Top

ಯಾವುದರ ಮೇಲೂ ಒಂದೇ ಒಂದು ರೂಪಾಯಿ ತೆರಿಗೆ ಹಾಕಿಲ್ಲ - ಸಿಎಂ ಬಿಎಸ್​ವೈ

ಸಂಕಷ್ಟದ ಸವಾಲುಗಳಿಗೆ ಪರಿಹಾರವಾಗಬಲ್ಲ ಸಮತೋಲಿತ ಬಜೆಟ್ ಇದಾಗಿದೆ.

ಯಾವುದರ ಮೇಲೂ ಒಂದೇ ಒಂದು ರೂಪಾಯಿ ತೆರಿಗೆ ಹಾಕಿಲ್ಲ - ಸಿಎಂ ಬಿಎಸ್​ವೈ
X

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭ ಸಂದರ್ಭದಲ್ಲಿ ರಾಜ್ಯದ ಅಕ್ಕ-ತಂಗಿಯರಿಗೆ, ತಾಯಂದಿರಿಗೆ ಶುಭಾಶಯ ಕೋರುವೆ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಸೋಮವಾರ ಹೇಳಿದ್ದಾರೆ.

ರಾಜ್ಯ ಬಿಜೆಟ್​ ಮಂಡನೆ ಮಾಡಿದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ನಾನು 8ನೇ ಬಾರಿಗೆ ಆಯವ್ಯಯ ಮಂಡನೆ ಮಾಡಿದ್ದೇನೆ. ಅತ್ಯಂತ ಸಂಕಷ್ಟದ ಸನ್ನಿವೇಶದಲ್ಲಿ ರೂಪಿಸಲಾದ ಆಯವ್ಯಯ ಇದು ಎಂದಿದ್ದಾರೆ.

ಇನ್ನು ನೈಸರ್ಗಿಕ ವಿಕೋಪ, ಪ್ರವಾಹ, ಕೋವಿಡ್ 19ನಿಂದ ರಾಜ್ಯ ತಲ್ಲಣಗೊಂಡಿತ್ತು. ಸಂಗ್ರಹಣೆಗೆ ಇದರಿಂದ ದೊಡ್ಡದ ಪೆಟ್ಟು ಬಿದ್ದಿದೆ. ಆದರೂ ಧೃತಿ ಗೆಡದೇ ಸಂಬಳ, ಸಾಲ ಮರುಪಾವತಿ ಮಾಡುವ ನಿಟ್ಟಿನಲ್ಲಿ ನ್ಯಾಯ ಒದಗಿಸಿದ್ದೇನೆ ಎಂದು ಹೇಳಿದರು.

ಸದ್ಯ ವಿತ್ತಿಯ ಶಿಸ್ತು ಕಾಪಾಡಿಕೊಳ್ಳುವುದರ ಜೊತೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ಕಾರಣ, ಅಭಿವೃದ್ಧಿ ಹಾಗೂ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನದ ಕೊರತೆ ಆಗದಂತೆ ಎಚ್ಚರಿಕೆವಹಿಸಲಾಗಿದೆ. ಸಂಕಷ್ಟದ ಸವಾಲುಗಳಿಗೆ ಪರಿಹಾರವಾಗಬಲ್ಲ ಸಮತೋಲಿತ ಬಜೆಟ್ ಇದಾಗಿದೆ ಎಂದು ಅವರು ತಮ್ಮ ಬಜೆಟ್​ಅನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಪ್ರತಿಕೂಲ ಸಂದರ್ಭದಲ್ಲಿ ಸರ್ವ ವ್ಯಾಪಿ, ಸರ್ವ ಸ್ಪರ್ಷಿ ಬಜೆಟ್ ಮಂಡಿಸುವ ಸಾಹಸ ಮಾಡಿದ್ದೇನೆ. ಈ ವರ್ಷ ಶೇ.3.5ರಷ್ಟು ಬಜೆಟ್ ಹೆಚ್ಚಳ ಆಗಿದೆ. ಯಾವುದರ ಮೇಲೂ ಒಂದೇ ಒಂದು ರೂಪಾಯಿ ತೆರಿಗೆ ಹಾಕಿಲ್ಲ, ಇಂತಹ ಸಂಕಷ್ಟದ ಸಂದರ್ಭದಲ್ಲಿಯೂ ಒಂದು ಪೈಸೆ ತೆರಿಗೆ ಹಾಕದೇ ಬಜೆಟ್ ಮಂಡನೆ ಮಾಡಿದ್ದೇನೆ. ಇದು ಇತಿಹಾಸದಲ್ಲಿ ಯೇ ಮೊದಲಿರಬಹುದು ಎಂದಿದ್ದಾರೆ.

ಮಹಿಳೆಯರ ಸ್ವಾವಲಂಬನೆ, ಸುರಕ್ಷತೆಗೆ ಆದ್ಯತೆ ನೀಡಿ ಯೋಜನೆಗಳನ್ನು ರೂಪಿಸಲಾಗಿದೆ. ದೇಶ ಕಟ್ಟುವ ಕಾಯಕದಲ್ಲಿ ಮಹಿಳೆಯರು ಸಕ್ರಿಯವಾಗಿ ತೊಡಗಲು ಅವಕಾಶ ನೀಡಲಾಗಿದೆ. 2 ಕೋಟಿ ರೂ. ವರೆಗೆ ಸಾಲ ಒದಗಿಸುವುದಾಗಿ ಘೋಷಣೆ ಮಾಡಿದ್ದೇನೆ ಎಂದು ಸಿಎಂ ಬಿಎಸ್​ವೈ ಅವರು ತಮ್ಮ ಬಜೆಟ್​ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬರುವ ಚುನಾವಣೆಯಲ್ಲಿ ನಾವು 135 ಸ್ಥಾನ ಗೆದ್ದು, ಸಿದ್ದರಾಮಯ್ಯರನ್ನು ವಿರೋಧ ಪಕ್ಷದಲ್ಲಿ ಕೂರಿಸುತ್ತೇನೆ

ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ಬಾಯ್ಕಾಟ್ ಹಿನ್ನೆಲೆ ಬಗ್ಗೆ ಸಿಎಂ ಬಿಎಸ್​ವೈ ಮಾತನಾಡಿದ ಅವರು, ದೇಶದಲ್ಲಿ ಯಾವುದಾದರೂ ವಿರೋಧ ಪಕ್ಷ ಬಜೆಟ್ ಮಂಡನೆ ವೇಳೆ ಬಾಯ್ಕಾಟ್ ಮಾಡಿರುವ ಉದಾಹರಣೆ ಇದೆಯಾ(?) ನಾನು ಸಿದ್ದರಾಮಯ್ಯಗೆ ಸವಾಲು ಹಾಕ್ತೇನೆ. ಬರುವ ಚುನಾವಣೆಯಲ್ಲಿ ನಾವು 135 ಸ್ಥಾನ ಗೆದ್ದು, ಸಿದ್ದರಾಮಯ್ಯರನ್ನು ವಿರೋಧ ಪಕ್ಷದಲ್ಲಿ ಕೂರಿಸುತ್ತೇನೆ. ಇಲ್ಲ ಅಂದರೆ ನೀವು ನನ್ನನ್ನು ಯಡಿಯೂರಪ್ಪ ಅಂತಾ ಕರೀಬೇಡಿ. ಏನು ನೈತಿಕತೆ ಅಂತಾ ಅವರು ಪ್ರಶ್ನೆ ಮಾಡೋದು ಅವರ ತಲೆ ಎಂದು ಸಿಎಂ ಬಿಎಸ್​ವೈ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

Next Story

RELATED STORIES