Top

ಸಿನಿಮಾ ಪಕ್ಕಕ್ಕಿಟ್ಟು ಹೈನುಗಾರಿಕೆಯತ್ತ ದರ್ಶನ್​ ಚಿತ್ತ

ಇತ್ತೀಚೆಗಷ್ಟೆ ಧಾರವಾಡಕ್ಕೆ ಭೇಟಿ ನೀಡಿದ್ದ ದರ್ಶನ್​ ಮಾಜಿ ಸಚಿವರಾದ ವಿನಯ್​ ಕುಲಕರ್ಣಿ ಬಳಿ 30 ಜಮುನಾಪೂರಿ ತಳಿಯ ಮೇಕೆಗಳನ್ನ ಖರೀದಿಸಿದ್ದರು.

ಸಿನಿಮಾ ಪಕ್ಕಕ್ಕಿಟ್ಟು ಹೈನುಗಾರಿಕೆಯತ್ತ ದರ್ಶನ್​ ಚಿತ್ತ
X

ಲಾಕ್​ಡೌನ್​ ಮುಗಿದ್ಮೇಲೆ ಸಿನಿಮಾ ಶೂಟಿಂಗ್​ ಯಾವಾಗ ಶುರುವಾಗುತ್ತೆ ಅಂತ ಸ್ಟಾರ್ಸ್​ ಕಾಯ್ತಿದ್ರೆ, ದರ್ಶನ್​ ಮಾತ್ರ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಮಾಸ್​ ಮಹಾರಾಜ ದರ್ಶನ್​​ ಪ್ರಾಣಿ ಪಕ್ಷಿ ಅಂದ್ರೆ ಜೀವ ಬಿಡ್ತಾರೆ. ಇನ್ನು ಇತ್ತೀಚೆಗೆ ಹೈನುಗಾರಿಕೆಯತ್ತ ದರ್ಶನ್​ ಮುಖ ಮಾಡಿದ್ದಾರೆ. ಮೇಕೆ, ಕುದುರೆ ಮತ್ತು ಹಸುಗಳನ್ನ ಸಾಕಲು ಮುಂದಾಗಿದ್ದಾರೆ. ಇದಕ್ಕಾಗಿ ಭರ್ಜರಿ ಕರಸತ್ತನ್ನೇ ನಡೆಸುತ್ತಿದ್ದಾರೆ.

ಆರಡಿ ಕಟೌಟ್​ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರೊಳಗೊಬ್ಬ ಪ್ರಾಣಿ ಪ್ರೇಮಿ ಇದ್ದಾನೆ. ಕಷ್ಟದ ದಿನಗಳನ್ನ ಮೆಟ್ಟಿ ಬಂದ ದರ್ಶನ್​​, ಆ ದಿನಗಳನ್ನ ಇಂದಿಗೂ ಮರೆತ್ತಿಲ್ಲ. ಚಿಕ್ಕಂದಿನಿಂದಲೇ ಪ್ರಾಣಿ ಪಕ್ಷಿ ಪ್ರೀತಿ ಬೆಳೆಸಿಕೊಂಡು ಬಂದ ದರ್ಶನ್​, ಇವತ್ತು ನೂರಾರು ಪ್ರಾಣಿ-ಪಕ್ಷಿಗಳನ್ನ ಮಕ್ಕಳಂತೆ ಸಾಕುತ್ತಿದ್ದಾರೆ. ಒಂದ್ಕಾಲದಲ್ಲಿ ಹಸು ಕಟ್ಟಿ ಹಾಲು ಕರೆದು ಮಾರಿದ್ದ ದರ್ಶನ್​ ಇವತ್ತಿಗೂ ಅದನ್ನೆಲ್ಲಾ ಮರೆತ್ತಿಲ್ಲ. ಸೂಪರ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್ ಒಳಗೊಬ್ಬ ರೈತನಿದ್ದಾನೆ.

ಸಂಬಂಧಗಳಿಗೆ ಬೆಲೆ ಇಲ್ಲದ, ಸ್ನೇಹಕ್ಕೂ ಕವಡೆ ಕಾಸಿನ ಕಿಮ್ಮತ್ತಿಲ್ಲದ ಪ್ರಪಂಚದಲ್ಲಿ ದಚ್ಚು ಪ್ರಾಣಿ ಪಕ್ಷಿ ಪ್ರೀತಿ ಮೆಚ್ಚುವಂತದ್ದು. ಮೈಸೂರಿನಲ್ಲಿ ದರ್ಶನ್​​​ ಮಾಲಿಕತ್ವದ ವಿಶಾಲವಾದ ಫಾರಂ​ ಹೌಸ್ ಇದೆ. ಅಲ್ಲಿ ಕುದುರೆ, ಒಂಟೆ, ಹಸು, ನಾಯಿ ಹೀಗೆ ಹಲವು ಪ್ರಾಣಿ ಮತ್ತು ವಿದೇಶದ ಪಕ್ಷಿಗಳನ್ನ ಸಾಕುತ್ತಿದ್ದಾರೆ. ತಮ್ಮ ಬಿಡುವಿನ ವೇಳೆಯನ್ನ ಹೆಚ್ಚಾಗಿ ಚಾಲೆಂಜಿಂಗ್ ಸ್ಟಾರ್ ಇದೇ ಫಾರಂ​ ಹೌಸ್​ನಲ್ಲಿ ಕಳೀತಾರೆ. ಇದಿಷ್ಟೆ ಅಲ್ಲ, ಪ್ರತಿ ವರ್ಷ ಮೈಸೂರು ಮೃಗಾಲಯದಲ್ಲಿ ಹಲವು ಪ್ರಾಣಿಗಳನ್ನ ದತ್ತು ಪಡೆದು, ಅವುಗಳ ಖರ್ಚು ಭರಿಸ್ತಾರೆ.

