Top

ಕಿಂಗ್ ಮೇಕರ್ ಸ್ಥಾನ ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ - ಮಾಜಿ ಸಿಎಂ ಹೆಚ್ಡಿಕೆ

ಜಿ.ಟಿ ದೇವೇಗೌಡ, ಸಂದೇಶ್ ನಾಗರಾಜ್ ನಮ್ಮ ಅಭ್ಯರ್ಥಿಗೆ ಮತ ಹಾಕ್ತಾರೆ

ಕಿಂಗ್ ಮೇಕರ್ ಸ್ಥಾನ ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ - ಮಾಜಿ ಸಿಎಂ ಹೆಚ್ಡಿಕೆ
X

ಮೈಸೂರು: ಕಾಂಗ್ರೆಸ್ ಮೈತ್ರಿ ಮುರಿದು ಬಿಳಲು ಸಿದ್ದರಾಮಯ್ಯ ನೇರ ಕಾರಣ. ಅವರ ಮಾತುಗಳಿಂದಲೇ ಈ ಮೈತ್ರಿ ಮುರಿದು ಬಿದ್ದಿದೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಬುಧವಾರ ಹೇಳಿದ್ದಾರೆ.

ಮೈಸೂರು ಮೇಯರ್​-ಉಪಮೇಯರ್​ ಚುನಾವಣೆ ಹಿನ್ನೆಲೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಕಳೆದ ಬಾರಿ ಅವರ ಒತ್ತಡದಿಂದಲೇ ಮೇಯರ್ ಸ್ಥಾನ ಬಿಟ್ಟು ಮೈತ್ರಿ ಆಗಿದ್ವಿ. ಈಗ ಅವರ ಹೇಳಿಕೆಗಳಿಂದ ಬೇಸತ್ತು ಮೈತ್ರಿ ಮುರಿದುಕೊಂಡಿದ್ದೇವೆ ಎಂದರು.

ಸದ್ಯ ನಾವು ಯಾರೊಂದಿಗೂ ಹೋಗೋಲ್ಲ. ನಾವು ನಾಮಪತ್ರ ಸಲ್ಲಿಸುತ್ತೇವೆ. ನೋಡೋಣ ಯಾರಿಗೆ ಅವಕಾಶ ಇದೆ ಅವರು ಮೇಯರ್ ಆಗ್ತಾರೆ ಎಂದು ಹೇಳಿದರು.

ದೇವೇಗೌಡರು ಯಾರೊಂದಿಗೂ ಹೊಂದಾಣಿಕೆ ಬೇಡ ಅಂದಿದ್ದಾರೆ. ಎರಡು ಪಕ್ಷಗಳಿಂದ ಅಂತರ ಕಾಯ್ದುಕೊಳ್ಳಲು ಹೇಳಿದ್ದಾರೆ. ಅದಕ್ಕಾಗಿ ನಾವು ಯಾರ ಜೊತೆ ಗು ಮೈತ್ರಿ ಆಗಿಲ್ಲ. ಎರಡು ಪಕ್ಷಗಳಿಂದ ನಮಗೆ ಅನ್ಯಾಯ ಆಗಿದೆ. ಹಾಗಾಗಿ ನಮ್ಮ ಶಕ್ತಿ ತೋರಿಸುವ ಸಂದರ್ಭ ಬಂದಿದೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಬೇಕಿದೆ. ಅದಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೆಚ್ಡಿಕೆ ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕವನ್ನು ಅತ್ಯಂತ ಲಘುವಾಗಿ ಕಾಣುತ್ತಿರುವ ಪಕ್ಷ ಬಿಜೆಪಿ. ಈ ಹಿನ್ನೆಲೆ ಎರಡು ಪಕ್ಷದಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದೇವೆ. ಅಕ್ಕಪಕ್ಕದ ರಾಜ್ಯಗಳಂತೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಬೇಕು. ಕೆಲವರು ನಮ್ಮನ್ನ ಬಿ ಟೀಮ್ ಎಂದು ಕರೆದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನ ಗಳಿಸಲು ಕಾರಣವಾದ್ರೂ ಎಂದಿದ್ದಾರೆ.

ಜಿ.ಟಿ ದೇವೇಗೌಡರು ಪರಿವರ್ತನೆ ಬಗ್ಗೆ ಮಾತನಾಡಿದ ಅವರು, ಹಲವಾರು ಸಂದರ್ಭದಲ್ಲಿ ಹಲವಾರು ನಾಯಕರು ಪರಿವರ್ತನೆ ಅಗೋದನ್ನ ನೋಡಿದ್ದೇವೆ. ಪರಿವರ್ತನೆ ಆಗಲು ಅವರಿಗೆ ಬಿಟ್ಟಿದ್ದು. ಈಗಾಗಲೇ ಪಕ್ಷ ಬಿಟ್ಟು ಹೋದಮೇಲೆ ಏನಾಗುತ್ತೆ ಎಂದು ಈಗಾಗಲೇ ಅವರಿಗೆ ಗೊತ್ತಾಗಿದೆ ಎಂದು ಹೇಳಿದರು.

ಕಾಂಗ್ರೆಸ್​ನ ಎಲ್ಲ ನಾಯಕರು ಲಘುವಾಗಿ ಮಾತನಾಡಲ್ಲ. ಆದರೆ, ಕೆಲವರು ಲಘವಾಗಿ ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರ ಪದೇ ಪದೇ ನಮ್ಮ ಪಕ್ಷವನ್ನು ಕೆಣಕುವ ಹೇಳಿಕೆಗಳೇ ನೀಡುತ್ತಿದ್ದಾರೆ. ಜಿ.ಟಿ ದೇವೇಗೌಡ, ಸಂದೇಶ್ ನಾಗರಾಜ್ ನಮ್ಮ ಅಭ್ಯರ್ಥಿಗೆ ಮತ ಹಾಕ್ತಾರೆ. ಡಿ.ಕೆ ಶಿವಕುಮಾರ್ ಮೇಲು ಒತ್ತಾಯ ಹಾಕಿ ಕೈಕಟ್ಟಿಹಾಕಿದ್ದಾರೆ(ಸಿದ್ದರಾಮಯ್ಯ). ಕಿಂಗ್ ಮೇಕರ್ ಸ್ಥಾನ ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ಗುರಿ 2023, ಯಾರು ಲಘುವಾಗಿ ಮಾತನಾಡುತ್ತಿದ್ದರು ಅವರಿಗೆ ಉತ್ತರ ಕೊಡಲು ಹೊರಟಿದ್ದೇವೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ.

Next Story

RELATED STORIES