Top

ನಾವು ನಿಷ್ಠೆ ಇಲ್ಲದವರನ್ನು ಇನ್ಮುಂದೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ - ಮಾಜಿ ಸಿಎಂ ಹೆಚ್ಡಿಕೆ

ತಾತ್ಕಾಲಿಕವಾಗಿ ತೆಗೆದುಕೊಂಡ ನಿರ್ಧಾರದಿಂದ ಈ ರೀತಿ ಸಮಸ್ಯೆ ಆಗಿದೆ

ನಾವು ನಿಷ್ಠೆ ಇಲ್ಲದವರನ್ನು ಇನ್ಮುಂದೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ - ಮಾಜಿ ಸಿಎಂ ಹೆಚ್ಡಿಕೆ
X

ಮೈಸೂರು: ಮಧು ಬಂಗಾರಪ್ಪ ಸಿದ್ದರಾಮಯ್ಯನವರ ಭೇಟಿ ಮಾಡೋ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ಇದರಲ್ಲಿ ವಿಶೇಷ ಏನಿಲ್ಲ, ಹಲವಾರು ರಾಜಕಾರಣಿಗಳು ಭೇಟಿ ಮಾಡ್ತಾರೆ. ಅದೆಲ್ಲ ಅಳಸಲು ಕಥೆ, ಹಳೆ ಕಥೆ ಆಗಿದೆ ಈಗ ಎಂದು ಹೇಳಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಬೆಳವಣಿಗೆ ಇದು. ಈ ಡೆವಲಪ್ಮೆಂಟ್ ಬಗ್ಗೆ ಹೆಚ್ಚು ಮಹತ್ವ ಕೊಡುವ ಅಗತ್ಯ ಇಲ್ಲ ಎಂದಿದ್ದಾರೆ.

ಜೆಡಿಎಸ್ ಹುಟ್ಟಿದಾಗಿನಿಂದ ಅದರಲ್ಲು ದೇವೇಗೌಡರಿಗೆ ಬೆನ್ನಿಗೆ ಚಾಕು ಹಾಕೋದು ಆಗೋಗಿದೆ. ಯಾರನ್ನ ನಂಬಿರ್ತಾರೆ ಅವರೇ ಕುತ್ತಿಗೆ ಕುಯ್ಯತಾರೆ. ಯಾರು ಹೊರಗೆ ಹೋಗ್ತಾರೆ ಅವರಿಗೆ ಬಾಗಿಲು ತೆರೆದಿದೆ. ಅವರು ಎಲ್ಲಿಗೆ ಹೋಗಬೇಕು ಹೋಗಬಹುದು. ಪಕ್ಷದಿಂದ ಎಲ್ಲ ಪಡೆದು ಹೋಗುವಾಗ ಏನಾದರು ಹೇಳಿ ಹೋಗ್ತಾರೆ. ಹೋದವರು ಹೋಗಿ ಹೊಸಬರು ಬರ್ತಾನೆ ಇರ್ತಾರೆ. ಈಗ ಎಷ್ಟು ಜನ ಹೋದರು ನೋಡಿ, ಈ ಪಕ್ಷ ಮುಳುಗಲ್ಲ, ಜೀವಂತವಾಗಿದೆ. ಅದಕ್ಕೆ ನಾವು ನಿಷ್ಠೆ ಇಲ್ಲದವರಿಗೆ ಇನ್ಮುಂದೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ. ಅವರನ್ನ ನಾವು ಪಕ್ಷದಿಂದ ದೂರ ಇಡ್ತಿವಿ ಎಂದರು.

ತಾತ್ಕಾಲಿಕವಾಗಿ ತೆಗೆದುಕೊಂಡ ನಿರ್ಧಾರದಿಂದ ಈ ರೀತಿ ಸಮಸ್ಯೆ ಆಗಿದೆ. ನಾವು ಇಂತವರ ವಿರುದ್ಧ ಕ್ರಮ ಕೈಗೊಂಡರೇ ಅವರಿಗೆ ಅದು ಸುಲಭವಾಗುತ್ತೆ. ಮೊದಲು ಅದು ಜನತೆಗೆ ಅರ್ಥ ಆಗಬೇಕು. ಚಾಕು ಹಾಕಿ ಹೋದವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ಹೆಚ್​.ಡಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ.

Next Story

RELATED STORIES