Top

ಈ ರಾಜ್ಯದ ಅತ್ಯಂತ ಅನಿಷ್ಟ ಮುಖ್ಯಮಂತ್ರಿ ಯಡಿಯೂರಪ್ಪ - ವಾಟಾಳ್​ ನಾಗರಾಜ್​ ವಾಗ್ದಾಳಿ

ತಾಕತ್ತು, ಧಮ್ಮಿದ್ರೇ ಮರಾಠ ಪ್ರಾಧಿಕಾರ ಬ್ಯಾನ್ ಮಾಡಿ ಗಂಡಸ್ತನ ತೋರ್ಸಿ

ಈ ರಾಜ್ಯದ ಅತ್ಯಂತ ಅನಿಷ್ಟ ಮುಖ್ಯಮಂತ್ರಿ ಯಡಿಯೂರಪ್ಪ - ವಾಟಾಳ್​ ನಾಗರಾಜ್​ ವಾಗ್ದಾಳಿ
X

ಬೆಳಗಾವಿ: ಬೆಳಗಾವಿಯನ್ನು ಕರ್ನಾಟಕ ಸರ್ಕಾರ ಕೈಬಿಟ್ಟಿದೆ. ಬೆಳಗಾವಿ, ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗ, ಬೇರೆ ರಾಜ್ಯದಿಂದ ಶಿವಸೇನೆ ನುಗ್ಗಿ ಕರ್ನಾಟಕಕ್ಕೆ ಬರುವ ವರೆಗೂ ಬಿಡಬಾರದಿತ್ತು ಶಿವಸೇನೆಗೆ ಜೈಲಿನಲ್ಲಿ ಇಡಬೇಕಿತ್ತು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್ ಅವರು ಅಭಿಪ್ರಾಯಟ್ಟಿದ್ದಾರೆ.

ಗಡಿನಾಡು ಬೆಳಗಾವಿಯಲ್ಲಿ ಶಿವಸೇನೆ ಉದ್ಧಟತನ ಬಗ್ಗೆ ಮಾತನಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಭಾವುಟ ಹಾಕುವುದಕ್ಕೆ ಅಡ್ಡಿಪಡಿಸಿದ್ದು ಅತ್ಯಂತ ಅಗೌರವ. ಎಂಇಎಸ್ ರದ್ದು ಮಾಡಬೇಕು, ಎಂಇಎಸ್ ಇರಬಾರದು ಕರ್ನಾಟಕ ಏಕೀಕರಣ ಸಮಿತಿ ಇರಬೇಕು. ಮುಂದಿನ ದಿನದಲ್ಲಿ ಬೆಳಗಾವಿ ಉದ್ದಗಲಕ್ಕೂ ಕನ್ನಡ ಬಾವುಟ ಹಾಕುತ್ತೇವೆ ಎಂದರು.

ಇನ್ನು ಬೆಳಗಾವಿಯಲ್ಲಿರುವ ಎಂಇಎಸ್ ಮುಖಂಡರು ಮಹಾರಾಷ್ಟ್ರ ಬೇಕು ಎನ್ನುವ ಹಾಗಿದ್ರೆ ಉದ್ಧವ್ ಠಾಕ್ರೆ ಹತ್ರಾ ಹೋಗಿ, ಎಂಇಎಸ್ ಕರೆಸಿ ಪೊಲೀಸರು ಸಭೆ ಮಾಡ್ತಾರೆ, ಯಾಕೆ ಸಭೆ ಮಾಡಬೇಕು. ಇನ್ನೂ ಹದಿನೈದು ದಿನಗಳಲ್ಲಿ ಎಂಇಎಸ್ ಸಂಘಟನೆ ವಜಾ ಮಾಡಬೇಕು. ಎಂಇಎಸ್ ಸಂಘಟನೆ ಮುಖಂಡರಿಂದ ಮುಚ್ಚಳಿಕೆ ಬರಿಸಿಕೊಳ್ಳಬೇಕು. ಮರಾಠಿ ಪರ ಮಾತಾಡಿದ್ರೆ ಮಹಾರಾಷ್ಟ್ರಕ್ಕೆ ಹೋಗಬೇಕು ಅಂತಾ ಬರೆಸಿಕೊಳ್ಳಬೇಕು ಎಂದಿದ್ದಾರೆ.

ಸದ್ಯ ಯಡಿಯೂರಪ್ಪ ಅವರಿಗೆ ಇದನ್ನ ಮಾಡುವ ಶಕ್ತಿ ಇಲ್ಲ, ಈ ರಾಜ್ಯವನ್ನ ಯಡಿಯೂರಪ್ಪ ನಾಶ ಮಾಡುತ್ತಿದ್ದಾರೆ. ಈ ರಾಜ್ಯದ ಅತ್ಯಂತ ಅನಿಷ್ಠ ಮುಖ್ಯಮಂತ್ರಿ ಯಡಿಯೂರಪ್ಪ. ವರವಾಗುವ ಬದಲು ಯಡಿಯೂರಪ್ಪ ರಾಜ್ಯಕ್ಕೆ ಶಾಪವಾಗಿದ್ದಾರೆ. ಕರ್ನಾಟಕ ಇತಿಹಾಸದಲ್ಲಿ ಇಂತಹ ಭ್ರಷ್ಟ ಮುಖ್ಯಮಂತ್ರಿ ಮತ್ತೊಬ್ಬರಿಲ್ಲ, ಈ ರಾಜ್ಯ ಉಳಿಯಬೇಕು ಅಂದ್ರೇ ಕೂಡಲೇ ರಾಜೀನಾಮೆ ಕೊಡಬೇಕು. ಇನ್ನೂ ಹದಿನೈದು ದಿನಗಳಲ್ಲಿ ಎಂಇಎಸ್ ರಾಜ್ಯ ಬಿಡಬೇಕು. ಇಲ್ಲವಾದ್ರೆ ಬೆಳಗಾವಿಗೆ ನಾವು ನುಗ್ಗುತ್ತೇವೆ ಎಂದು ಎಚ್ಚರಿಸಿದರು.

