Top

ಬಂಡೀಪುರ ದಟ್ಟ ಅರಣ್ಯದಲ್ಲಿ ಅಕ್ಷಯ್ ಕುಮಾರ್​ ಸಾಹಸ

‘ಇನ್​ ಟು ದಿ ವೈಲ್ಡ್​ ವಿತ್ ಬೇರ್​ ಗ್ರಿಲ್ಸ್’ ಅಕ್ಷಯ್​ ಕುಮಾರ್​ ಎಪಿಸೋಡ್​ ಟ್ರೈಲರ್​ ಸಖತ್​ ವೈರಲ್ಲಾಗಿದೆ.

ಬಂಡೀಪುರ ದಟ್ಟ ಅರಣ್ಯದಲ್ಲಿ ಅಕ್ಷಯ್ ಕುಮಾರ್​ ಸಾಹಸ
X

ಮ್ಯಾನ್ ವರ್ಸಸ್ ವೈಲ್ಡ್ ಶೋ ಯಾರಿಗ್​ ಗೊತ್ತಿಲ್ಲ ಹೇಳಿ. ಬೇರ್ ಗ್ರಿಲ್ಸ್ ಜೊತೆ ಪ್ರಧಾನಿ ಮೋದಿ, ಸೂಪರ್ ಸ್ಟಾರ್ ರಜನಿಕಾಂತ್ ಕಾಡು ಮೇಡು ಸುತ್ತಿದ ಮೇಲೆ ಭಾರತದಲ್ಲೂ ಕಾರ್ಯಕ್ರಮ ಸಖತ್​ ಫೇಮಸ್​ ಆಗ್ಬಿಟ್ಟಿದೆ. ಇದೀಗ ಬಾಲಿವುಡ್ ಆ್ಯಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ಸರದಿ. ಬಂಡೀಪುರ ದಟ್ಟಾರಣ್ಯದಲ್ಲಿ ಖಿಲಾಡಿ ಅಕ್ಕಿ ಮತ್ತು ಬೇರ್​ ಗ್ರಿಲ್ಸ್​​ ಸಾಹಸಗಳು ಹೇಗಿತ್ತು.

ಅಕ್ಷಯ್​ ಕುಮಾರ್​, ಬಾಲಿವುಡ್​ ಸೂಪರ್​ ಸ್ಟಾರ್​. ಸಾಹಸ ಅಂದ್ರೆ, ಖಿಲಾಡಿಗೆ ಸಿಕ್ಕಾಪಟ್ಟೆ ಇಷ್ಟ. ಇನ್ನು ಬೇರ್​ ಗ್ರಿಲ್ಸ್​ ಜೊತೆ ಕಾಡು ಮೇಡು ಅಲೆಯೋದು ಅಂದ್ರೆ, ಇನ್ನು ಮಜಾ ಅಲ್ವಾ(?) ಜಗತ್ತಿನ ಪ್ರಸಿದ್ಧ ಕಿರುತೆರೆ ಸಾಹಸ ಕಾರ್ಯಕ್ರಮ 'ಇನ್​ ಟು ದಿ ವೈಲ್ಡ್​ ವಿತ್ ಬೇರ್​ ಗ್ರಿಲ್ಸ್'. ಇದೀಗ ಈ ಕಾರ್ಯಕ್ರಮದಲ್ಲಿ ಅಕ್ಷಯ್​ ಕುಮಾರ್​​ ಭಾಗವಹಿಸಿದ್ದಾರೆ. ಆ ಎಪಿಸೋಡ್​ ಇನ್ನಷ್ಟೆ ಪ್ರಸಾರವಾಗಬೇಕಿದೆ.

'ಇನ್​ ಟು ದಿ ವೈಲ್ಡ್​ ವಿತ್ ಬೇರ್​ ಗ್ರಿಲ್ಸ್' ಅಕ್ಷಯ್​ ಕುಮಾರ್​ ಎಪಿಸೋಡ್​ ಟ್ರೈಲರ್​ ಸಖತ್​ ವೈರಲ್ಲಾಗಿದೆ. ಬೇರ್​ ಗ್ರಿಲ್ಸ್​ ಜೊತೆ ಸೇರಿ ಅಕ್ಷಯ್​ ಕುಮಾರ್​ ಮಾಡಿರೋ ಸಾಹಸಗಳನ್ನ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಕೆಲ ತಿಂಗಳ ಹಿಂದೆಯೇ ಸೆರೆ ಹಿಡಿದಿದ್ದ ಕಾರ್ಯಕ್ರಮ ಇದೀಗ ಪ್ರಸಾರವಾಗಲಿದೆ.

