Top

ಇವತ್ತು ಆ ಹುಲಿಯನ್ನು ಕುಮಾರಸ್ವಾಮಿ ಹಿಡಿದು ಬೋನಿಗೆ ಹಾಕಿದ್ದಾರೆ - ಸಂಸದ ಪ್ರತಾಪ್​ ಸಿಂಹ

ಸಿದ್ದರಾಮಯ್ಯರನ್ನ ನಾವು ಹುಲಿ ಎಂದುಕೊಂಡಿದ್ದೆವು

ಇವತ್ತು ಆ ಹುಲಿಯನ್ನು ಕುಮಾರಸ್ವಾಮಿ ಹಿಡಿದು ಬೋನಿಗೆ ಹಾಕಿದ್ದಾರೆ - ಸಂಸದ ಪ್ರತಾಪ್​ ಸಿಂಹ
X

ಮೈಸೂರು: ಸಿದ್ದರಾಮಯ್ಯರನ್ನ ನಾವು ಹುಲಿ ಎಂದುಕೊಂಡಿದ್ದೆವು. ಇವತ್ತು ಆ ಹುಲಿಯನ್ನು ಕುಮಾರಸ್ವಾಮಿ ಹಿಡಿದು ಬೋನಿಗೆ ಹಾಕಿದ್ದಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಹೇಳಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್​​ಗೆ ಮೇಯರ್, ಕಾಂಗ್ರೆಸ್​ಗೆ ಉಪಮೇಯರ್​ ಒಲಿದು ಬಂದ ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು,​ ಈಗ ಸಿದ್ದರಾಮಯ್ಯ ಬೋನಿನಲ್ಲಿರುವ ಹುಲಿ. ಇದು ಕಾಂಗ್ರೆಸ್​ನ ಹೀನಾಯ ಸ್ಥಿತಿಯ ಪ್ರದರ್ಶನ ಎಂದು ಲೇವಡಿ ಮಾಡಿದ್ದಾರೆ.

ಇನ್ನು ತಮ್ಮ ಅಭ್ಯರ್ಥಿ ಹಾಕಿ ಅವರಿಗೆ ಮತ ಹಾಕದಿರುವುದು ಇದು ಎಂತಹ ಪಕ್ಷ. ಮೈಸೂರು ಭಾಗದಲ್ಲಿನ ಕಾಂಗ್ರೆಸ್​ನ ಹೀನಾಯ ಸ್ಥಿತಿಯನ್ನ ತೋರಿಸುತ್ತದೆ. ತಮ್ಮ ಅಭ್ಯರ್ಥಿ ಪರ ತಾವೇ ಮತ ಹಾಕದಂತೆ ಕಾಂಗ್ರೆಸ್​ಗೆ ಕೈಕಟ್ಟಿ ಹಾಕಿದವರು ಯಾರು(?) ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ನಾವು ನಮ್ಮ ಪ್ರಯತ್ನ ಮಾಡಿದ್ದೆವು. ಆದರೆ, ಸಂಖ್ಯೆಯ ದೃಷ್ಟಿಯಲ್ಲಿ ಫಲ ಕೊಡಲಿಲ್ಲ. ಹಾಗಂತ ನಮಗೆ ಯಾವುದೇ ಬೇಸರ ಇಲ್ಲ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಹೇಳಿದ್ದಾರೆ.

Next Story

RELATED STORIES