Top

ಎಂಪಿಗಳ ಕ್ಷೇತ್ರಕ್ಕೆ ಸಂಬಳ ಇಲ್ಲ ಅದು ಕೂಡ ಕಡಿತವಾಗಿದೆ - ವಿ.ಶ್ರೀನಿವಾಸ್ ಪ್ರಸಾದ್

ಪಂಚಮಶಾಲಿಗಳು ನಮ್ಮ ಪಕ್ಷದ ಬೆನ್ನೆಲುಬು. ಅವರು ನಮ್ಮನ್ನ 2ಎಗೆ ಸೇರಿಸುವಂತೆ ತಿರುಗಿಬಿದ್ದಿದ್ದಾರೆ ಅವರನ್ನ ಸೇರಿಸುತ್ತೀರೇನು(?)

ಎಂಪಿಗಳ ಕ್ಷೇತ್ರಕ್ಕೆ ಸಂಬಳ ಇಲ್ಲ ಅದು ಕೂಡ ಕಡಿತವಾಗಿದೆ - ವಿ.ಶ್ರೀನಿವಾಸ್ ಪ್ರಸಾದ್
X

ಮೈಸೂರು: ಮೀಸಲಾತಿ ಬಗ್ಗೆ ಸರ್ಕಾರಕ್ಕೆ ಸ್ಪಷ್ಟವಾದ ನಿಲುವಿಲ್ಲ. ಪ್ರತಿ ಜಾತಿ ಜನಾಂಗವು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಸರ್ಕಾರ ಇದರ ಬಗ್ಗೆ ಎಲ್ಲಾದರು ಹೇಳಿಕೆ ಕೊಟ್ಟಿದೆಯೆ(?) ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್​ ಪ್ರಸಾದ್ ಅವರು ಶುಕ್ರವಾರ ಹೇಳಿದ್ದಾರೆ.

ಹಲವು ಸಮುದಾಯಗಳ ಮೀಸಲಾತಿ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಸಂವಿಧಾನ ಬದ್ದವಾಗಿ ಮೀಸಲಾತಿ ಬಗ್ಗೆ ನಿರ್ಣಯ ಕೈಗೊಳ್ಳಲು ಅಧಿಕಾರ ಇದೆ. ಈಗಂತ ಎಲ್ಲಾದರು ಸರ್ಕಾರ ಸ್ಪಷ್ಟವಾಗಿ ಹೇಳಿದ್ದಾರಾ(?) ಇದು ಕೇಂದ್ರ ಸರ್ಕಾರಕ್ಕೆ ಸೇರಿದ್ದು. ಇದರ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಬೇಕು. ಸಮಿತಿ ರಚನೆ ಮಾಡಿ ಅದನ್ನು ಜಾರಿಗೆ ತರಲು ದಾಖಲೆ ಕೊಡಬೇಕು. ಬಳಿಕ ಅದನ್ನ ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡಿ ಕೇಂದ್ರಕ್ಕೆ ಕಳುಹಿಸುತ್ತೇವೆ. ಇದು ಮಾತ್ರ ನಮ್ಮಿಂದ ಸಾದ್ಯ ಅಂತ ಸರ್ಕಾರ ಹೋರಾಟಗಾರರಿಗೆ ಹೇಳಿದ್ಯಾ(?). ವೇದಿಕೆಯಲ್ಲಿ ಕೇಳಿದಾಗಲೆಲ್ಲ ಮೀಸಲಾತಿ ಕೊಡಲು ಆಗಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದೀರಾ(?) ಮೊದಲು ಇದನ್ನ ಸರ್ಕಾರ ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ಪಂಚಮಶಾಲಿಗಳು ನಮ್ಮ ಪಕ್ಷದ ಬೆನ್ನೆಲುಬು. ಅವರು ನಮ್ಮನ್ನ 2ಎಗೆ ಸೇರಿಸುವಂತೆ ತಿರುಗಿಬಿದ್ದಿದ್ದಾರೆ ಅವರನ್ನ ಸೇರಿಸುತ್ತೀರೇನು(?) 2ಎಯಲ್ಲಿಇರುವವರಿಗೆ ಹಾಗಿದ್ರೆ ಮೀಸಲಾತಿ ಹೆಚ್ಚು ಮಾಡ್ತಿರಾ(?) ಹಾಗೆ ಮಾಡಲು ಸಂವಿಧಾನದಲ್ಲಿ ಅವಕಾಶ ಇದೆಯೆ(?) ಈ ವಿಚಾರವಾಗಿ ಸರ್ಕಾರದ ಸ್ಪಷ್ಟ ನಿಲುವು ಬೇಡವೆ(?) ಈ ವಿಚಾರದಲ್ಲಿ ಎಲ್ಲರೂ ಗೊಂದಲದಲ್ಲಿದ್ದೇವೆ. ಸರ್ಕಾರ ಬಂದು ಎರಡು ವರ್ಷ ಆಗಿದೆ. ಎಲ್ಲೆಲ್ಲಿ ನಾಯಕತ್ವದ ಕೊರತೆ ಇದೆ ಜನಾಂಗ ಸಮಸ್ಯೆ ಇದೆ. ಯಾವ ಜನಾಂಗಕ್ಕೆ ಪ್ರಾತಿನಿಧ್ಯ ಕೊಡಬೇಕು ಅನ್ನೋದನ್ನ ಅಲೋಚನೆ ಮಾಡಿದ್ದಿರೇನು(?) ನಿಮ್ಮ ವಿಮ್ಸ್ ಅಂಡ್ ಫ್ಯಾನ್ಸಿ ಬರೆದು ಹಾಕಿಬಿಡೋದಾ(?) ಇದೆಲ್ಲಾ ಸರ್ಕಾರಕ್ಕೆ ಒಳ್ಳೆಯದಲ್ಲ ಎಂದು ಮೈಸೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ದ ಸಂಸದ ಶ್ರೀನಿವಾಸ್​ ಪ್ರಸಾದ್ ಅವರು ಎಚ್ಚರಿಕೆ ನೀಡಿದ್ದಾರೆ.

