Top

ನಮಗೆ ಮೇಯರ್ ಸ್ಥಾನ ಬೇಕು ಅಂತ ಹಠ ಹಿಡಿದು ಕುಳಿತಿಲ್ಲ - ಸಚಿವ ಎಸ್​.ಟಿ ಸೋಮಶೇಖರ್

ಕೇಳೋದು ನನ್ನ ಕೆಲಸ, ಕೊಡೋದು ಬಿಡೋದು ಅವರಿಗೆ ಬಿಟ್ಟದ್ದು

ನಮಗೆ ಮೇಯರ್ ಸ್ಥಾನ ಬೇಕು ಅಂತ ಹಠ ಹಿಡಿದು ಕುಳಿತಿಲ್ಲ - ಸಚಿವ ಎಸ್​.ಟಿ ಸೋಮಶೇಖರ್
X

ಮೈಸೂರು: ಸದ್ಯ ತೀರ್ಮಾನ ಏನು ಆಗಿಲ್ಲ, ಅಂತಿಮವಾಗಿ ಮತ್ತೊಂದು ಮನವಿ ಮಾಡಿದ್ದೇವೆ. ಅವರು ಅವರ ಪಕ್ಷದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್​.ಟಿ ಸೋಮಶೇಖರ್ ಅವರು ಹೇಳಿದ್ದಾರೆ.

ಮೇಯರ್​-ಉಪಮೇಯರ್​ ಚುನಾವಣೆ ಹಿನ್ನೆಲೆ ಬುಧವಾರ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಭೇಟಿ ಮಾಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷದಿಂದಲೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಮ್ಮ ಪಕ್ಷದಿಂದ ಸೂಚನೆ ಹಿನ್ನೆಲೆ, ಮತ್ತೊಮ್ಮೆ ಭೇಟಿ ಮಾಡಿದ್ದೇನೆ ಎಂದಿದ್ದಾರೆ.

ಇನ್ನು ಎಲ್ಲ ಪಾಲಿಕೆಯ ಸದಸ್ಯರು, ಎಂಎಲ್​ಸಿ, ಎಂಎಲ್ಎಗಳನ್ನ ನಾನು ಸಂಪರ್ಕ ಮಾಡುತ್ತೇನೆ. ಒಬ್ಬ ಜಿಲ್ಲಾ ಉಸ್ತುವಾರಿ ಸಚಿವನಾಗಿ ಸಂಪರ್ಕ ಮಾಡುತ್ತಿದ್ದೇನೆ. ಮರಿತಿಬ್ಬೆಗೌಡ, ಜಿ.ಟಿ ದೇವೇಗೌಡ, ಸಂದೇಶ್ ನಾಗರಾಜ್​ರನ್ನ ಸಹಕಾರ ಕೋರಿದ್ದೇನೆ. ಕೇಳೋದು ನನ್ನ ಕೆಲಸ, ಕೊಡೋದು ಬಿಡೋದು ಅವರಿಗೆ ಬಿಟ್ಟದ್ದು ಎಂದರು.

ಸದ್ಯ ನಮಗೆ ಮೇಯರ್ ಸ್ಥಾನ ಬೇಕು ಅಂತ ಹಠ ಹಿಡಿದು ಕುಳಿತಿಲ್ಲ. ಮೊದಲ ಬಾರಿ ಆ ಒಂದು ಅವಕಾಶ ಕೊಡಿ ಎಂದು ಜೆಡಿಎಸ್​ಗೆ ಕೇಳುತ್ತಿದ್ದೇವೆ. ಮುಂದಿನ ಬಾರಿ ನಿಮ್ಮ ಪಕ್ಷದ ಮೇಯರ್ ಆಗಲಿ ಎಂದಿದ್ದೇವೆ. ಆದರೆ, ನಾವು ಸ್ವತಂತ್ರವಾಗಿ ನಾಮಪತ್ರ ಸಲ್ಲಿಕೆ ಮಾಡುತ್ತೇವೆ ಎಂದಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಸಮಯಾವಕಾಶ ಸಿಗಲಿದೆ. ಆ ಸಮಯದಲ್ಲಿ ಏನು ಬದಲಾವಣೆ ಆಗಲಿದೆ ಎಂಬುದನ್ನ ಕಾದು ನೋಡಬೇಕು ಎಂದು ಮೈಸೂರಿನಲ್ಲಿ ಎಸ್​.ಟಿ ಸೋಮಶೇಖರ್ ಅವರು ಮಾತನಾಡಿದ್ದಾರೆ.

Next Story

RELATED STORIES