ಇದೀಗ ಮತ್ತಷ್ಟು ಕುದುರೆ, ಹಸು, ಕುರಿ, ಮೇಕೆ ಸಾಕಣೆಗೆ ದರ್ಶನ್​ ಮನಸ್ಸು ಮಾಡಿದ್ದಾರೆ. ಇತ್ತೀಚೆಗಷ್ಟೆ ಧಾರವಾಡಕ್ಕೆ ಭೇಟಿ ನೀಡಿದ್ದ ದರ್ಶನ್​ ಮಾಜಿ ಸಚಿವರಾದ ವಿನಯ್​ ಕುಲಕರ್ಣಿ ಬಳಿ 30 ಜಮುನಾಪೂರಿ ತಳಿಯ ಮೇಕೆಗಳನ್ನ ಖರೀದಿಸಿದ್ದರು. ಇದೇ ವೇಳೆ ದರ್ಶನ್​​ ಎತ್ತಿನ ಬಂಡಿ ಏರಿ ಬರ್ಝರಿ ಸವಾರಿ ಮಾಡಿದ್ದರು.

ಮೇಕೆ ನಂತರ ಕುರಿ, ಹಸು, ಕುದುರೆಗಳನ್ನ ಖರೀದಿಸಿ, ಸಾಕಲು ಮುಂದಾಗಿದ್ದಾರೆ. ಅದಕ್ಕಾಗಿ ಊರೂರು ಸುತ್ತಾಡಿ ಹೈನುಗಾರಿಕೆಯ ಬಗ್ಗೆ ದರ್ಶನ್ ಮಾಹಿತಿ ಪಡೆಯುತ್ತಿದ್ದಾರೆ. ಲಾಕ್​ಡೌನ್​ ಹಿನ್ನಲೆ ಕಳೆದ ನಾಲ್ಕೈದು ತಿಂಗಳಿನಿಂದ ಸಿನಿಮಾ ಶೂಟಿಂಗ್​ಗೆ ಬ್ರೇಕ್​ ಬಿದ್ದಿತ್ತು. ಈಗಾಗಲೇ ಕೆಲ ಸಿನಿಮಾಗಳ ಚಿತ್ರೀಕರಣ ಶುರುವಾಗಿದೆ. ಆದರೆ, ದರ್ಶನ್ ಮಾತ್ರ ಸದ್ಯಕ್ಕೆ ಸಿನಿಮಾಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ತಮ್ಮ ಹವ್ಯಾಸವಾದ ಹೈನುಗಾರಿಕೆಯತ್ತ ಹೊರಳಿದ್ದಾರೆ.

ಕಳೆದೆರಡು ದಿನಗಳಿಂದ ದರ್ಶನ್​ ದಾವಣಗೆರೆಯಲ್ಲಿ ಬೀಡು ಬಿಟ್ಟಿದ್ಧಾರೆ. ನೆಚ್ಚಿನ ನಟನನ್ನ ನೋಡಲು ನೂರಾರು ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಭಾನುವಾರ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರ ಮನೆಗೆ ಭೇಟಿ ನೀಡಿದ್ದ ದರ್ಶನ್​, ಎಸ್​. ಎಸ್​ ಮಲ್ಲಿಕಾರ್ಜುನ್​ ಅವರ ಜೊತೆಗೆ ತೆರಳಿ ಕುರಿ, ಹಸು, ಕುದುರೆಗಳನ್ನ ವೀಕ್ಷಿಸಿದ್ದಾರೆ.

ಮಾಜಿ ಸಚಿವರಾದ ಎಸ್​. ಎಸ್​ ಮಲ್ಲಿಕಾರ್ಜುನ್​ ಇಪ್ಪತ್ತಕ್ಕೂ ಹೆಚ್ಚು ಕುದುರೆಗಳನ್ನ ಸಾಕಿದ್ದಾರೆ. ಅಲ್ಲದೇ ವಿವಿಧ ತಳಿಯ ಹಸುಗಳು ಅವರ ಬಳಿಯಿದೆ.. ಹೈನುಗಾರಿಕೆ ಕುರಿತು ಅವರಿಂದ ದರ್ಶನ್​ ಮಾಹಿತಿ ಪಡೆದಿದ್ದಾರೆ. ಇದೇ ವೇಳೆ ಎಸ್​. ಎಸ್​ ಮಲ್ಲಿಕಾರ್ಜುನ್​ ಅವರು ದರ್ಶನ್​ಗೆ ಅವರಿಗೆ ಎರಡು ಕುದುರೆ ಉಡುಗೊರೆಯಾಗಿ ನೀಡಿದ್ಧಾರೆ.

ಒಟ್ಟಾರೆಯಾಗಿ ದರ್ಶನ್​ ಬಹಳ ಕಾಳಜಿ ವಹಿಸಿ, ಹೈನುಗಾರಿಕೆಗೆ ಮುಂದಾಗಿದ್ದಾರೆ. ದೇಶ ವಿದೇಶ ತಳಿಯ ಹಸು, ಕುದುರೆ, ಕುರಿ, ಮೇಕೆಗಳನ್ನ ಸಾಕಲು ಮನಸ್ಸು ಮಾಡಿದ್ದಾರೆ. ಸಿನಿಮಾ ಬಿಟ್ಟು ಬಿಡುವಿನ ಸಮಯವನ್ನ ಹೈನುಗಾರಿಕೆಯಲ್ಲೇ ಕಳೆಯಲು ಚಿಂತನೆ ನಡೆಸಿದ್ದಾರೆ.

Next Story

RELATED STORIES