ಕೊವೀಡ್​ನಿಂದ ಇಡೀ ರಾಷ್ಟ್ರ ತತ್ತರಿಸಿ ಹೋಗಿದೆ. ರೈತರ ದೊಡ್ಡ ಚಳುವಳಿಯಾಗುತ್ತಿದೆ. ಎಂಪಿಗಳ ಕ್ಷೇತ್ರಕ್ಕೆ ಸಂಬಳ ಇಲ್ಲ ಅದು ಕೂಡ ಕಡಿತವಾಗಿದೆ. ಅಭಿವೃದ್ಧಿಗೆ ಹಣ ಬರ್ತಾ ಇಲ್ಲ. ಮೋದಿಯವರ ಮೇಲೆ ವಿಶ್ವಾಸವಿಟ್ಟು ಜನ ಎರಡನೇ ಬಾರಿ ಗೆಲ್ಲಿಸಿದ್ದಾರೆ ಇದನ್ನ ನಾವು ಉಳಿಸಿಕೊಳ್ಳಬೇಕು. ನಾವು ಪಕ್ಷದ ಸಂಘಟನೆಗೆ ದುಡಿದಿರುವಂತವರು ಅದಕ್ಕೆ ಇವತ್ತು ಕಾರ್ಯಕಾರಣಿಯಲ್ಲಿರುವವರು. ನಮ್ಮ ಬಿಚ್ಚು ಮನಸ್ಸಿನ ಸಲಹೆ ನಾಯಕರಿಗೆ ತಿಳಿಸೋಣ. ಮೀಸಲಾತಿ ವಿಚಾರವಾಗಿ ಸರ್ಕಾರ ಹಿಂದೇಟಾಕದೇ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ನಮ್ಮ ಹೇಳಿಕೆಗಳು ಸ್ಪಷ್ಟವಾಗಿರಬೇಕು ಎಂದು ಮೈಸೂರಿನಲ್ಲಿ ವಿ.ಶ್ರೀನಿವಾಸ್​ ಪ್ರಸಾದ್ ಅವರು ಮಾತನಾಡಿದ್ದಾರೆ.

Next Story

RELATED STORIES