Top

ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳಬೇಕು

ರಾಜ್ಯಪಾಲರ ಮುಂದೆ ಯಾಕೆ ಹೋಗಬೇಕಿತ್ತು(?) ಹಿರಿಯರಿದ್ದಾರೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳಬೇಕು
X

ಬೆಂಗಳೂರು: ನಾವೆಲ್ಲಾ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಗ್ರಾಮೀಣಾಭಿವೃದ್ದಿ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದೆವು ಹಾಗಾಗಿ ಸಿಎಂ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅವರು ಗುರುವಾರ ಹೇಳಿದ್ದಾರೆ.

ಸಚಿವ ಕೆ.ಎಸ್​ ಈಶ್ವರಪ್ಪ ಅವರು ಸಿಎಂ ಬಿ.ಎಸ್​ ಯಡಿಯೂರಪ್ಪ ವಿರುದ್ಧ ಬಿಜೆಪಿ ಹೈಕಮಾಂಡ್​ಗೆ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳಬೇಕು. ರಾಜ್ಯಪಾಲರ ಮುಂದೆ ಯಾಕೆ ಹೋಗಬೇಕಿತ್ತು(?) ಹಿರಿಯರಿದ್ದಾರೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾನು ಯಾರ ಪರವೂ ಅಲ್ಲ, ವಿರುದ್ದವೂ ಅಲ್ಲ. ಎಷ್ಟು ಸರಿ ಎಂದು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದಿದ್ದಾರೆ.

ಇನ್ನು ಉಪಚುನಾವಣೆ ಸಂದರ್ಭದಲ್ಲಿ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ಕೆಸರೆರಚಾಟ ಮಾಡಿದರೆ ಏನಾಗುತ್ತೆ(?) ಏನೇ ಸಮಸ್ಯೆ ಇದ್ದರೂ ಪ್ರಧಾನಿಗಳನ್ನು ಭೇಟಿ ಆಗಲಿ. ಪಕ್ಷದ ಉಸ್ತುವಾರಿ, ಸಂಘದ ಹಿರಿಯರ ಬಳಿ ಹೇಳಲಿ. ಆದರೆ, ಇದು ಒಳ್ಳೆ ಬೆಳವಣಿಗೆ ಅಲ್ಲ. ಇರೋ ಸಮಸ್ಯೆ ಬಗೆಹರಿಸಿಕೊಳ್ಳಲಿ. ಹಿರಿಯರಿದ್ದಾರೆ. ಪಕ್ಷ ಕಟ್ಟಿದವರು ಇವರು ಎಂದು ಹೇಳಿದ್ದಾರೆ.

ಪರ್ಸಂಟೇಜ್ ರಾಜಕೀಯ ನಡೆಯುತ್ತಿದ್ಯಾ(?) ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಆ ರೀತಿ ಪರ್ಸಂಟೇಜು ಅದು ಏನೂ ನಡೆದಿಲ್ಲ. ವಿನಾಕಾರಣ ನಾವು ಯಾರ ಮೇಲೂ ಆರೋಪ ಮಾಡಲ್ಲ. ಸಿಎಂ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆವು. ಮುಂದೆ ಜಿ.ಪಂ, ತಾ.ಪಂ ಚುನಾವಣೆ ಇದೆ ಅನುದಾನ ಬಿಡುಗಡೆ ಮಾಡಿ ಎಂದು ಚುನಾವಣೆ ದೃಷ್ಟಿಯಿಂದ ಮನವಿ ಮಾಡಿದ್ದೆವು. ಹೀಗಾಗಿ ಸಿಎಂ ಅನುದಾನ ಬಿಡುಗಡೆ ಮಾಡಿದ್ದಾರೆ. ಗುತ್ತಿಗೆದಾರರು ಮತ್ತಿತರಿಗೆ ಅವಕಾಶ ಕೊಟ್ಟಿಲ್ಲ, ಸಿಎಂ ಮನವಿ ಮೇರೆಗೆ ಅನುದಾನ ಬಿಡುಗಡೆ ಮಾಡಿದ್ದಾರೆ ಹೊರತು ಈಶ್ವರಪ್ಪ ಅವರನ್ನು ಓವರ್ ಟೇಕ್ ಮಾಡಲು ಅಲ್ಲ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಮಾತನಾಡಿದ್ದಾರೆ.

Next Story

RELATED STORIES