ರಿಸ್ಕಿ ಸ್ಟಂಟ್​​ಗಳನ್ನ ಮಾಡೋದರಲ್ಲಿ ಅಕ್ಷಯ್​ ಕುಮಾರ್​ ನಿಸ್ಸೀಮರು. ಸಿನಿಮಾಗಳಲ್ಲೂ ಅದರ ಝಲಕ್​ ನೋಡಿದ್ದೇವೆ. ಬೇರ್​ ಗ್ರಿಲ್ಸ್​ ಕಾರ್ಯಕ್ರಮದಲ್ಲೂ ಅಂತದ್ದೇ ಸ್ಟಂಟ್ಸ್​ ಮಾಡಿದ್ದಾರೆ. ಬೆಟ್ಟ ಗುಡ್ಡ ಅತ್ತಿಳಿದು, ಮರ ಏರಿ, ಹಗ್ಗದ ಸಹಾಯದಿಂದ ಮೊಸಳೆಗಳಿರುವ ಹೊಳೆ ದಾಟಿ, ಥ್ರಿಲ್ಲಾಗಿದ್ದಾರೆ.

ಕಾರ್ಯಕ್ರಮದ ಭಾಗವಾಗಿ ಬೇರ್​ ಗ್ರಿಲ್ಸ್​​ ಅಕ್ಷಯ್​ ಕುಮಾರ್​ಗೆ ​​ಆನೆ ಲದ್ದಿ ಟೀ ಕೂಡ ಕೊಟ್ಟಿದ್ದಾರೆ. ಅದನ್ನು ಟ್ರೈಲರ್​ನಲ್ಲಿ ನೋಡಬಹುದು.

ಇನ್ನು ಕಾರ್ಯಕ್ರಮದ ಬಗ್ಗೆ ಇನ್​ಸ್ಟಾಗ್ರಾಂ ಲೈವ್​ ಚಾಟಿಂಗ್​ನಲ್ಲಿ ಅಕ್ಷಯ್​ ಕುಮಾರ್​ ಮಾತನಾಡಿದ್ದಾರೆ. ಹುಮಾ ಖುರೇಷಿ, ಲಾರಾ ದತ್ತ ಭೂಪತಿ ಕೂಡ ಲೈವ್​ನಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಆನೆ ಲದ್ದಿಯ ಟೀ ಕುಡಿದ ಬಗ್ಗೆ ನಟಿ ಹುಮಾ ಖುರೇಷಿ ಕೇಳಿದಾಗ ಅಕ್ಷಯ್ ಕುಮಾರ್, ನನಗೇನು ಅನ್ನಿಸಲಿಲ್ಲ, ನಾನು ಪ್ರತಿದಿನ ಗೋ ಮೂತ್ರ ಆರೋಗ್ಯಕ್ಕಾಗಿ ಕುಡಿಯುತ್ತೇನೆ, ಅದರಲ್ಲೇನು ವಿಶೇಷವಿಲ್ಲ ಎಂದಿದ್ದಾರೆ.…

ಸದ್ಯ ಪ್ರಧಾನಿ ಮೋದಿ ಮತ್ತು ರಜಿನಿಕಾಂತ್​ ಭಾಗವಹಿಸಿದ ಮೇಲೆ 'ಇನ್​ ಟು ದಿ ವೈಲ್ಡ್​ ವಿತ್ ಬೇರ್​ ಗ್ರಿಲ್ಸ್' ಕಾರ್ಯಕ್ರಮ ಭಾರತದಲ್ಲೂ ಜನಪ್ರಿಯವಾಗಿದೆ. ಅಕ್ಷಯ್​ ಕುಮಾರ್​ ಎಪಿಸೋಡ್​ ನೋಡೋದನ್ನ ವೀಕ್ಷಕರು ಕಾಯುತ್ತಿದ್ದಾರೆ.

Next Story

RELATED STORIES