Top

ರಾಜ್ಯದಲ್ಲಿ ಮೈನಿಂಗ್ ಪಾರ್ಕ್ ಮಾಡಲು ಉದ್ದೇಶಿದ್ದೇವೆ - ಸಚಿವ ಮುರುಗೇಶ್​ ನಿರಾಣಿ

ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯಿದೆ

ರಾಜ್ಯದಲ್ಲಿ ಮೈನಿಂಗ್ ಪಾರ್ಕ್ ಮಾಡಲು ಉದ್ದೇಶಿದ್ದೇವೆ - ಸಚಿವ ಮುರುಗೇಶ್​ ನಿರಾಣಿ
X

ಬೆಳಗಾವಿ: ಗಣಿ ಇಲಾಖೆ ಕಾನೂನು ಬದ್ಧವಾಗಿ ಕಡಿಮೆ ದರದಲ್ಲಿ ಮರಳು, ಜಲ್ಲಿ ಕಡಿ ತಲುಪಿಸಲು ಉದ್ದೇಶಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಹೇಳಿದ್ದಾರೆ.

ಬೆಳಗಾವಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಕ್ಯಾಟಗೇರಿ ಮಾಡಿ ಮರಳು ಹಂಚಿಕೆ ಮಾಡಲಾಗುವುದು. ಎತ್ತಿನ ಗಾಡಿ, ಟ್ರ್ಯಾಕ್ಟರ್​ನಲ್ಲಿ ಸಾಗಿಸಲು ಅವಕಾಶ ನೀಡಲಾಗುವುದು. ಹಳ್ಳದ ಉಸುಕು ಉಚಿತವಾಗಿ ನೀಡಲು ಚಿಂತನೆ ಮಾಡಿದ್ದೇವೆ. ಇದರಿಂದ ಆಗುವ ಹೊರೆಯನ್ನ ಬೇರೆ ಮೂಲದಿಂದ ಸಂಗ್ರಸಲು ಉದ್ದೇಶಿಸಲಾಗಿದೆ ಎಂದರು.

ಇನ್ನು ಮೈನಿಂಗ್ ಕುರಿತು ಯುನಿವರ್ಸಿಟಿ ಇಲ್ಲ. ಖನಿಜ ಸಂಪತ್ತು ಕರ್ನಾಟಕದಲ್ಲಿ ಹೇರಳವಾಗಿ ಸಿಗುವಂತೆ, ವೈಜ್ಞಾನಿಕವಾಗಿ ಖನಿಜದ ಸಂಪತ್ತು ಸಂಗ್ರಹಿಸಲು ಉದ್ದೇಶವಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಚರ್ಚೆ ಮಾಡಿ ಬಜೆಟ್​ನಲ್ಲಿ ಸೇರಿಸಲಾಗುವುದು. ರಾಜ್ಯದ ಐದು ಭಾಗದಲ್ಲಿ ಅದಾಲತ್ ಮೂಲಕ ಸ್ಥಳಿಯವಾದ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮೈನಿಂಗ್ ಪಾರ್ಕ್ ಮಾಡಲು ಉದ್ದೇಶಿದ್ದೇವೆ ಇದನ್ನ ಪಿಪಿಟಿ ಮಾದರಿಯಲ್ಲಿ ಮೈನಿಂಗ್ ಪಾರ್ಕ್ ಮಾಡಲು ಉದ್ದೇಶಿಸಿದ್ದೇವೆ. ಹಟ್ಟಿ ಚಿನ್ನದ ಗಣಿ ವಿದ್ಯುತ್ ಅನ್ನ ಸರ್ಕಾರದಿಂದ ಖರೀದಿ ಮಾಡಲಾಗುತ್ತಿದೆ. ಸರ್ಕಾರದಿಂದ ಪ್ರತಿ ಯುನಿಟ್​ಗೆ 8 ರುಪಾಯಿ ಖರೀದಿ ಮಾಡುತ್ತಿದ್ದೇವೆ ಇದರಿಂದ 70 ಕೋಟಿ ವಿದ್ಯುತ್​ಗೆ ವೆಚ್ಚ ಮಾಡುತ್ತಿದ್ದೇವೆ. ಹೀಗಾಗಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯಿದೆ ಎಂದು ಸಚಿವ ಮುರುಗೇಶ್ ನಿರಾಣಿ ಅವರು ಹೇಳಿದ್ದಾರೆ.

Next Story

RELATED STORIES