Top

ಮನೆಮಂದಿ ಕಣ್ಮುಂದೆಯೇ ಕಣ್ಮುಚ್ಚಿದ 'ಬ್ಲ್ಯಾಕ್​ ಪ್ಯಾಂಥರ್'

ಹಾಲಿವುಡ್​​ನ 'ಬ್ಲ್ಯಾಕ್​ ಪ್ಯಾಂಥರ್' ಸಿನಿಮಾದಿಂದ ಅಪಾರ ಅಭಿಮಾನಿಗಳನ್ನ ಸೃಷ್ಟಿಸಿಕೊಂಡಿದ್ದ ನಟ ಚಾಡ್​ವಿಕ್​ ಬೋಸ್​ಮನ್

ಮನೆಮಂದಿ ಕಣ್ಮುಂದೆಯೇ ಕಣ್ಮುಚ್ಚಿದ ಬ್ಲ್ಯಾಕ್​ ಪ್ಯಾಂಥರ್
X

ಕ್ಯಾನ್ಸರ್​ ಅಂದ್ರೆ, ಎಲ್ಲರೂ ಬೆಚ್ಚಿ ಬೀಳ್ತಾರೆ. ತೆರೆಮೇಲೆ ಭರ್ಜರಿ ಸ್ಟಂಟ್​​ಗಳನ್ನ ಮಾಡುವ ಸೂಪರ್​ ಹೀರೋಗಳು ಮಾರಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಕೆಲವರು ಮಾರಣಾಂತಿಕ ಕಾಯಿಲೆಯ ವಿರುದ್ಧ ಹೋರಾಡಿ ಗೆದ್ದಿದ್ದರೇ, ಮತ್ತೆ ಕೆಲವರು ಸೋತಿದ್ದಾರೆ. ಇದೀಗ ಹಾಲಿವುಡ್​ನ ಖ್ಯಾತ ನಟ ಚಾಡ್​ವಿಕ್​ ಬೋಸ್​ಮನ್​ ಕ್ಯಾನ್ಸರ್​ನಿಂದ ಕೊನೆಯುಸಿರೆಳೆದಿದ್ದಾರೆ.

ಚಾಡ್​ವಿಕ್​ ಬೋಸ್​ಮನ್ ಹೀಗಂದ್ರೆ, ಯಾರಿಗೂ ಗೊತ್ತಾಗಲ್ಲ. ಬ್ಲ್ಯಾಕ್​ ಪ್ಯಾಂಥರ್​ ಅಂದ್ರೆ ಗೊತ್ತಾಗ್ತಾರೆ. ಹಾಲಿವುಡ್​​ನ 'ಬ್ಲ್ಯಾಕ್​ ಪ್ಯಾಂಥರ್' ಸಿನಿಮಾದಿಂದ ಅಪಾರ ಅಭಿಮಾನಿಗಳನ್ನ ಸೃಷ್ಟಿಸಿಕೊಂಡಿದ್ದ ನಟ ಚಾಡ್​ವಿಕ್​ ಬೋಸ್​ಮನ್.

'ಬ್ಲ್ಯಾಕ್​ ಪ್ಯಾಂಥರ್' ಸೂಪರ್​ ಹಿಟ್​ ನಂತ್ರ ಚಾಡ್​ವಿಕ್​ ಬೋಸ್​ಮನ್ ಹಲವು ಹಾಲಿವುಡ್​ ಆ್ಯಕ್ಷನ್​ ಸಿನಿಮಾಗಳಲ್ಲಿ 'ಬ್ಲ್ಯಾಕ್​ ಪ್ಯಾಂಥರ್' ಬಣ್ಣ ಹಚ್ಚಿದ್ದರು. ಅವೆಂಜರ್​ ಎಂಡ್​ ಗೇಮ್​ ಸಿನಿಮಾದಲ್ಲೂ 'ಬ್ಲ್ಯಾಕ್​ ಪ್ಯಾಂಥರ್' ಆಗಿ ಇತ್ತೀಚೆಗೆ ನಟಿಸಿ, ಗೆದ್ದಿದ್ದರು.

43 ವರ್ಷ ವಯಸ್ಸಿಗೆ ಚಾಡ್​ವಿಕ್​ ಬೋಸ್​ಮನ್ ಕ್ಯಾನ್ಸರ್​​ನಿಂದ ನಿಧನರಾಗಿದ್ದಾರೆ. ಲಾಸ್‌ ಏಂಜಲಿಸ್‌ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೇ ಅವರು ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕೋಲೋನ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಕೂಡ ಆ ಕುರಿತು ಚಾಡ್‌ವಿಕ್‌ ಬೋಸ್‌ಮನ್‌ ಸಾರ್ವಜನಿಕವಾಗಿ ಮಾತನಾಡುತ್ತಿರಲಿಲ್ಲ. ಅನಾರೋಗ್ಯದ ನಡುವೆಯೂ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಕಿಮೋ ಥೆರಪಿ ನಡೆಯುತ್ತಿದ್ದ ಸಮಯದಲ್ಲೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಲಾಸ್‌ ಏಂಜಲಿಸ್‌ನ ತಮ್ಮ ನಿವಾಸದಲ್ಲಿ ಕುಟುಂಬ ಸದಸ್ಯರು ಮುಂದೆಯೇ ಬೋಸ್‌ಮನ್‌ ಕೊನೆಯುಸಿರೆಳೆದಿದ್ದಾರೆ.

2016ರಲ್ಲಿ ಚಾಡ್‌ವಿಕ್‌ ಬೋಸ್‌ಮನ್‌ ಅವರಿಗೆ 3ನೇ ಹಂತದ ಕ್ಯಾನ್ಸರ್​ ಇರುವುದು ಗೊತ್ತಾಗಿತ್ತು. 4 ವರ್ಷಗಳಿಂದ ಕ್ಯಾನ್ಸರ್​ ವಿರುದ್ಧ ಹೋರಾಟ ನಡೆಸುತ್ತಲೇ ಇದ್ದರು. ಆದರು, ಕ್ಯಾನ್ಸರ್​ ನಾಲ್ಕನೇ ಹಂತಕ್ಕೆ ತಲುಪಿತ್ತು.. ಈ ಬಗ್ಗೆ ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. ಬ್ಲ್ಯಾಕ್​ ಪ್ಯಾಂಥರ್' ಖ್ಯಾತಿಯ ಚಾಡ್‌ವಿಕ್‌ ಬೋಸ್‌ಮನ್‌ ನಿಧನಕ್ಕೆ ಹಾಲಿವುಡ್​ ಸಿನಿಮಾ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ.

Next Story

RELATED STORIES