Top

ಕಾಂಗ್ರೆಸ್ ಸದಸ್ಯರ ಧರಣಿಗೆ ಎರಡು ದಿನದ ಕಲಾಪ ಬಲಿ

  • ರಾಜ್ಯ ಸರ್ಕಾರದ ವಿರುದ್ಧ ರಮೇಶ್ ಜಾರಕಿಹೊಳಿ ಸಿಡಿ ಬ್ರಹ್ಮಾಸ್ತ್ರ ಪ್ರಯೋಗ..?
  • ಆರು ಸಚಿವರ ಕೋರ್ಟ್ ಮೊರೆಯನ್ನೂ ಪಶುಪತಾಸ್ತ್ರ ಮಾಡಿಕೊಂಡ ಕಾಂಗ್ರೆಸ್..?
  • ವಿಧಾನಸಭೆಯಲ್ಲಿ ಮುಂದುವರಿದ ಕಾಂಗ್ರೆಸ್ ಧರಣಿ..!
  • ಮೂರು ಬೇಡಿಕೆಗಳನ್ನ ಮುಂದಿಟ್ಟು ಸರ್ಕಾರದ ವಿರುದ್ಧ ಗದಾಪ್ರಹಾರ..!
  • ನಾಳೆ ಬೇಡಿಕೆಗೆ ಬಗ್ಗದಿದ್ದರೆ ಆಹೋರಾತ್ರಿಧರಣಿಯ ಎಚ್ಚರಿಕೆ..!

ಕಾಂಗ್ರೆಸ್ ಸದಸ್ಯರ ಧರಣಿಗೆ ಎರಡು ದಿನದ ಕಲಾಪ ಬಲಿ
X

ವಿಧಾನಸೌಧ: ರಾಜ್ಯ ಸರ್ಕಾರದ ವಿರುದ್ಧದ ಹೋರಾಟಕ್ಕೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನೇ ಕಾಂಗ್ರೆಸ್ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದೆ. ಆರು ಸಚಿವರ ಕೋರ್ಟ್ ಮೊರೆ ವಿಚಾರವನ್ನೂ ಬ್ರಹ್ಮಾಸ್ತ್ರದಂತೆ ಬಳಸಿಕೊಳುತ್ತಿದೆ. ಸರ್ಕಾರದ ಇಮೇಜ್​ಅನ್ನ ಕಾಂಗ್ರೆಸ್ ಸದ್ದಿಲ್ಲದೆ ಡ್ಯಾಮೇಜ್ ಮಾಡುತ್ತಿದೆ. ಉಪಚುನಾವಣೆಯಲ್ಲಿ ಇದನ್ನೇ ಎನ್ ಕ್ಯಾಶ್ ಮಾಡಿಕೊಳ್ಳೋಕೆ ನೋಡುತ್ತಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನ ಕಾಂಗ್ರೆಸ್ ಬ್ರಹ್ಮಾಸ್ತ್ರವನ್ನಾಗಿ ಮಾಡಿಕೊಂಡಿದೆ. ಸರ್ಕಾರದ ವಿರುದ್ಧ ಇದೇ ಬಾಣವನ್ನ ಪ್ರಯೋಗಿಸಿ ಇಮೇಜನ್ನ ಡ್ಯಾಮೇಜ್ ಮಾಡುತ್ತಿದೆ. ಉಪಚುನಾವಣೆಗಳನ್ನ ದೃಷ್ಟಿಯಲ್ಲಿಟ್ಟುಕೊಂಡೇ ಕಾಂಗ್ರೆಸ್ ಈ ಚಿತಾವಣೆ ಮಾಡುತ್ತಿದೆ. ಇದರ ಜೊತೆ ತೇಜೋವಧೆ ಮಾಡದಂತೆ ಆರು ಸಚಿವರು ಕೋರ್ಟ್ ಗೆ ಹೋಗಿರುವ ವಿಚಾರವನ್ನೂ ಕೆಣಕಿ ಸರ್ಕಾರದ ಮರ್ಯಾಣೆ ಮಣ್ಣುಪಾಲು ಮಾಡುತ್ತಿದೆ. ಸರ್ಕಾರಕ್ಕೆ ಈ ವಿಚಾರ ಅಗಿಯುವಂತಿಲ್ಲ. ನುಂಗುವಂತಿಲ್ಲ ಎನ್ನುವಂತಾಗಿದೆ. ಆದರೆ, ಸರ್ಕಾರವನ್ನ ಇಳಿಸೋಕೆ ಕಾಂಗ್ರೆಸ್ ಗೆ ಇದು ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಂತಾಗಿದೆ.

ನಿನ್ನೆಯಿಂದ ಇದೇ ಪ್ರಕರಣವನ್ನ ಮುಂದಿಟ್ಟುಕೊಂಡು ಕಾಂಗ್ರೆಸ್ ಧರಣಿ ನಡೆಸ್ತಿದೆ. ಯುವತಿಯ ಹೇಳಿಕೆಯನ್ನ ದೂರನ್ನಾಗಿ ಪರಿಗಣಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಬೇಕು. ಕೋರ್ಟ್ ಮೊರೆ ಹೋಗಿರುವ ಆರು ಸಚಿವರನ್ನ ತಕ್ಷಣವೇ ಸಂಪುಟದಿಂದ ಕೈಬಿಡಬೇಕು. ಜೊತೆಗೆ ಎಸ್ ಐಟಿ ತನಿಖೆಯಿಂದ ಸತ್ಯಾಂಶ ಹೊರಬರುವುದಿಲ್ಲ. ಹೀಗಾಗಿ ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ಸಿಡಿ ಪ್ರಕರಣದ ತನಿಖೆಯನ್ನ ನಡೆಸಬೇಕೆಂದು ಪಟ್ಟು ಹಿಡಿದಿದೆ.ಇಂದೂ ಕೂಡ ಕಲಾಪ ಪ್ರಾರಂಭದಲ್ಲೇ ಧರಣಿ ನಡೆಸುವ ಮೂಲಕ ಮತ್ತಷ್ಟು ಗಟ್ಟಿಗೊಳಿಸಿದೆ. ಸ್ಪೀಕರ್ ನಡೆಸಿದ ಸಂಧಾನಕ್ಕೂಬಗ್ಗದೆ ಸದನದ ಬಾವಿಗಿಳಿದು ಹೋರಾಟ ಮುಂದುವರಿಸಿದೆ. ಅಲ್ಲದೆ ಬೇಡಿಕೆ ಈಡೇರುವವರೆಗೆ ಹೋರಾಟ ಕೈಬಿಡುವುದಿಲ್ಲವೆಂಬ ಎಚ್ಚರಿಕೆಯನ್ನೂ ರವಾನಿಸಿದೆ.

ಇನ್ನು ಕಾಂಗ್ರೆಸ್ ಸದಸ್ಯರ ಧರಣಿಗೆ ಮೂರು ಬಾರಿ ಕಲಾಪವನ್ನ ಮುಂದೂಡಬೇಕಾಯ್ತು. ಧರಣಿ ಕೈಬಿಡುವಂತೆ ಪದೇ ಪದೇ ಸ್ಪೀಕರ್ ಮನವಿ ಮಾಡಿದ್ರೂ ಕೈ ಶಾಸಕರು ಬಿಡಲಿಲ್ಲ. ಹೀಗಾಗಿ ಮಧ್ಯಾನದೊಳಗೆ ಎರಡು ಭಾರಿ ಸ್ಪೀಕರ್ ಕಲಾಪ ಮುಂದೂಡಿದರು. ಮಧ್ಯಾಹ್ನ ಭೋಜನದ ನಂತರ ಕಲಾಪ ಪ್ರಾರಂಭವಾಗುತ್ತಿದ್ದಂತೆ ಹೋಹೋ ಎಂದು ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಮುಂದುವರಿಸಿದರು. ಈ ವೇಳ ಕರ್ನಾಟಕ ಸೊಸೈಟಿ ತಿದ್ದುಪಡಿ ವಿಧೇಯಕ ಹಾಗೂ ಜಲಸಾರಿಗೆ ಮಂಡಳಿ ವಿಧೇಯಕವನ್ನ ಅಂಗೀಕರಿಸಲಾಯ್ತು. ಆದ್ರೂ ಶಾಸಕರು ಧರಣಿ ಮುಂದುವರಿಸಿದರು. ಹೀಗಾಗಿ ನಾಳೆಗೆ ಸ್ಪೀಕರ್ ಸದನವನ್ನ ಮುಂದೂಡಬೇಕಾಯ್ತು.

ಇನ್ನು ನಾಳೆಯೂ ಧರಣಿ ಮುಂದುವರಿಸಲು ಕಾಂಗ್ರೆಸ್ ನಿರ್ಧರಿಸಿದೆ. ಸಂತ್ರಸ್ಥೆ ಯುವತಿಗೆ ನ್ಯಾಯ ಸಿಗಬೇಕು. ಯುವತಿಯನ್ನ ಪತ್ತೆ ಹಚ್ಷಬೇಕು. ನಿರ್ಭಯಾ ಕೇಸ್ ಮಾದರಿಯಲ್ಲಿ ಅತ್ಯಾಚಾರದ ಕೇಸ್ ದಾಖಲಿಸಬೇಕು. ಆರು ಸಚಿವರ ರಾಜೀನಾಮೆ ಪಡೆಯಬೇಕು ಹಾಗೆ ಹೈಕೋರ್ಟ್ ನ್ಯಾಯಮೂರ್ತಿ ಕಣ್ಣಡಿಯಲ್ಲಿ ತನಿಖೆ ನಡೆಸಬೇಕೆಂಬ ಬೇಡಿಕೆಗಳನ್ನ ಮುಂದಿಟ್ಟುಕೊಂಡು ಆಹೋರಾತ್ರಿ ಧರಣಿಗೆ ಕಾಂಗ್ರೆಸ್ ಮುಂದಾಗಿದೆ.

ರಮೇಶ್ ಜಾರಕಿಹೊಳಿ ಸಿಡಿ ಹಾಗೂ ಆರು ಸಚಿವರ ಕೋರ್ಟ್ ಮೊರೆ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕಾಂಗ್ರೆಸ್ ಕೂಡ ಸದನದೊಳಗೆ ಜೋರಾಗಿಯೇ ಸದ್ದುಮಾಡ್ತಿದೆ..ಉಪಚುನಾವಣೆ ಪ್ರಚಾರದಲ್ಲೂ ಇದನ್ನೇ ಮುಂದಿಟ್ಟುಕೊಂಡು ಹೋರಾಟ ಮಾಡಲಿದೆ. ಈ ಮೂಲಕ ಸರ್ಕಾರದ ಮರ್ಯಾದೆಯನ್ನ ಕಳೆಯೋಕೆ ಇನ್ನಿಲ್ಲದಂತೆ ಕಸರತ್ತು ನಡೆಸಿದೆ.

Next Story

RELATED STORIES