ಇನ್ನು ಶಿವಸೇನೆ ಪುಂಡರು ರಾಜ್ಯಕ್ಕೆ ನುಗ್ಗಿ ಗುಂಡಾವರ್ತನೆ ಮಾಡಿದ್ದಾರೆ. ಉದ್ಧವ್ ಠಾಕ್ರೆ ಬಂದ್ರೂ ಜೈಲಿಗೆ ಹಾಕಬೇಕು. ಯಾವುದೇ ಶಿವಸೇನೆಯವರು ಗಡಿ ದಾಟಿದ್ರೂ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಇಲ್ಲಿನ ರಾಜಕಾರಣಿಗಳು ನರ ಸತ್ತ ರಾಜಕಾರಣಿಗಳು, ಎಂಇಎಸ್ ಏಜೆಂಟ್​ರಾಗಿದ್ದಾರೆ, ಮರಾಠಿ ಏಜೆಂಟರಾಗಿದ್ದಾರೆ. ಎಂಇಎಸ್ ನಿಷೇಧ ಮಾಡಲಿ, ಇಲ್ಲಾ ನಮ್ಮನ್ನ ವರ್ಷಗಟ್ಟಲೇ ಜೈಲಿಗೆ ಹಾಕಲಿ. ಅವಿವೇಕಿಗಳು, ಅವರು ಸೋತ್ರು ಆಮೇಲೆ ಎಂಎಲ್​ಸಿ ನಂತರ ಡಿಸಿಎಂ ಮಾಡಿದರು. ಬೆಳಗಾವಿಗೆ ದ್ರೋಹ ಮಾಡುತ್ತಿದ್ದಾರೆ ಮಾನ ಮರ್ಯಾದೆ ಇದ್ರೇ ರಾಜೀನಾಮೆ ಕೊಡಬೇಕು. ಪಾಲಿಕೆ ಮುಂದಿರುವ ಕನ್ನಡ ಧ್ವಜ ತೆಗೆದ್ರೇ ರಕ್ತಪಾತವಾಗುತ್ತೆ. ಹದಿನೈದು ದಿನ ಗಡುವು ಕೊಟ್ಟಿದ್ದೇವೆ ಅದರಲ್ಲಿ ತೀರ್ಮಾನ ಆಗದಿದ್ದರೆ ಕರ್ನಾಟಕ ಬಂದ್ ಕರೆಗೆ ಯೋಚನೆ ಮಾಡುತ್ತೇವೆ ಎಂದು ಪರೋಕ್ಷವಾಗಿ ಡಿಸಿಎಂ ಲಕ್ಷ್ಮಣ್ ಸವದಿ ವಿರುದ್ದ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.

ತಾಕತ್ತು, ಧಮ್ಮಿದ್ರೇ ಮರಾಠ ಪ್ರಾಧಿಕಾರ ಬ್ಯಾನ್ ಮಾಡಿ ಗಂಡಸ್ತನ ತೋರ್ಸಿ - ಸಾ.ರಾ ಗೋವಿಂದು ಸವಾಲ್​

ಇದೇ ವೇಳೆ ಮತ್ತೊಬ್ಬ ಕನ್ನಡ ಪರ ಹೋರಾಟಗಾರ ಸಾರಾ ಗೋವಿಂದು ಅವರು ಮಾತನಾಡಿ, ಇದಕ್ಕೆ ನೇರವಾಗಿ ಸಿಎಂ ಯಡಿಯೂರಪ್ಪ ಕಾರಣ, ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿ ಅನುಕೂಲ ಮಾಡಿಕೊಟ್ರಿ. ಸಮಯ ಬಂದಾಗ ಗಡಿ ಹೋರಾಟಕ್ಕೂ ಚಿತ್ರರಂಗದವರು ಬರ್ತಾರೆ. ಸರ್ಕಾರಕ್ಕೆ ಎಂಇಎಸ್ ನಿಷೇಧ ಮಾಡುವ ತಾಕತ್ತಿದೆಯಾ(?) ನಾವು ಪಕ್ಷಾತೀತವಾಗಿ ಹೋರಾಟ ಮಾಡುವವರು. ತಾಕತ್ತು ಧಮ್ಮಿದ್ರೇ ಮರಾಠ ಪ್ರಾಧಿಕಾರ ಬ್ಯಾನ್ ಮಾಡಿ ಗಂಡಸ್ತನ ತೋರ್ಸಿ. ಮುಖ್ಯವಾಹಿನಿಗೆ ಮರಾಠರನ್ನ ಕರೆದುಕೊಂಡು ಬರ್ತೇನಿ ಅಂತಾ ಲಕ್ಷ್ಮೀ ಹೆಬ್ಬಾಳ್ಕರ್ ಹೇಳ್ತಾರೆ. ನಾಚಿಕೆ ಆಗಬೇಕು ನಿಮಗೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಿಡಿಕಾರಿದರು.

Next Story

RELATED STORIES