Top

ಸಂಪುಟ ವಿಸ್ತರಣೆ: ಎರಡ್ಮೂರು ದಿನಗಳಲ್ಲಿ ದೆಹಲಿಯಿಂದ ಪಟ್ಟಿ ಬರಬಹುದು - ಬಿ.ಎಸ್​.​ ಯಡಿಯೂರಪ್ಪ

ಕನ್ನಡತಿ ಸುಧಾ ಉಮಾಶಂಕರ್ ಅವರು ಆ್ಯಪ್ ಆಧಾರಿತ ಹೊಯ್ಸಳ ಕ್ಯಾಬ್ ಸೇವೆ ಆರಂಭಿಸಿರುವುದು ಸ್ವಾಗತಾರ್ಹ.

ಸಂಪುಟ ವಿಸ್ತರಣೆ: ಎರಡ್ಮೂರು ದಿನಗಳಲ್ಲಿ ದೆಹಲಿಯಿಂದ ಪಟ್ಟಿ ಬರಬಹುದು - ಬಿ.ಎಸ್​.​ ಯಡಿಯೂರಪ್ಪ
X

ಬೆಂಗಳೂರು: ಸಚಿವ ಸಂಪುಟ‌‌ ವಿಸ್ತರಣೆ ಸಂಬಂಧ ಪಕ್ಷದ ವರಿಷ್ಠರ ಜತೆ ಚರ್ಚಿಸಿ ಬಂದಿದ್ದೇನೆ. 2-3 ದಿನಗಳಲ್ಲಿ ದೆಹಲಿಯಿಂದ ಪಟ್ಟಿ ಬರಬಹುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಗುರುವಾರ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ 'ಹೊಯ್ಸಳ ಕ್ಯಾಬ್' ಸೇವೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿಯಿಂದ ಪಟ್ಟಿ ಬರಬೇಕು. ಆ ಬಳಿಕವೇ ಮುಂದಿನ ಪ್ರಕ್ರಿಯೆ ಆರಂಭಿಸಬಹುದು ಎಂದರು.

ಕನ್ನಡತಿ ಸುಧಾ ಉಮಾಶಂಕರ್ ಅವರು ಆ್ಯಪ್ ಆಧಾರಿತ ಹೊಯ್ಸಳ ಕ್ಯಾಬ್ ಸೇವೆ ಆರಂಭಿಸಿರುವುದು ಸ್ವಾಗತಾರ್ಹ. ಈವರೆಗೂ ನಗರಗಳಿಗೆ ಸೀಮಿತವಾಗಿದ್ದ ಆ್ಯಪ್‌ ಆಧಾರಿತ ಕ್ಯಾಬ್ ಸೇವೆ ಇನ್ಮುಂದೆ ರಾಜ್ಯದ ಎಲ್ಲ ಭಾಗಕ್ಕೂ ದೊರೆಯಲಿದೆ ಎಂದು ಬಿಎಸ್​ವೈ ಹೇಳಿದರು.

5,000 ಕ್ಯಾಬ್​ಗಳೊಂದಿಗೆ ಈ ಸೇವೆ ಆರಂಭವಾಗುತ್ತಿದ್ದು, ಇದರಿಂದ ನೇರವಾಗಿ 5,000 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಸಿಎಂ ಬಿಎಸ್​ವೈ ಅವರು ನುಡಿದರು.

Next Story

RELATED STORIES