Top

ನಿಮ್ಮ ಮನೆ ಮುಂದೆ ದೇಣಿಗೆಗೆ ಬಂದವರು ರಾಮಭಕ್ತರು ಸ್ವಾಮಿ, ರೌಡಿಗಳಲ್ಲ - ನಳೀನ್​ ಕುಮಾರ್ ಕಟೀಲ್

ರಾಮ ಮಂದಿರ ಕಟ್ಟಲು ದೇಣಿಗೆಗೆ ರಾಮ ಭಕ್ತರು ಬಂದಿದ್ದು ವಿನಹಃ ರೌಡಿಸಂ ಮಾಡಲಿಕ್ಕೆ ಅಲ್ಲ

ನಿಮ್ಮ ಮನೆ ಮುಂದೆ ದೇಣಿಗೆಗೆ ಬಂದವರು ರಾಮಭಕ್ತರು ಸ್ವಾಮಿ, ರೌಡಿಗಳಲ್ಲ - ನಳೀನ್​ ಕುಮಾರ್ ಕಟೀಲ್
X

ಹಾಸನ: ರಾಮನ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಸ್ವಾಮೀ, ಇನ್ನೊಬ್ಬರು ಹಾಸನದವರು, ನಿಂಬೆ ಹಣ್ಣು ಕೈಯಲ್ಲಿ ಇಟ್ಟುಕೊಂಡವರು. ಮುಖ್ಯ ಮಂತ್ರಿಗಳಾಗಿದ್ದಾಗ ಹಣ ತೆಗೆದುಕೊಂಡರು ಅಂತ ಮಾತನಾಡುತ್ತಾರೆ ಎಂದು ಹಾಸನ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್ ಅವರು ಹೆಚ್​.ಡಿ ರೇವಣ್ಣ ವಿರುದ್ಧ ಮಾತನಾಡಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಮಭಕ್ತರು ಸ್ವಾಮಿ ನಿಮ್ಮ ಮನೆ ಮುಂದೆ ದೇಣಿಗೆಗೆ ಬಂದವರು, ರೌಡಿಗಳಲ್ಲ ಸ್ವಾಮಿ ಸುಪ್ರೀಂಕೋರ್ಟ್ ಹೇಳಿದ ಹಾಗೇ ರಾಮನ ಮಂದಿರ ಕಟ್ಟಲಿಕ್ಕೆ ಮುಂದಾಗಿರುವುದು. ನೀವು ಹಾಗಾದ್ರೆ ಸುಪ್ರೀಂಕೋರ್ಟ್​ಗೆ ತೀರ್ಪಿಗೆ ಬೆಲೆ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಕಟೀಲ್ ಅವರು ಟಾಂಗ್ ಕೊಟ್ಟಿದ್ದಾರೆ.

ಇನ್ನು ಕಾಂಗ್ರೆಸ್​ ಅಧ್ಯಕ್ಷರು ಬೇಲ್​ನಲ್ಲಿ ಇದ್ದಾರೆ. ನಾವು ರಾಮ ಭಕ್ತರು ಸ್ವಾಮಿ ಅದಕ್ಕೆ ದೇಣಿಗೆ ಬಂದಿದ್ದು ಸ್ವಾಮಿ, ರಾಮ ಮಂದಿರ ಕಟ್ಟಲು ದೇಣಿಗೆಗೆ ರಾಮ ಭಕ್ತರು ಬಂದಿದ್ದು ವಿನಹಃ ರೌಡಿಸಂ ಮಾಡಲಿಕ್ಕೆ ಅಲ್ಲ ಎಂದು ಹಾಸನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿದ್ದಾರೆ.

Next Story

RELATED STORIES