Top

ಏಪ್ರಿಲ್ 1 ರಿಂದ 45 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ

ಚುನಾವಣೆಗೆ ಸ್ಪಷ್ಟವಾದ ಮಾರ್ಗಸೂಚಿ ಮಾಡಿಕೊಡಬೇಕು ಎಂದು ಕೇಳಿದ್ದೇನೆ.

ಏಪ್ರಿಲ್ 1 ರಿಂದ 45 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ
X

ಬೆಂಗಳೂರು: ನಿನ್ನೆ ರಾತ್ರಿಯೇ 4 ಲಕ್ಷ ಡೋಸ್ ಲಸಿಕೆ ಬಂದಿದೆ ಇದರ ಜೊತೆಗೆ ಇನ್ನು 12 ಲಕ್ಷ ಡೋಸ್ ಲಸಿಕೆ ಬರುತ್ತೆ, ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ ಎಂದು ಸಚಿವ ಡಾ.ಕೆ ಸುಧಾಕರ್ ಅವರು ಗುರುವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಏಪ್ರಿಲ್ 1 ರಿಂದ 45 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ. ದೇಶದಲ್ಲಿ ಜಿನೋವಿಕ್ ಸೀಕ್ವೆನ್ಸಿಂಗ್ ಮಾಡಿದ್ದಾರೆ ಅದರಲ್ಲಿ ಡಬಲ್ ಮ್ಯೂಟೆಟ್ ವೈರಾಣು ಬಂದಿದೆ. 700ಕ್ಕೂ ಹೆಚ್ಚು ಪ್ರಕರಣ ಬಂದಿದೆ. ಸ್ಪೈಕ್​ನಲ್ಲಿ 482 ಸೇರಿದಂತೆ ಹಲರವಲ್ಲಿ ಅಮೆನೋ ಆಸಿಡ್ ಬಂದಿದೆ ಎಂದು ಹೇಳಲಾಗುತ್ತಿದೆ ಎಂದು ಹೇಳಿದರು.

ಇನ್ನು ನಿನ್ನೆ ಮಾರ್ಗಸೂಚಿ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಸೋಂಕಿತರ ಸಂಖ್ಯೆ ಹೆಚ್ಚಬಾರದು. ಒಂದು ಪಾಸಿಟಿವ್ ಕೇಸ್ ಬಂದ್ರೆ 20 ಜನ ಕಾಂಟಾಕ್ಟ್​ಗಳನ್ನು ಪತ್ತೆ ಹಚ್ಚಿ ಟೆಸ್ಟ್ ಮಾಡಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಕೇಸ್ ಹೆಚ್ಚಾಗಿದೆ. ಈ ಹಿನ್ನೆಲೆ ಬಿಬಿಎಂಪಿಗೆ ಭೇಟಿ ಕೊಟ್ಟು ಸಿದ್ಧತೆಗಳ ಬಗ್ಗೆ ಪರಮರ್ಶೆ ಮಾಡಲು ಹೋಗುತ್ತಿದ್ದೇನೆ. ಅನೇಕ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದಿದ್ದಾರೆ.

ಉಪಚುನಾವಣೆ ಬಗ್ಗೆ ಸಂಜೀವ್ ಕುಮಾರ್ ಅವರ ಸಮಯ ಕೇಳಿದ್ದೇನೆ. ಚುನಾವಣೆಗೆ ಸ್ಪಷ್ಟವಾದ ಮಾರ್ಗಸೂಚಿ ಮಾಡಿಕೊಡಬೇಕು ಎಂದು ಕೇಳಿದ್ದೇನೆ. ಚುನಾವಣೆ ಅಂತ ಕೊರೊನಾ ಬರದೆ ಇರುತ್ತಾ(?) ಜನರು ಗುಂಪು ಸೇರುವುದು ಸರಿಯಲ್ಲ. ಹೀಗಾಗಿ ರಾಜ್ಯ ಎಲೆಕ್ಷನ್ ಕಮೀಷನರ್ ಅವರ ಸಮಯವನ್ನು ಕೇಳಿದ್ದೇನೆ. ಸಾವನ್ನು ಕಡಿಮೆ ಮಾಡೋದು ಮುಖ್ಯ. ಅದನ್ನು ಕಡಿಮೆ ಮಾಡಲು ಜನಸಾಮಾನ್ಯರು ತಕ್ಷಣ ಸಿಂಪ್ಟಮ್ಸ್ ಬಂದ್ರೆ ತೋರಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಮಾತನಾಡಿದ್ದಾರೆ.

Next Story

RELATED STORIES