Top

ಬಿಜೆಪಿ ವಿರುದ್ದ ಹೋರಾಟ ಮಾಡಬೇಕು ಇದು ಕಾಂಗ್ರೆಸ್​ನಿಂದ ಮಾತ್ರ ಸಾಧ್ಯ - ಸಿದ್ದರಾಮಯ್ಯ

ಹಿಂದೂ-ಮುಸ್ಲಿಂ ಎಲ್ಲಾ ಸೌಹಾರ್ದ್ಯದಿಂದ ಇರಬೇಕು. ಇದೇ ಉದ್ದೇಶದಿಂದ ಅವರು ಹೋರಾಟ ಮಾಡಿದ್ದು

ಬಿಜೆಪಿ ವಿರುದ್ದ ಹೋರಾಟ ಮಾಡಬೇಕು ಇದು ಕಾಂಗ್ರೆಸ್​ನಿಂದ ಮಾತ್ರ ಸಾಧ್ಯ - ಸಿದ್ದರಾಮಯ್ಯ
X

ಬೆಂಗಳೂರು: ನಮ್ಮ ದೇಶದ ಮತಾಂಧರ ನಾಥುರಾಮ್​ ಗೋಡ್ಸೆ ಗಾಂಧೀಜಿಯನ್ನು ಕೊಂದ. ನಮಸ್ಕಾರ ಮಾಡೋಕೆ ಬಂದು ಎದೆಗೆ ಗುಂಡು ಹಾರಿಸಿದ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಹಾತ್ಮ ಗಾಂಧಿ ಹತ್ಯೆ ಬಗ್ಗೆ ಮಾತನಾಡಿದ್ದಾರೆ

ನಗರದಲ್ಲಿಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಬಂದ ಮನು, ಅಭಿ ತಡೆಯಲು ಬಂದು ಪ್ರಾಣಕೊಟ್ಟರು. ಅವರು ಜನವರಿ 15ರಂದು ಉಪವಾಸ ಆರಂಭಿಸಿದರು. ಸತ್ಯಾಗ್ರಹ ಆರಂಭ ಮಾಡಿದ್ದು ಕೂಡ ಸಾಮರಸ್ಯಕ್ಕಾಗಿ, ಗಲಭೆ ಶಾಂತವಾದ ಬಳಿಕ ಉಪವಾಸ ನಿಲ್ಲಿಸಿದರು. ಆಗ ಅವರು ವೀಕ್ ಆಗಿದ್ರು ಈ ಮತಾಂಧ ಗೋಡ್ಸೆ ಸಮಯ ನೋಡಿ ಹತ್ಯೆ ಮಾಡಿದ ಎಂದಿದ್ದಾರೆ.

ಮಹಾತ್ಮ ಗಾಮ ದೇಶದಲ್ಲಿ ಸಾಮರಸ್ಯ ಕಾಪಾಡಬೇಕು. ಹಿಂದೂ-ಮುಸ್ಲಿಂ ಎಲ್ಲಾ ಸೌಹಾರ್ದ್ಯದಿಂದ ಇರಬೇಕು. ಇದೇ ಉದ್ದೇಶದಿಂದ ಅವರು ಹೋರಾಟ ಮಾಡಿದ್ದು ಎಂದು ಹೇಳಿದರು.

ಸದ್ಯ ದೇಶದಲ್ಲಿ ಯಾರೂ ನೆಮ್ಮದಿಯಿಂದ ಇಲ್ಲ. ರೈತರು, ಕಾರ್ಮಿಕರ ವಿರುದ್ಧ ಕಾಯ್ದೆ ತಂದಿದೆ. ಬಿಜೆಪಿಯವರನ್ನು ಅಧಿಕಾರದಿಂದ ದೂರವಿಡಬೇಕು ಅದಕ್ಕಾಗಿ ಎಲ್ಲಾ ಪ್ರಯತ್ನಗಳನ್ನ ಮಾಡಬೇಕು. ಬಿಜೆಪಿ ವಿರುದ್ದ ಹೋರಾಟ ಮಾಡಬೇಕು. ಅದು ಕಾಂಗ್ರೆಸ್​ನಿಂದ ಮಾತ್ರ ಸಾಧ್ಯ ಇದಕ್ಕೆ ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೈ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

Next Story

RELATED STORIES