Top

ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡುವಂತೆ ಸಿಎಂಗೆ ವಿನಯ್​ ಗುರೂಜಿ ಮನವಿ

ನಾನು ಕೊಟ್ಟ ಸಲಹೆಗಳನ್ನು ಸಿಎಂ ಅವರು ಇದುವರೆಗೆ ನಿರಾಕರಿಸಿಲ್ಲ, ಈ ಮನವಿಯನ್ನೂ ಈಡೇರಿಸುವ ಭರವಸೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ

ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡುವಂತೆ ಸಿಎಂಗೆ ವಿನಯ್​ ಗುರೂಜಿ ಮನವಿ
X

ಬೆಂಗಳೂರು: ಗೋಹತ್ಯೆ ನಿಷೇಧ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರುವ ವಿಷಯ ಕುರಿತು ಚರ್ಚಿಸಲು ಬಂದಿದ್ದೆವು. ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ ಎಂದು ಗೌರಿಗದ್ದೆಯ ಅವಧೂತ ವಿನಯ ಗುರೂಜಿ ಅವರು ಹೇಳಿದ್ದಾರೆ.

ಬುಧವಾರ ಸಿಎಂ ಬಿಎಸ್​ವೈ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಅನಿವಾರ್ಯವಿದೆ. ಅಧಿಕಾರಿಗಳ ಜೊತೆ ಚರ್ಚೆ ಮಾಡುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದರು.

ಇನ್ನು ನಾನು ಕೊಟ್ಟ ಸಲಹೆಗಳನ್ನು ಸಿಎಂ ಅವರು ಇದುವರೆಗೆ ನಿರಾಕರಿಸಿಲ್ಲ, ಈ ಮನವಿಯನ್ನೂ ಈಡೇರಿಸುವ ಭರವಸೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದ್ಯ ಕೆಲವು ಕಡೆ ಪ್ರಾಣಿಗಳ ಹತ್ಯೆ ನಡೆಯುತ್ತಿದೆ ಅದಕ್ಕಾಗಿ ಈಗ ಗೋಹತ್ಯೆ ನಿಷೇಧ ಅನಿವಾರ್ಯ ಆಗಿದೆ. ನನ್ನ ಸಲಹೆಗಳನ್ನು ಸಿಎಂ ನಿರಾಕರಿಸಿಲ್ಲ, ಈ ಸಲಹೆಯನ್ನು ಸಿಎಂ ಗಂಭೀರವಾಗಿ ಪರಿಗಣಿಸುತ್ತಾರೆ. ಅಲ್ಲದೇ, ಈ ಬಗ್ಗೆ ಶೀಘ್ರದಲ್ಲೇ ಸಿಎಂ ಸಭೆ ಕರೆಯುವುದಾಗಿ ಭರವಸೆ ಕೂಡ ನೀಡಿದ್ದಾರೆ ಎಂದು ವಿನಯ್​ ಗುರೂಜಿ ಅವರು ನುಡಿದರು.

ಇದೇ ವೇಳೆ ವಿನಯ್ ಗುರೂಜಿ ತಿಂದುಳಿದ ಅನ್ನವನ್ನು ಪ್ರಸಾದ ರೂಪದಲ್ಲಿ ಹಂಚ್ತಾರೆ ಎಂಬ ಎಮ್​ಎಲ್​ಸಿ ರಘು ಆಚಾರ್ ಆರೋಪ ಮಾಡಿರುವ ವಿಚಾರದ ಕುರಿತು ಮಾತನಾಡಿದ ಅವರು, ನೋ ಕಾಮೆಂಟ್, ಅವರವರ ಭಾವ ಅವರವರದ್ದು. ಅವರು ಹೇಳಿದ ಸನ್ನಿವೇಶ ಅಲ್ಲಿರಲಿಲ್ಲ. ನಾನೇ ನಿಶ್ಚಯ ಮಾಡಿದ ಮದುವೆ ಇದು. ನಾನು ಊಟ ಮಾಡಿದ ಮೇಲೆ ತಟ್ಟೆ ಎಲ್ಲಿಟ್ಟಿದೀನಿ, ಲೋಟ ಎಲ್ಲಿಟ್ಟಿದೀನಿ ಅಂತ ನೋಡೋಕ್ಕೆ ಆಗಲ್ಲ. ಅದು ನನ್ನ ಗಮನಕ್ಕೆ ಬರದೇ ನಡೆದಿರುವ ಪ್ರಸಂಗ. ಅದು ನನ್ನ ಗಮನಕ್ಕೆ ಬಂದಿದ್ರೆ ಗಾಂಧಿವಾದದ ಥರ ನಾನು ಖಂಡಿಸುತ್ತಿದ್ದೆ. ಲಿಂಗಾಯತರಲ್ಲಿ ಒಂದು ಸಂಪ್ರದಾಯವಿದೆ. ನಾನು ಊಟ ಮಾಡಿದ ಮೇಲೆ ಪ್ರಸಾದವನ್ನು ತಗೊಂಡ್ ಹೋಗ್ತಾರೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.


Next Story

RELATED STORIES