Top

ಇವರಿಬ್ಬರು ಸೇರಿ ಕಾಂಗ್ರೇಸ್ ಪಕ್ಷವನ್ನು ಮುಗಿಸುತ್ತಾರೆ ನೋಡಿಕೊಳ್ಳಲಿ - ಕೆ.ಎಸ್​ ಈಶ್ವರಪ್ಪ

ಮೊದಲು ನಿಮ್ಮ ಪಕ್ಷ ಉಳಿಸಿಕೊಳ್ಲಿ, ಆಮೇಲೆ ಬಿಜೆಪಿ ಬಗ್ಗೆ ಕುಮಾರಸ್ವಾಮಿ ಮಾತನಾಡಲಿ

ಇವರಿಬ್ಬರು ಸೇರಿ ಕಾಂಗ್ರೇಸ್ ಪಕ್ಷವನ್ನು ಮುಗಿಸುತ್ತಾರೆ ನೋಡಿಕೊಳ್ಳಲಿ - ಕೆ.ಎಸ್​ ಈಶ್ವರಪ್ಪ
X

ಹಾಸನ: ಬಸನಗೌಡ ಪಾಟೀಲ್ ಯತ್ನಾಳ್​ಗೆ ಅವರು ಈಗಾಗಲೇ ಪಾರ್ಟಿಯಿಂದ ನೋಟಿಸ್ ಕೊಟ್ಟಿದ್ದಾರೆ ಕೇಂದ್ರದವರು ಮುಂದೇ ಏನು ಮಾಡುತ್ತಾರೆ ನೋಡೊಣ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ ಅವರು ಶನಿವಾರ ಹೇಳಿದರು.

ಹಾಸನದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ರೇಣುಕಾಚಾರ್ಯ ಹಾಗೂ ಯತ್ನಾಳ್ ಆಗಾಗ ಸರ್ಕಾರದ ವಿರುದ್ದ ಹೇಳಿಕೆ ನೀಡುತ್ತಿರುವುದು ತಪ್ಪು, ನಾಲ್ಕು ಗೋಡೆಗಳ ನಡುವೆ ಕುಳಿತು ಮಾತನಾಡುವುದು ಒಳ್ಲೆಯದು, ಈ ಬಾರಿ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ನೆಡೆಯಲಿದೆ ಯಾವುದೇ ಅಡ್ಡಿ ಆತಂಕ ಇರುವುದಿಲ್ಲ ಎಂದರು.

ಮೈಸೂರು ಮೇಯರ್-ಉಪಮೇಯರ್​ ಚುನಾವಣೆ ಬಗ್ಗೆ ಮಾತನಾಡಿದ ಅವರು ಈಗಾಗಲೇ ಕಾಂಗ್ರೇಸ್ ಪಕ್ಷ ಬೀದಿಗೆ ಬಂದಿದೆ ಈ ಹಿಂದೆ ಸಿದ್ದರಾಮಯ್ಯ ಪಕ್ಷವನ್ನು ಮುಗಿಸಿದರು, ಆದರೆ, ಇವರ ಜೊತೆಗೆ ಡಿಕೆಶಿ ಸೇರಿಕೊಂಡಿದ್ದಾರೆ. ಇವರಿಬ್ಬರು ಸೇರಿ ಕಾಂಗ್ರೇಸ್ ಪಕ್ಷವನ್ನು ಮುಗಿಸುತ್ತಾರೆ ನೋಡಿಕೊಳ್ಲಿ ಎಂದಿದ್ದಾರೆ.

ಜನರು ಎಲ್ಲವನ್ನು ನೋಡಿಕೊಳ್ಲುತ್ತಿದ್ದಾರೆ ಸಿದ್ದರಾಮಯ್ಯ ರೆಸಾರ್ಟ್​ನಲ್ಲಿ ಕುಳಿತು ರಾಜಕೀಯ ಮಾಡಲು ಹೊರಟಿದ್ದಾರೆ. ಇಲ್ಲೆ ಗೊತ್ತಾಗುತ್ತೆ ಅವರು ಹೇಗೆ ಕಾಂಗ್ರೆಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ, ಕಾಂಗ್ರೇಸ್ ಪಕ್ಷ ನಾಯಕತ್ವ ವಿಚಾರದಲ್ಲಿ ಈಗಾಗಲೇ ಬೆತ್ತಲಾಗಿ ಬೀದಿಗೆ ಬಿದ್ದಿದೆ ಎಂದು ಹೇಳಿದರು.

ಮಾಜಿ ಕುಮಾರಸ್ವಾಮಿ ಬಿಜೆಪಿ ಬರುವುದಕ್ಕೆ ನಾನು ಕಾರಣ ಎಂಬ ಹೇಳಿಕೆ ಹಿನ್ನೆಲೆ ಮೊದಲು ನಿಮ್ಮ ಪಕ್ಷ ಉಳಿಸಿಕೊಳ್ಲಿ, ಆಮೇಲೆ ಬಿಜೆಪಿ ಬಗ್ಗೆ ಕುಮಾರಸ್ವಾಮಿ ಮಾತನಾಡಲಿ ಎಂದು ಹಾಸನದಲ್ಲಿ ಕೆ.ಎಸ್​ ಈಶ್ವರಪ್ಪ ಅವರು ಮಾತನಾಡಿದ್ದಾರೆ.

Next Story

RELATED STORIES