉಪ್ಪಿ ಟ್ಯಾಲೆಂಟ್​ ಬಗ್ಗೆ ಶಿವಣ್ಣ ಮಾತನಾಡಿದರು.

ಉಪೇಂದ್ರ ಸರಸ್ವತಿ ಪುತ್ರ.. ಅದ್ಭುತ ನಿರ್ದೇಶಕ. ಇಂತಹ ನಿರ್ದೇಶಕರನ್ನ ಒಪ್ಪಿಸಿ, ಸಿನಿಮಾ ಮಾಡ್ತಿರೋ ಆರ್​. ಚಂದ್ರು ಗ್ರೇಟ್​ ಎಂದು ಶಿವರಾಜ್​ಕುಮಾರ್ ಅವರು ಹೇಳಿದರು.


ಓಂ ಸಿನಿಮಾ ಆಗೋದಕ್ಕೆ ಶಿವಣ್ಣನೇ ಕಾರಣ. ಅವರಿಲ್ಲದಿದ್ದರೇ ಓಂ ಸಿನಿಮಾ ಸಾಧ್ಯವೇ ಇರುತ್ತಿರಲಿಲ್ಲ ಎಂದು ಉಪೇಂದ್ರ ಅವರು ಶಿವಣ್ಣ ಬಗ್ಗೆ ಮಾತನಾಡಿದರು.

Next Story

RELATED STORIES